ತೇರದಾಳದ ಹನಮಂತ ನಿವರಗಿ ಅವರ ನಿವಾಸದಲ್ಲಿ ಶ್ರೀಗುರುದೇವ ಸಿದ್ಧೇಶ್ವರ ಸ್ವಾಮಿಗಳ ಪುಣ್ಯಾರಾಧನೆ ಸಮಾರಂಭದಲ್ಲಿ ಶೇಗುಣಸಿಯ ಹನಮಾಪೂರದ ಹಣಮಂತ ಮಹಾರಾಜರು ಮಾತನಾಡಿದರು.

ತೇರದಾಳ : ಗುರುವಿನ ಕರುಣೆ ಪಡೆದುಕೊಂಡ ಸಂಸಾರದೊಳಗೆ ಸಂಸ್ಕಾರವಂತರಾದೆವು ಅಂದರೆ ಸಂಸಾರ ಸರಾಗವಾಗಿ ಸಾಗುವುದು, ಸಂಸಾರದೊಳಗೆ ಸಂಸ್ಕಾರವಿಲ್ಲದಿದ್ದರೆ ಸಂಸಾರ ಸಂವಾರವಾಗುವ ಸಮಯ ಬರುತ್ತದೆ ಎಂದು ಶೇಗುಣಸಿಯ ಹನಮಾಪೂರದ ಹಣಮಂತ ಮಹಾರಾಜರು ಹೇಳಿದರು.
   ಪಟ್ಟಣದ ದೇವರಾಜ ನಗರದ ( ನಾಡಗೌಡ ಗುಡ್ಡ) ಹನಮಂತ ನಿವರಗಿ ಅವರ ನಿವಾಸದಲ್ಲಿ ಶ್ರೀಗುರುದೇವ ಸಿದ್ಧೇಶ್ವರ ಸ್ವಾಮಿಗಳ ಪುಣ್ಯಾರಾಧನೆ ಸಮಾರಂಭದ ಸಾನಿಧ್ಯವಹಿಸಿ ಮಾತನಾಡಿದ ಅವರು ಸಂಸಾರದೊಳಗೆ ಸಂಸ್ಕಾರ ಮಹತ್ವದ್ದು. ಸಂಸ್ಕಾರವನ್ನು ಈ ಮಾನವ ಶರೀರಕ್ಕೆ ಗುರು ಎಂಬ ಮಂತ್ರವನ್ನು ಕಿವಿಯ ಮೂಲಕ ದೇಹವನ್ನು ಪ್ರವೇಶಿಸಿವ ಮೂಲಕ ಜ್ಞಾನವನ್ನು ಗಳಿಸಿಕೊಂಡು ಮುಕ್ತಿಯನ್ನು ಪಡೆಯಬೇಕು. ಗುರುವಿನ ಮಾರ್ಗದರ್ಶನದ ಮುಖಾಂತರ ಜ್ಞಾನವನ್ನು ಪಡೆದು ಜನ್ಮ ಸಾರ್ಥಕ ಮಾಡಿಕೊಳ್ಳಬೇಕು ಎಂದರು.
   ಬೆಳಿಗ್ಗೆ ನಿವಾಸದಲ್ಲಿ ರುದ್ರಾಭಿಷೇಕ ಹಾಗೂ ಪೂಜಾ ಕೈಂಕರ್ಯಗಳು ನೆರವೇರಿದವು. ಭಜನಾ ತಂಡದವರಿಂದ ಭಜನೆಗಳು, ಪ್ರವಚನ ನಡೆದವು. ಸಮಾರಭದಲ್ಲಿ ರಾಯಪ್ಪ ಕುಂಬಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾರಂಭದಲ್ಲಿ ಪಾಲಭಾವಿಯ ಈರಯ್ಯ ಶ್ರೀಗಳು, ಮಲ್ಲಪ್ಪ ನಿವರಗಿ, ಹಣಮಂತ ನಿವರಗಿ, ಸಿದ್ದು ನಿವರಗಿ, ಅಪ್ಪಾಸಾಬ ಹಳ್ಯಾಳ, ನಾಗಪ್ಪ ಶಿರೋಳ, ಶಿವಾನಂದ ಸೋರಗಾವಿ, ಬಾಬು ಸೋರಗಾವಿ, ಶಿವಾನಂದ ನಿವರಗಿ, ಬಸವರಾಜ ಕೊಕ್ಕಳಕಿ, ಸಂಗು ಶೇಗುಣಸಿ ಸೇರಿದಂತೆ ಅಪಾರ ಭಕ್ತರು ಭಾಗವಹಿಸಿದ್ದರು. ರಾಜೇಶ್ವರಿ ಗಸ್ತಿ ನಿರೂಪಿಸಿ ಸ್ವಾಗತಿಸಿದರು. ಹಣಮಂತ ನಿವರಗಿ ವಂದಿಸಿದರು. ಕೊನೆಯಲ್ಲಿ ಸೇರಿದ ಭಕ್ತರಿಗೆ ಮಹಾಪ್ರಸಾದ ನಡೆಯಿತು.