ಬೆಳಗಾವಿ:ಕರ್ನಾಟಕ ಹಾಗೂ ಹೈದರಾಬಾದ್ ಸೇರಿ ದೇಶದ ನಾನಾ ರಾಜ್ಯದ ಪೊಲೀಸರಿಗೆ ಬೇಕಿದ್ದ ಮೋಸ್ಟ್ ವಾಂಟೆಡ್ ಸೈಬರ್ ವಂಚಕರನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ.
ಜಾರ್ಖಂಡ್ ಮೂಲದ ಚಂದ್ರಪ್ರಕಾಶ ದಾಸ್ , ಆಶಾ ಚಂದ್ರಪ್ರಕಾಶ ದಾಸ್ ಹಾಗೂ ಮಹಾರಾಷ್ಟ್ರದ ಮೂಲದ ಅನ್ವರ್ ಶೇಕ್ ಬಂಧಿತ ಆರೋಪಿಗಳು.
ಆರೋಪಿಗಳು ಬೆಳಗಾವಿ ತಾಲೂಕಿನ ಕಂಗ್ರಾಳಿಯ ಬಿಎಸ್ಎನ್ಎಲ್ ನಿವೃತ್ತ ನೌಕರ ಯಲ್ಲಪ್ಪ ಜಾಧವ ಅವರಿಗೆ ₹10 ಲಕ್ಷ ವಂಚಿಸಿದ್ದರು. ಪ್ರಕರಣ ಸಂಬಂಧ ಬೆಳಗಾವಿತ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ತನಿಖೆ ಕೈಗೆತ್ತಿಕೊಂಡ ಬೆಳಗಾವಿ ಡಿಸಿಪಿ ವಿಕ್ರಮ್ ಆಮ್ಟೆ ನೇತೃತ್ವದಲ್ಲಿ ಪಿಐ ಬಿ.ಆರ್.ಗಡ್ಡೇಕರ ತಂಡ ವಂಚನೆ ನಡೆದ ತಿಂಗಳೊಳಗೆ ಆರೋಪಿಗಳನ್ನು ಜೈಲಿಗಟ್ಟಿದ್ದಾರೆ.
ಬಂಧಿತರು ಸೈಬರ್ ವಂಚನೆಗಾಗಿ 50 ಮೊಬೈಲ್, 304 ಸಿಮ್ ಕಾರ್ಡ್ ಮತ್ತು 50 ಬೇರೆ ಬೇರೆ ಬ್ಯಾಂಕ್ನ ಖಾತೆಗಳನ್ನ ಬಳಕೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

Social Plugin