63ರ ಸಂಭ್ರಮದಲ್ಲಿ ಜನಪ್ರೀಯ ಶಾಸಕ ಸಿದ್ದು ಕ.ಸವದಿ

  ನಿನ್ನೆಯ ದಿನ ವಿಶೇಷವಾಗಿ ಇಂಚಗೇರಿ ಸಾಂಪ್ರದಾಯದ ಪಾಕ್ಷಿಕ ಪತ್ರಿಕೆ ದೇವವಾಣಿ ಹಾಗೂ ರಾಜ್ಯ ಮಟ್ಟದ ಸ್ವರೂಪ ಸಂದರ್ಶನ ಕನ್ನಡ ಮಾಸ ಪತ್ರಿಕೆಯ ಜಂಟಿ ನೇರ ಪ್ರಸಾರದಲ್ಲಿ ಮನ ಬಿಚ್ಚಿ ಮಾತನಾಡಿದ ತೇರದಾಳ ಮತಕ್ಷೇತ್ರದ ಜನಪ್ರೀಯ ಶಾಸಕರೂ ಹಾಗೂ ಕೆಎಚ್‍ಡಿಸಿ ನಿಗಮ ಅಧ್ಯಕ್ಷರು ಮತ್ತು ಬಿಡಿಸಿಸಿ ಬ್ಯಾಂಕ ಅಧ್ಯಕ್ಷರಾದ ಸನ್ಮಾನ್ಯ ಸಿದ್ದು ಕ.ಸವದಿ ಯವರು ಮೂರು ಬಾರಿ ಶಾಸಕರಾದ ಅನುಭವದ ಜೊತೆಗೆ ಈ ಸಂಕಷ್ಟದ ಸಮಯದಲ್ಲಿನ ಅನೇಕ ವಿಷಯಗಳನ್ನು ಈ ಸಂದರ್ಶನದಲ್ಲಿ ಹಂಚಿಕೊಂಡರು. ನೇಕಾರರು ನಮ್ಮ ಮತಕ್ಷೇತ್ರದಲ್ಲಿ ಬಹಳಷ್ಟು ಜನರಿದ್ದಾರೆ. ಅವರು ಮುಂದಿನ ಜೀವನ ಎನ್ನದೇ ಇಂದಿನ ಹೊಟ್ಟೆ ತುಂಬಿದರೆ ಸಾಕೆನ್ನುವ ಸ್ಥಿಯಲ್ಲಿದ್ದಾರೆ.

 ರಾಜಕೀಯ ವಿರೋಧಿಗಳು ತಮ್ಮ ಸರಕಾರವಿದ್ದಾಗ ಏನು ಕೆಲಸ ಮಾಡಿದ್ದಾರೆ ಹೇಳಲಿ. ಈಗ ವಿರೋಧ ಪಕ್ಷವಿದ್ದಾಗ ಎಲ್ಲಿಂದಲೋ ಬಂದು ಮಾತನಾಡುವುದು ಸುಲಭ. ನೇಕಾರರ ಸಲುವಾಗಿ ವಿಧಾನ ಸಭೆಯಲ್ಲಿ ಧ್ವನಿ ಎತ್ತಿ ನೇಕಾರರ ಬಗ್ಗೆ ಮಾತನಾಡಿದ್ದು ನಾನೊಬ್ಬನೇ. ಯಾರಾದರೂ ನೇಕಾರರ ಬಗ್ಗೆ ವಿಧಾನ ಸಭೆಯಲ್ಲಿ ಮಾತನಾಡಿದರೆ ಹೇಳಿ. ಸುಮ್ಮನೆ ಇನ್ನಾರನ್ನೂ ದ್ವೇಷಿಸುವ ಸಲುವಾಗೀ ಏನೇನು ಹೇಳಬೇಡಿ. ನಿಮ್ಮ ಕುಂತಂತ್ರ ನೇಕಾರರಿಗೆ ಗೊತ್ತು. ಅಲ್ಲದೇ ನಿಮ್ಮ ಸರಕಾರವಿದ್ದಾಗ ನಮ್ಮ ನೇಕಾರ ಬಂಧುಗಳಿಗೆ ಏನು ಮಾಡಿದ್ದೀರಿ ಹೇಳಿ. ನೇಕಾರರು ಹಾಗೂ ರೈತರು ನಮ್ಮ ಎರಡು ಕಣ್ಣುಗಳಿದ್ದಂತೆ.

