*ಆನಂದ ಬಾಡಗಂಡಿಗೆ ಪ್ರಾಧಿಕಾರ ಸ್ಥಾನ ನೀಡಲು ಹೆಚ್ಚಿದ ಒತ್ತಡ*
 ರಬಕವಿ-ಬನಹಟ್ಟಿ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಸ್ಥಾನದ ಅವಧಿ ಮುಕ್ತಾಯ ಹಂತ ಕಾಣುತ್ತಿರುವ ಹಿನ್ನಲೆಯಲ್ಲಿ ರಬಕವಿ ಪಟ್ಟಣ ನಂತರ ವಾಡಿಕೆಯಂತೆ ಈ ಭಾರಿ ಬನಹಟ್ಟಿಗೆ ಸರದಿಯಿದ್ದು, ಏಳೆಂಟು ಜನ ಬಿಜೆಪಿ ಪ್ರಬಲ ನಾಯಕರು ಆಕಾಂಕ್ಷಿಗಳಾಗಿದ್ದು, ಕುರುಹಿನಶೆಟ್ಟಿ ಸಮಾಜದ ಮುಖಂಡ ಆನಂದ ಬಾಡಗಂಡಿಯವರನ್ನೇ ನೂತನ ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕೆಂದು ಶಾಸಕ ಸಿದ್ದು ಸವದಿಯವರಲ್ಲಿ ಸಮಾಜದಿಂದ ಒಮ್ಮತದ ನಿಲುವಿನೊಂದಿಗೆ ಒತ್ತಡ ಹೇರುವಲ್ಲಿ ಸಭೆ ಕಾರಣವಾಯಿತು.

ಬನಹಟ್ಟಿಯ ನೀಲಕಂಠೇಶ್ವರ ಮಠದಲ್ಲಿ ನಡೆದ ದಿಢೀರ್ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಕುರುಹಿನಶೆಟ್ಟಿ ಸಮಾಜದ ಮುಖಂಡ ಬಸವರಾಜ ಗಿಡದಾನಪ್ಪಗೋಳ ಪ್ರಾಮಾಣಿಕ ಹಾಗು ಬಿಜೆಪಿ ಪಕ್ಷಕ್ಕಾಗಿ ಹಗಲಿರುಳು ಶ್ರಮಿಸಿ ಅನುಭವಿ ಯುವಕನಾಗಿರುವ ಆನಂದ ಅವರಿಗೆ ಸ್ಥಾನ ಒದಗಿಸಬೇಕೆಂದು ಮನವಿ ಮಾಡಿದರು. 

ವರದಿ
ಮಲ್ಲಿಕಾರ್ಜುನ ತುಂಗಳ
ಮುಖ್ಯ ವರದಿಗಾರರು
ಬಾಗಲಕೋಟೆ