ತೇರದಾಳದ ಕುಡಚಿ ರಸ್ತೆಯಲ್ಲಿರುವ ಜಿಎಲ್‍ಬಿಸಿ ಇಲಾಖೆಗೆ ಸಂಭಂದಿಸಿದ ಜಾಗಕ್ಕೆ ಕಂಪೌಂಡ ಗೋಡೆ ನಿರ್ಮಿಸಲು ಭೂಮಿ ಪೂಜೆಯನ್ನು ಶಾಸಕ ಸಿದ್ದು ಸವದಿ ನೆರವೇರಿಸಿದರು.
ಜಿಎಲ್‍ಬಿಸಿ ಜಾಗಕ್ಕೆ ಕಂಪೌಂಡ ನಿರ್ಮಾಣಕ್ಕೆ ಭೂಮಿ ಪೂಜೆ
ತೇರದಾಳ : 2019-20ನೇ ಸಾಲಿನ 4701 ಲೆಕ್ಕ ಶೀರ್ಷಿಕೆ ಅಡಿಯಲ್ಲಿ ಅನುಮೋದನೆಗೊಂಡ ತೇರದಾಳ ಪಟ್ಟಣದ ಕುಡಚಿ ರಸ್ತೆಯಲ್ಲಿರುವ ಜಿಎಲ್‍ಬಿಸಿ ಇಲಾಖೆಗೆ ಸಂಭಂದಿಸಿದ 1 ಎಕರೆ ಜಾಗಕ್ಕೆ 18 ಲಕ್ಷ ರೂ. ಅನುದಾನದಲ್ಲಿ ಕಂಪೌಂಡ ಗೋಡೆ ನಿರ್ಮಿಸಲು ಭೂಮಿ ಪೂಜೆಯನ್ನು ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ಸಿದ್ದು ಸವದಿ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ತೇರದಾಳ ಮತಕ್ಷೇತ್ರ ಮೂಲ ಸೌಲಭ್ಯಗಳಿಗಾಗಿ ರಬಕವಿ-ಬನಹಟ್ಟಿ ನಗರ ಸಭೆ, ತೇರದಾಳ ಪುರಸಭೆ, ಮಹಾಲಿಂಗಪೂರ ಪುರಸಭೆಗೆ ಸೇರಿ 40ಕೋಟಿ ರೂ. ಹಾಗೂ ನೀರಾವರಿ ಇಲಾಖೆಗೆ 20ಕೋಟಿ ಅನುದಾನ ಸಲುವಾಗಿ ಸರಕಾರಕ್ಕೆ ಪ್ರಸ್ತಾವಣೆ ಸಲ್ಲಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಇಲಾಖೆ ಎಇಇ ಆರ್.ಜೆ.ರಾಠೋಡ, ಎಇ ಗಳಾದ ಶ್ರೀಧರ ನಂದಿಹಾಳ, ಎಂ.ಬಿ ಮಾಳಿ, ನಗರ ಘಟಕ ಅಧ್ಯಕ್ಷ ಮಹಾವೀರ ಕೊಕಟನೂರ, ಪ್ರಭಾರಿ ಅಧ್ಯಕ್ಷ ರಾಮಣ್ಣ ಹಿಡಕಲ್ಲ, ಸದಾಶಿವ ಹೊಸಮನಿ, ಸಂತೋಷ ಜಮಖಂಡಿ, ಅಲ್ಲಪ್ಪ ಬಾಬಗೊಂಡ, ಸಚೀನ ಕೊಡತೆ, ವರ್ಧಮಾನ ಕಡಹಟ್ಟಿ, ಸಂಗಮೇಶ ಕಾಲತಿಪಿ, ರಮೇಶ ಧರೆನ್ನವರ, ಕೇದಾರಿ ಪಾಟೀಲ, ಸುಭಾಸ ಗಾಥಾಡೆ, ಅಲ್ಲಪ್ಪ ಮದಲಮಟ್ಟಿ ಸೇರಿದಂತೆ ಇನಿತರರು ಇದ್ದರು.

Social Plugin