  ಆತ್ಮೀಯ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಮತಕ್ಷೇತ್ರದ ತುಂಬೆಲ್ಲ ನನ್ನ ಹುಟ್ಟು ಹಬ್ಬ ಆಚರಿಸುತ್ತಿರುವುದು ಸಂತೋಷ. ಆದರೆ ಕೋವಿಡ್‍ದಂತಹ ಸಂದರ್ಭದಲ್ಲಿ ಆಗಲಿ ಬೇರೆ ಸಮಯದಲ್ಲಿ ಆಡಂಬರದ ಆಚರಣೆ ಬಯಸುವವನು ನಾನಲ್ಲ. ಎಲ್ಲರ ಪ್ರೀತಿ ಆಶೀರ್ವಾದ ಸದಾ  ನನ್ನ ಮೇಲಿರಲಿ. ಸದಾ ರಾಜ್ಯದ ಜನತೆಯ ಸೇವೆಯಲ್ಲಿರಬೇಕು ನನ್ನ ಮಹದಾಸೆ. ತಾವೆಲ್ಲರೂ ನನಗೆ ಇಲ್ಲಿಯವರೆಗೆ ಸಹಕಾರ ಕೊಟ್ಟಿದ್ದೀರಿ. ಈ ಸಹಕಾರ ಸದಾ ಕಾಲ ನನ್ನ ಮೇಲಿರಲಿ. ಈ ಸಂದರ್ಶನದ ಪೂರ್ಣ ಲೇಖನ ಪಾಕ್ಷಿಕ ಪತ್ರಿಕೆಯಾದ ಅಗಷ್ಟ 2ರ ದೇವವಾಣಿಯಲ್ಲಿ ಪ್ರಕಟಗೊಳ್ಳುವುದು ಅಲ್ಲದೇ ಸ್ವರೂಪ ಸಂದರ್ಶನ ಯೂಟ್ಯೂಬ್ ಚಾನಲ್‍ನಲ್ಲಿ ನಿನ್ನೆಯಿಂದ ವೀಕ್ಷಣೆ ಮಾಡಬಹುದು. ಈ ಸಂದರ್ಭದಲ್ಲಿ ಪತ್ರಿಕಾ ಸಲಹೆಗಾರರು ನಿರ್ಮಾಪಕರು, ಉದ್ಯಮಿ ಶ್ರೀಶೈಲ ಗಾಣಿಗೇರ, ರಬಕವಿ-ಬನಹಟ್ಟಿ ಖ್ಯಾತ ಉದ್ಯಮಿ, ಮುಖಂಡ ಮಲ್ಲಿಕಾರ್ಜುನ ಬಾಣಕಾರ, ಸಚೀನ ಕೊಡತೆ. ಪ್ರಕಾಶ ಹಾಡಕಾರ ಪತ್ರಿಕಾ ತಂಡದವರು ಸನ್ಮಾನಿಸಿ ಗೌರವಿಸಿದರು. ಶಾಸಕರ ಜೀವನ ಸಂತೋಷಮಯ ಹಾಗೂ ಸುಖಕರವಾಗಲಿ ಎಂದು ಸ್ವರೂಪ ಸಂದರ್ಶನ ಶುಭ ಹಾರೈಸುತ್ತದೆ.

  
ತೇರದಾಳ ಪಟ್ಟಣದ ಕಲ್ಪವೃಕ್ಷ ಬಯೋಟೆಕ್‍ನ ಪ್ರಕಾಶ ಹಾಡಕಾರ ಇವರು ರೈತರ ಹಾಗೂ ನೇಕಾರರ ಕಣ್ಮಣಿ, ಅಭಿವೃದ್ಧಿಯ ಹರಿಕಾರ, ಕೆಎಚ್‍ಡಿಸಿ ನಿಗಮದ ಅಧ್ಯಕ್ಷರಾದ ಹಾಗೂ ಬಿಡಿಸಿಸಿ ಬ್ಯಾಂಕಿನ ಅಧ್ಯಕ್ಷ ತೇರದಾಳ ಮತಕ್ಷೇತ್ರದ ಶಾಕ ಸಿದ್ದುಕ.ಸವದಿ ಇವರು 63ನೇ ಹುಟ್ಟು ಹಬ್ಬದ ಮುನ್ನಾ ದಿನದಂದು ಶಾಸಕರ ನಿವಾಸಕ್ಕೆ ಆಗಮಿಸಿ ಹಾರ ಹಾಕಿ ಸಿಹಿ ಹಂಚಿ ಶಾಸಕರಿಗೆ ಹುಟ್ಟು ಹಬ್ಬದ ಶುಭಾಷಯಗಳನ್ನು ಹೇಳಿದರು.
  ಇದೇ ಸಂದರ್ಭದಲ್ಲಿ ತೇರದಾಳ ಪುರಸಭೆ ಸದಸ್ಯ ಸಚೀನ ಕೊಡತೆ, ಮಲ್ಲು ಬಾನಕಾರ, ಶ್ರೀಶೈಲ ಗಾಣಿಗೇರ, ಸುರೇಶ ಅಕ್ಕಿವಾಟ, ಆನಂದ ಕಂಪು ಸೇರಿದಂತೆ ಇನ್ನಿತರರು ಇದ್ದರು.