ತೇರದಾಳದ ಜಮಖಂಡಿ ಕಾಗವಾಡ ರಸ್ತೆಯ ಮೇಲೆ ತಮದಡ್ಡಿ ಸಂತ್ರಸ್ಥರು ನಮಗೆ ಬೇಗನೆ ನಿವೇಶನವನ್ನು ಹಂಚಿಕೆ ಮಾಡಿ ಎಂದು ಪ್ರತಿಭಟನೆ ನಡೆಸಿದರು.

ತಮದಡ್ಡಿ ಸಂತ್ರಸ್ಥರಿಗೆ ನಿವೇಶನ ಹಂಚುವಂತೆ ರಸ್ತೆ ತಡೆ ನಡೆಸಿ ಪ್ರತಿಭಟನೆ

ತೇರದಾಳ : ತಮದಡ್ಡಿ ಗ್ರಾಮಕ್ಕೆ ಕೃಷ್ಣಾ ನದಿಯ ಐತಿಹಾಸಿಕ ಪ್ರವಾಹ ಬಂದು ಗ್ರಾಮದ ಜನರು ಸ್ಥಳಾಂತರವಾಗಿ ಪಟ್ಟಣದ ಶ್ರೀನೀಲಕಂಠೇಶ್ವರ ಶಿಕ್ಷಣ ಸಂಸ್ಥೇಯಲ್ಲಿ ಹಾಗೂ ಗುರುಕುಲು ಶಿಕ್ಷಣ ಸಂಸ್ಥೆಯಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಬಹಳಷ್ಟು ರೈತರು ತಮ್ಮ ದನಕರುಗಳೊಂದಿಗೆ ರಸ್ತೆಯ ಮೇಲೆ ಆಶ್ರಯ ಪಡೆದುಕೊಂಡಿದ್ದಾರೆ. ಇವರ ಈ ಸಂಕಷ್ಟವನ್ನು ನೋಡಿ ಸರಕಾರ ಅವರಿಗೆ ಹಳಿಂಗಳಿ ಭದ್ರಗಿರಿಯ ಸಮೀಪದಲ್ಲಿ 89ಎಕರೆ ಜಮೀನನ್ನು ಕೊಡಲಾಗಿದೆ. ಈವರ ಈ ಪರಿಸ್ಥಿತಿಯನ್ನು ನೋಡಿ ಅದಕ್ಕೆ ಮೂರುವರೆ ಕೋಟಿ ರೂ. ಮಂಜೂರು ಮಾಡಿಸಿ ಜೆಸಿಬಿ ಮೂಲಕ ಸಮತಟ್ಟು ಮಾಡಲು ಭೂಮಿ ಪೂಜೆಯನ್ನು ಮಾಡಲಾಗಿದೆ ಎಂದು ಕೆಎಚ್‍ಡಿಸಿ ನಿಗಮ ಅಧ್ಯಕ್ಷ ಶಾಸಕ ಸಿದ್ದು ಸವದಿ ಹೇಳಿದರು.  

   ಪಟ್ಟಣದ ಜಮಖಂಡಿ ಕಾಗವಾಡ ರಸ್ತೆ ತಡೆ ನಡೆಸಿ ತಮದಡ್ಡಿ ಗ್ರಾಮದ ಸಂತ್ರಸ್ಥರು   ಭದ್ರಗಿರಿ ಸಮೀಪದಲ್ಲಿಯ ಜಮೀನಿನಲ್ಲಿ ನಿವೇಶನವನ್ನು ಹಂಚಿಕೆ ಮಾಡಿ ಎಂದು ರಸ್ತೆ ತಡೆ ನಡೆಸಿದ ಸಂದರ್ಭದಲ್ಲಿ ಭೇಟಿ ನೀಡಿ ಮನವಿ ಸ್ವೀಕರಿಸಿ ಮಾತನಾಡಿದ ಅವರು ಭದ್ರಗಿರಿಯ ಸಮೀಪದಲ್ಲಿಯ ಜಾಗೆಯಲ್ಲಿ ಕೆಲಸವನ್ನು ಪ್ರಾರಂಭಿಸಿದಾಗ ಕೆಲವೊಂದು ಜನರು ಬಂದು ತಡೆಯೊಡ್ಡಿದರು. ಈ ಕುರಿತು ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ತಹಶೀಲ್ದಾರರು ಸೇರಿದಂತೆ ಎಲ್ಲ ಅಧಿಕಾರಿಗಳ ಸಭೆಯನ್ನು ತಗೆದುಕೊಂಡಿದ್ದೇವೆ. ಇನ್ನು ಮೂರ್ನಾಲ್ಕು ದಿನಗಳಲ್ಲಿ ಪೋಲಿಸ್ ಬಂದೂಬಸ್ತ್‍ದಲ್ಲಿ ಲೇವಲಿಂಗ್ ಕಾರ್ಯ ಮಾಡಲು ಪ್ರಾರಂಭಿಸಲಾಗುವುದು. ತಮದಡ್ಡಿ ಗ್ರಾಮದಲ್ಲಿ ಎಸ್‍ಸಿ ಕಾಲೊನಿಯಲ್ಲಿನ ಮನೆಗಳು ಸಂಪೂರ್ಣವಾಗಿ ಮುಳಗಿ ಹೋಗುತ್ತವೆ. ಅಂಹ ಮನೆಗಳಿಗೆ ಪ್ರಥಮವಾಗಿ ನಿವೇಶವನ್ನು ಕೊಟ್ಟು ಅವರನ್ನು ಸ್ಥಳಾಂತರ ಮಾಡಲಾಗುವುದು. ನಿಮ್ಮದು ಕೂಗು ಈಗ ಜಿಲ್ಲಾಡಳಿತಕ್ಕೆ ಮುಟ್ಟಿದೆ. ನಾವು ಯಾವತ್ತು ಸಂತ್ರಸ್ಥರ ಪರವಾಗಿ ಇದ್ದೇನು. ಇನ್ನು ಎರಡು ಮೂರು ತಿಂಗಳಲ್ಲಿ ನಿಮಗೆ ಹಕ್ಕು ಪತ್ರ ಕೊಡುವ ವ್ಯವಸ್ಥೆ ಮಾಡಲಾಗುವುದು ಎಂದರು.

   ಈ ಸಂದರ್ಭದಲ್ಲಿ ತಹಶೀಲ್ದಾರ ಸಂಜಯ ಇಂಗಳೆ, ಉಪತಹಶೀಲ್ದಾರ ಎಸ್.ಬಿ.ಮಾಯನ್ನವರ, ಪ್ರಭಾರಿ ಆಹಾರ ನಿರೀಕ್ಷಕ ಪಿ.ಎಸ್.ಮಠಪಪತಿ, ನೋಡಲ್ ಅಧಿಕಾರಿ ಅಶೋಕ ಗುಡಿಮನಿ, ಪಿಎಸ್‍ಐ ರಾಜು ಬೀಳಗಿ, ಹೆಚ್ಚುವರಿ ಪಿಎಸ್‍ಐ ಎಸ್.ಕೆ.ಸೂರ್ಯವಂಸಿ, ಸುರೇಶ ಅಕ್ಕಿವಾಟ, ಮಧು ಕಾಂಬಳೆ ಸೇರಿದಂತೆ ತಮದಡ್ಡಿ ಸಂತ್ರಸ್ಥರು ಇದ್ದರು.