ತೇರದಾಳ ಪಟ್ಟಣದಲ್ಲಿ ತೈಲ ಬೆಲೆ ಸೇರಿ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ವಿರೋಧಿಸಿ ಮಾಜಿ ಸಚಿವೆ ಉಮಾಶ್ರೀ ನೇತೃತ್ವದಲ್ಲಿ ಸೈಕಲ್ ಜಾಥಾ ಜರುಗಿತು.

ತೈಲ ಬೆಲೆ ಏರಿಕೆ ವಿರೋಧಿಸಿ ಸೈಕಲ್ ಜಾಥಾ

ತೇರದಾಳ : ಕೇಂದ್ರ ಹಾಗೂ ರಾಜ್ಯ ಸರಕಾರದ ವೈಪಲ್ಯ ಹಾಗೂ ಪೆಟ್ರೋಲ್, ಡೀಸೆಲ್ ಸೇರಿ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ವಿರೋಧಿಸಿ ಪಟ್ಟಣದಲ್ಲಿ ಇಂದು ಮಾಜಿ ಸಚಿವೆ ಉಮಾಶ್ರೀ ನೇತೃತ್ವದಲ್ಲಿ ಸೈಕಲ್ ಜಾಥಾ ನೆರವೇರಿತು.
   ಬಸ್ ನಿಲ್ದಾಣದಿಂದ ಆರಂಭವಾದ ಸೈಕಲ್ ಜಾಥಾಗೆ ಮಾಜಿ ಸಚಿವೆ ಉಮಾಶ್ರೀ ಚಾಲನೆ ನೀಡಿದರು. ಪಟ್ಟಣದ ಮುಖ್ಯ ಬೀದಿಗಳಲ್ಲಿ ಸೈಕಲ್ ಜಾಥಾ ಸಂಚರಿಸಿತು. ಜಾಥಾದ ಉದ್ದಕ್ಕೂ ಕೇಂದ್ರ ಹಾಗೂ ರಾಜ್ಯ ಸರಕಾರಗಳ ವಿರುದ್ಧ ಕಾರ್ಯಕರ್ತರು ಘೋಷಣೆ ಕೂಗಿದರು.
  ಜಾಥಾ ಮುಗಿದ ನಂತರ ದತ್ತ ಮಂಗಲ ಕಾರ್ಯಾಲಯದಲ್ಲಿ ಮಾತನಾಡಿದ ಮಾಜಿ ಸಚಿವೆ ಉಮಾಶ್ರೀ ದೇಶದಲ್ಲಿ ಜನರು ಹಸಿವುನಿಂದ ಸಾಯುತ್ತಿದ್ದಾರೆ. ಕಾರ್ಮಿಕರು ಕೂಲಿಯಿಲ್ಲದೆ ಸಾಯುತ್ತಿದ್ದಾರೆ. ಕೊರೊನಾ ಬಂದು ಸಾಕಷ್ಟು ಜನರು ಮರಣ ಹೊಂದಿದರೆ ಸಾಂತ್ವಾನ ಹೇಳುತ್ತಿಲ್ಲ, ಪರಿಹಾರ ಕೊಡುತ್ತಿಲ್ಲ ಮೋದಿ ಸರಕಾರ. ದೇಶದ ಜನರು ಕೇಳುತ್ತಿದ್ದಾರೆ ಪೆಟ್ರೋಲ್, ಡೀಸೆಲ್ ಬೆಲೆ ಇಳಿಸಿ. ಇದೆಲ್ಲ ಇಳಿದರೆ ರೈತರ ಬಾಳಿಗೆ ಒಂದಿಷ್ಟು ಜೀವ ಬಂದಂತಾಗುತ್ತದೆ. ಕಾರ್ಮಿಕರಿಗೆ ಉದ್ಯೋಗ ಸಿಗುತ್ತದೆ. ರೈತರು, ನೇಕಾರರು, ಕಾರ್ಮಿಕರು ಒಂದೊಕ್ಕೊಂದು ಸಂಭಂದವಿದೆ. ದಿನ ನಿತ್ಯ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಾಯಕ ಜೀವಿಗಳ ಬದುಕು ಮೂರಾಬಟ್ಟಿಯಾಗಿದೆ. ಎಲ್ಲಾ ಸಮಸ್ಯೆಗಳು ಬಂದಾಗ ಯಾವುದಕ್ಕೂ ಬಿಜೆಪಿ ಸರಕಾರ ಪರಿಹಾರ ಕಂಡು ಹಿಡಿಯಲಿಲ್ಲ. ಜನ ವಿರೋಧಿ ಸರಕಾರದಿಂದ ಜನರಿಗೆ ಒಳ್ಳೆ ಬಾಳಿಲ್ಲ, ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳು ಇಳಿಕೆಯಾಗಬೇಕು ಎಂದು ಒತ್ತಾಯ ಮಾಡುತ್ತೇವೆ. ಜನ ಜಾಗೃತಿಯಾಗಬೇಕು ಆದಷ್ಟು ಶೀಘ್ರವಾಗಿ ಈ ಬಿಜೆಪಿ ಸರಕಾರವನ್ನು ಕೇಂದ್ರ ಹಾಗೂ ರಾಜ್ಯದಲ್ಲಿ ಕಿತ್ತೊಗೆಯಬೇಕು ಎಂಬುದು ನಮ್ಮ ಕಾಂಗ್ರೆಸ್ ಸರಕಾರದ ಸಂದೇಶ ಎಂದರು.
   ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣ ದೇಸಾರಟ್ಟಿ, ಯುವ ದುರೀಣ ಪ್ರವೀಣ ನಾಡಗೌಡ, ಸಿದ್ದು ಕೊಣ್ಣೂರ, ಅಶೋಕ ಉಳ್ಳಾಗಡ್ಡಿ, ಪರಸಪ್ಪ ಮಾಸ್ತಿ, ಅಬೂಲ ಹಸನ್ ಪಕಾಲಿ, ಶಂಕರ ರೆಡ್ಡಿ, ಹನಮಂತ ರೋಡನ್ನವರ, ಗೌತಮ ರೋಡಕರ, ಫಜಲ್ ಅತಾರಾವುತ್, ಶೆಟ್ಟೆಪ್ಪ ಸುಣಗಾರ, ಸುರೇಶ ಕಬಾಡಗಿ, ರಾಜೇಸಾಬ ನಗಾರ್ಜಿ, ಶಿವಪ್ಪ ಖವಾಸಿ, ನೇಮಣ್ಣ ಸಾವಂತನವರ, ಅಶೋಕ ಹಾಡಕಾರ ಸೇರಿದಂತೆ ಹಲವಾರು ಕಾರ್ಯಕರ್ತರು ಇದ್ದರು.