ಕೃಷ್ಣಾ ನದಿಗೆ ಭಾಗಶಃ ಮುಳುಗಡೆಯಾಗಿರುವ ತೇರದಾಳ ಸಮೀಪದ ತಮದಡ್ಡಿ ಗ್ರಾಮಕ್ಕೆ ಮಾಜಿ ಸಚಿವೆ ಉಮಾಶ್ರೀ ಭೇಟಿ ನೀಡಿದರು.

       ಪುನರ್‍ವಸತಿ ಕಲ್ಪಿಸಲು ಮಾಜಿ ಸಚಿವೆ ಉಮಾಶ್ರೀ ಒತ್ತಾಯ

ತೇರದಾಳ : ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಹಾರಾಷ್ಟ್ರ ಭಾಗಗಳಲ್ಲಿ ಆತಂಕ ಸೃಷ್ಟಿಯಾಗಿತ್ತು. ಬೆಳಗಾವಿ ಹಾಗೂ ಬಾಗಲಕೋಟ ಜಿಲ್ಲೆಯಲ್ಲಿ ಕೃಷ್ಣಾ ನದಿ ಹರಿಯುವ ನದಿ ಪಾತ್ರದಲ್ಲಿ ಬರುವಂತ ಗ್ರಾಮಗಳ ಜನ ಜಾನವಾರುಗಳಿಗೆ ಹಾನಿಯಾಗಬಹುದು ಎಂಬ ಆತಂಕ ಸೃಷ್ಟಿ ಯಾಗಿತ್ತು. ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಮಳೆ ಕಡಿಮೆಯಾಗಿದೆ. ಈ ನಾಲ್ಕು ದಿನಗಳ ಹಿಂದೆಯಿದ್ದ ಆತಂಕ ಈಗ ಕಾಣುತ್ತಿಲ್ಲ ಎಂಬ ಸುದ್ದಿ ತಿಳಿದಿದೆ. ಆದರೂ ಜನ, ಜಾನವಾರು ಹಾಗೂ ತಮ್ಮ ಮಕ್ಕಳ ರಕ್ಷಣೆಯಾಗಬೇಕು ಎಂದು ಮಾಜಿ ಸಚಿವೆ ಉಮಾಶ್ರೀ ಹೇಳಿದರು.

  ಸಮೀಪದ ಕೃಷ್ಣಾ ನದಿ ಪ್ರವಾಹಕ್ಕೆ ಒಳಗಾದ ತಮದಡ್ಡಿ ಗ್ರಾಮಕ್ಕೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪ್ರತಿ ವರ್ಷವು ಕೂಡಾ ಈ ರೀತಿ ಪ್ರವಾಹ ಬಂದಾಗ ನದಿ ಪಾತ್ರದ ಜನರಿಗೆ ಅನಾನುಕೂಲವಾಗುವುದು. ಪ್ರವಾಹ ಬಂದಾಗ ಪ್ರಾಣಿಗಳಿ ಬಹಳಷ್ಟು ತೊಂದರೆಯಾಗುತ್ತದೆ. ಮೇವು ಸಂಗ್ರಹಣೆ ಕಡೆಗೆ ಅಧಿಕಾರಿಗಳು ಹೆಚ್ಚು ಗಮನಹರಿಸಬೇಕು. ನಮ್ಮ ಸರಕಾರವಿದ್ದಾಗ ತಮದಡ್ಡಿ ಗ್ರಾಮಕ್ಕೆ 89ಎಕರೆ 39ಗುಂಟೆ ಜಾಗೆಯನ್ನು ಕಾಯ್ದಿರಿಸಲಾಗಿದೆ. ಪುನರ್ವಸತಿ ಕೇಂದ್ರ ನಿರ್ಮಿಸಲು ಆ ಜಾಗೆಯನ್ನು ಕ್ರಮಬದ್ಧವಾಗಿ ಅನುಮೋದನೆ ಮಾಡಿ ಕೊಡಲಾಗಿದೆ. ಅಧಿಕಾರಿಗಳು ಈ ಕೆಲಸ ಶೀಘ್ರವಾಗಿ ಆಗಬೇಕು ಎಂದು ಸಂತ್ರಸ್ಥರ ಪರವಾಗಿ ಒತ್ತಾಯ ಮಾಡುತ್ತೇನೆ ಎಂದರು. 

  ಈ ಸಂದರ್ಭದಲ್ಲಿ ನೋಡಲ್ ಅಧಿಕಾರಿ ಅಶೋಕ ಗುಡಿಮನಿ, ಅಶೋಕ ಅಳಗೊಂಡ, ಮಧು ಕಾಂಬಳೆ ಸೇರಿದಂತೆ ತಮದಡ್ಡಿಯ ಸಂತ್ರಸ್ಥರು ಇದ್ದರು.