*ಕೊರೊನಾ ವಾರಿಯರ್‌ಗಳ ಮಧ್ಯ ಜನುಮ ದಿನ ಆಚರಣೆ*
 ಕೇಕ್ ಕತ್ತರಿಸಿ ಗುಂಡು ತುಂಡು ತಿಂದು ಅದ್ದೂರಿಯಾಗಿ ಹುಟ್ಟು ಹಬ್ಬ ಆಚರಣೆ ಮಾಡಿಕೊಳ್ಳುವವರು ಒಂದೆಡೆಯಾದರೆ ಇಲ್ಲೊಬ್ಬ ಸಾಮಾನ್ಯ ವ್ಯಕ್ತಿ ತಮ್ಮ ಹುಟ್ಟು ಹಬ್ಬವನ್ನು ವಿಶೇಷವಾಗಿ ಆಚರಣೆ ಮಾಡಿಕೊಂಡು ಸೆಲೆಬ್ರಿಟಿಗಳೂ ಸಹಿತ ನಾಚುವಂತೆ ಮಾಡಿದ್ದಾರೆ.
ಹೌದು, ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿಯ ಹರಿಜನಕೇರಿಯ ನಿವಾಸಿ ತಿಪ್ಪಣ್ಣ ಬಸಪ್ಪಗೋಳ ಅವರು ಕೊರೊನಾ ಮಹಾಮಾರಿ ಮಧ್ಯ ಹೋರಾಟ ನಡೆಸಿದ ಆರೋಗ್ಯ, ನಗರಸಭೆ ಮತ್ತು ಆಶಾ ಕಾರ್ಯಕರ್ತೆಯರನ್ನು ಸನ್ಮಾನಿಸಿ ಗೌರವ ನೀಡುವ ಮೂಲಕ ಆಚರಿಸಿಕೊಂಡು ಮಾದರಿಯಾಗಿದ್ದಾರೆ.
ಹೀಗೆ ಅರ್ಥಪೂರ್ಣವಾಗಿ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವದು ಇದೇ ಮೊದಲೇನಲ್ಲ. ಕಳೆದ ಏಳೆಂಟು ವರ್ಷಗಳಿಂದ ತಮ್ಮ ಜನ್ಮದಿನವನ್ನು ನಾನಾ ರೀತಿಯಲ್ಲಿ ಸಮಾಜದಲ್ಲಿ ತುಳಿತಕ್ಕೊಳಗಾದ ಹಾಗು ಸಮಾಜಕ್ಕೆ ಪ್ರೇರಣೆಯಾದ ವ್ಯಕ್ತಿಗಳ ಜೊತೆ ಜನ್ಮದಿನ ಆಚರಿಸಿಕೊಳ್ಳುತ್ತಿರುವದು ವಿಶೇಷ. ಇವರ ಈ ಕಾರ್ಯಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವರದಿ
ಮಲ್ಲಿಕಾರ್ಜುನ ತುಂಗಳ ಮುಖ್ಯ ವರದಿಗಾರರು 
ಬಾಗಲಕೋಟೆ