ಕೇಂದ್ರ ಸಚಿವ ಸಂಪುಟ ವಿಸ್ತರಣೆ ಆಗಿದೆ. 
ಹೊಸ ಮಂತ್ರಿಗಣಕ್ಕೆ ಅಭಿನಂದನೆಗಳು.
- - - - - - -
ತಮ್ಮ ಮುಂದಿರುವುದು ಬರಿಯ ಸವಾಲಲ್ಲ; ದೇಶದ ಜೀವನ್ಮರಣದ ಪ್ರಶ್ನೆ. ದಯಮಾಡಿ ಕೈಲಾದಷ್ಟು ಕೆಲಸ ಮಾಡಿ.
ಹಿಂದಿನ ಸಂಪುಟದಲ್ಲಿದ್ದು ಕೈಬಿಡಲಾದ ಬಹುಪಾಲು ಮಂದಿ ಅಲ್ಲಿದ್ದರೆಂದು ಗೊತ್ತಾದದ್ದೇ ಇಂದು ಅವರನ್ನು ಕೈಬಿಟ್ಟ ಮೇಲೆ. ನೀವೂ ಅದೇ ಹಾದಿ ಹಿಡಿಯಬೇಡಿ. ಅಷ್ಟೇ ಪ್ರಾರ್ಥನೆ.
ನನಗೆ ಈ ವಿಸ್ತರಣೆಯಲ್ಲಿ ಖುಷಿ ಆದದ್ದು, ಅವರ ಪಕ್ಷದ ಐಟಿ ಸೆಲ್‍ನ ವೇಗ.
ಸಮಾರಂಭ ಮುಗಿದು ಕೆಲವೇ ಕ್ಷಣಗಳಲ್ಲಿ ಅಂಕಿ-ಸಂಖ್ಯೆ ಸಹಿತ ಪೋಸ್ಟ್ ಮಾಡಿದ್ದಾರೆ.
ತಂಡದಲ್ಲಿ 13ವಕೀಲರು, 6ವೈದ್ಯರು, 5ಇಂಜಿನಿಯರ್‌ಗಳು, 7ಸಿವಿಲ್ ಸರ್ವೀಸ್ ಅಧಿಕಾರಿಗಳು, 7ಮಂದಿ ಪಿಎಚ್ಡಿ ಹೊಂದಿರುವವರು, 3ಎಂಬಿಎಗಳು ಇದ್ದಾರಂತೆ; ತಂಡದ ಸರಾಸರಿ ಪ್ರಾಯ 58; ಮೊದಲ ಬಾರಿಗೆ ಸಂಪುಟದಲ್ಲಿ 11 ಮಂದಿ ಮಹಿಳೆಯರು.
ಹಾಗಾಗಿ, ಈ ಸಂಪುಟ Inclusive, Nari shakti, Youthful ಎಂದು ಘೋಷಿಸಿದ್ದಾರೆ.

ಪ್ರತಿಪಕ್ಷಗಳು ಏನಾದರೂ ಕಲಿಯುವುದಿದ್ದರೆ ಇದನ್ನು ಕಲಿಯಬಹುದು. 😷