ತೇರದಾಳ ಸಮೀಪದ ತಮದಡ್ಡಿ ಗ್ರಾಮದ ಸಂತ್ರಸ್ಥರನ್ನು ಪಟ್ಟಣದ ಶ್ರೀ ನೀಲಕಂಠೇಶ್ವರ ಶಿಕ್ಷಣ ಸಂಸ್ಥೆಗೆ ಸ್ಥಳಾಂತರಿಸಿದ ಅಧಿಕಾರಿಗಳು.
ತಮದಡ್ಡಿಯ 75 ಕುಟುಂಬಗಳ ಸ್ಥಳಾಂತರಿಸಿದ ಅಧಿಕಾರಿಗಳ ತಂಡ
ತೇರದಾಳ: ಸಮೀಪದ ನೆರೆ ಪೀಡಿತ ತಮದಡ್ಡಿ ಗ್ರಾಮದಲ್ಲಿ ಅಧಿಕಾರಿಗಳ ತಂಡ ಜನರನ್ನು ಮನವೊಲಿಸಿ ನೆರೆ ಬಾಧಿತ ಒಟ್ಟು 75 ಕುಟುಂಬಗಳನ್ನು ಪಟ್ಟಣದ ಕುರುಹಿನಶೆಟ್ಟಿ ನೀಲಕಂಠೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಪ್ರಾರಂಭಿಸಲಾದ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು.
ಈ ಸಂದರ್ಭದಲ್ಲಿ ಸುದ್ದಿಗಾರನುದ್ದೇಶಿಸಿ ಮಾತನಾಡಿದ ಗ್ರಾಮದ ಪ್ರಮುಖ ಬಸವರಾಜ ಲಕ್ಷ್ಮಣ ಯಾದವಾಡ ಕೃಷ್ಣಾ ನದಿ ತಟದಲ್ಲಿರುವ ನಮ್ಮ ಗ್ರಾಮ ಪದೇ-ಪದೇ ನೆರೆಹಾವಳಿಗೆ ತುತ್ತಾಗುತ್ತಿದ್ದು, ಜನ-ಜಾನುವಾರಗಳೊಂದಿಗೆ ಪ್ರತಿ ವರ್ಷ ರಸ್ತೆಯ ಪಕ್ಕದಲ್ಲಿಯೇ ಅರ್ಧ ಜೀವನವನ್ನು ಕಳೆಯುತ್ತಿರುವ ನಮ್ಮವರ ಗೋಳು ಹೇಳತೀರದಾಗಿದ್ದು ಪ್ರವಾಹದ ಸೆಳೆತಕ್ಕೆ ಸಿಲುಕಿ ವಾಸಿಸುವ ಮನೆಗಳು ಕೂಡ ಅಭದ್ರವಾಗಿದ್ದು ನಿತ್ಯ ಭಯದಲ್ಲಿಯೇ ಜೀವನವನ್ನು ಕಳೆಯುವಂತಾಗಿದ್ದು ಈಗಾಗಲೇ ಸರಕಾರದಿಂದ ಶಾಶ್ವತ ಮುಳುಗಡೆ ಗ್ರಾಮವೆಂದು ಘೋಷಣೆಯಾಗಿದ್ದು, ಪುನರ್ ವಸತಿಗಾಗಿ ಜಾಗವನ್ನೂ ಕೂಡ ನಿಯೋಜನೆಗೊಳಿಸಿದ್ದು ನಮ್ಮ ಮಾನ್ಯ ಶಾಸಕರು ಭೂಮಿ ಪೂಜೆಯನ್ನೂ ಕೂಡ ನೆರೆವೇರಿಸಿದ್ದು ಸಾಧ್ಯವಾದಷ್ಟು ಬೇಗನೆ ಕಾಮಗಾರಿಯನ್ನು ಪೂರ್ಣಗೊಳಿಸಿ ನಮ್ಮೂರಿಗೆ ಶಾಶ್ವತ ಸೂರನ್ನು ಕಲ್ಪಿಸಲು ಮನವಿ ಮಾಡಿಕೊಂಡರು.
ಉಪತಹಶೀಲ್ದಾರ ಶ್ರೀಕಾಂತ ಮಾಯನ್ನವರ ಹಾಗೂ ತಮದಡ್ಡಿ ನೋಡಲ್ ಅಧಿಕಾರಿ ಅಶೋಕ ಗುಡಿಮನಿ ನದಿ ನೀರಿನಲ್ಲಿ ಮುಳುಗಡೆಯಾದ ಒಟ್ಟು 102 ಕುಟುಂಬಗಳ ಪೈಕಿ ಈಗಾಗಲೇ 75 ಕುಟುಂಬಗಳನ್ನು ಸ್ಥಳಾಂತರಿಸಿದ್ದು ಇನ್ನೂ 12 ಕುಟುಂಬಗಳನ್ನು ಸ್ಥಳಾಂತರಿಸುವ ಕಾರ್ಯ ಪ್ರಗತಿಯಲ್ಲಿದ್ದು, ಉಳಿದ ಕುಟುಂಬಗಳು ಬೇರೆ-ಬೇರೆ ಪ್ರದೇಶದಲ್ಲಿರುವ ತಮ್ಮ ಸಂಬಂಧಿಕರ ಮನೆಯಲ್ಲಿ ನೆಲೆಸಿದ್ದು ಕಾಳಜಿ ಕೇಂದ್ರದಲ್ಲಿ ಈಗಾಗಲೇ ಊಟದ ವ್ಯವಸ್ಥೆಯನ್ನು ಮಾಡಿದ್ದು ಆರೋಗ್ಯ ಕಾರ್ಯಕರ್ತರನ್ನು ನಿಯೋಜಿಸಲಾಗಿದೆಯಂದು ತಿಳಿಸಿದರು.
ಕಾಳಜಿ ಕೇಂದ್ರಕ್ಕೆ ಬೇಟಿ ನೀಡಿ ರಬಕವಿ-ಬನಹಟ್ಟಿ ತಹಶೀಲ್ದಾರ ಸಂಜಯ ಇಂಗಳೆ ಹಾಗೂ ಗ್ರೇಡ2 ತಹಶೀಲ್ದಾರ ಎಸ್.ಬಿ ಕಾಂಬಳೆ, ತಂಡದಲ್ಲಿ ಕಂದಾಯ ನಿರೀಕ್ಷಕ ಬಸವರಾಜ ತಾಳಿಕೋಟಿ, ಪಂಚಾಯತ ಅಭಿವೃದ್ಧಿ ಅಧಿಕಾರಿ ಎಸ್.ಎಸ್.ಸನದಿ, ಪ್ರಭಾರ ಆಹಾರ ನಿರೀಕ್ಷಕ ಪ್ರಕಾಶ ಮಠಪತಿ, ಮುಖ್ಯಗುರು ವ್ಹಿ.ಎಸ್ ಉಪ್ಪಿನ ಸ್ಥಳೀಯ ಸಿಬ್ಬಂದಿ ಉಪಸ್ಥಿತರಿದ್ದರು.
Social Plugin