ತೇರದಾಳದ ಉಪ ಮಾರುಕಟ್ಟೆ ಪ್ರಾಂಗಣದಲ್ಲಿ ಮುಖ್ಯದ್ವಾರಕ್ಕೆ ಆರ್ಚಗೇಟ್ ಅಳವಡಿಸುವ ಮತ್ತು ಹಿಂದುಗಡೆ ಕಂಪೌಂಡ ಗೋಡೆ ನಿರ್ಮಿಸಲು ಭೂಮಿ ಪೂಜೆಯನ್ನು ಶಾಸಕ ಸಿದ್ದು ಸವದಿ ನೆರವೇರಿಸಿದರು.

ಎಪಿಎಮ್‍ಸಿ ಕಂಪೌಂಡ ಗೋಡೆಗೆ ಭೂಮಿ ಪೂಜೆ.

ತೇರದಾಳ : ಪಟ್ಟಣದ ಉಪ ಮಾರುಕಟ್ಟೆ ಪ್ರಾಂಗಣದಲ್ಲಿ ಮುಖ್ಯದ್ವಾರಕ್ಕೆ ಆರ್ಚಗೇಟ್ ಅಳವಡಿಸುವ ಕಾಮಗಾರಿಗೆ ಮತ್ತು ಕಚೇರಿ ಹಿಂದುಗಡೆ ಹೊಸದಾಗಿ ಕಂಪೌಂಡ ಗೋಡೆ ನಿರ್ಮಿಸು ಕಾಮಗಾರಿಗೆ ಭೂಮಿ ಪೂಜೆಯನ್ನು ಕೆಎಚ್‍ಡಿಸಿ ನಿಗಮ ಅಧ್ಯಕ್ಷ ಕ್ಷೇತ್ರದ ಶಾಸಕ ಸಿದ್ದು ಸವದಿ ನೆರವೇರಿಸಿದರು. 
  ಸನ್ 2020-21ನೇ ಸಾಲಿನ ವಾರ್ಷಿಕ ಕ್ರೀಯಾಯೋಜನೆ ಅಡಿಯಲ್ಲಿ ನಿರ್ಮಿಸುತ್ತಿರುವ ಕಾಮಗಾರಿಯನ್ನು ಅಂದಾಜು ಮೊತ್ತ 9,63,793=00 ರೂ. ಗಳ ಅನುದಾನದಲ್ಲಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಕಾಮಗಾರಿಯು ಗುಣಮಟ್ಟದಿಂದ ಕೂಡಿರಬೇಕು. ಹಾಗೂ ನಿಗದಿತ ಅವಧಿಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಗುತ್ತಿಗೆದಾರರಿಗೆ ತಿಳಿಸಿದರು.
  ಈ ಸಂದರ್ಭದಲ್ಲಿ ಜಮಖಂಡಿ ಎಪಿಎಮ್‍ಸಿ ಅಧ್ಯಕ್ಷ ಸಂಜಯ ಸಿದ್ದಾಪೂರ, ನಗರ ಘಟಕ ಅಧ್ಯಕ್ಷ ಮಹಾವೀರ ಕೊಕಟನೂರ, ಬಾಳು ದೇಶಪಾಂಡೆ, ಸುರೇಶ ರೇಣಕೆ, ನಿಂಗಪ್ಪ ಮಾಲಗಾವಿ, ಷಣ್ಮುಖ ಗಾಡದಿ, ಸಿದ್ದು ಅಮ್ಮಣಗಿ, ವರ್ಧಮಾನ ಕಡಹಟ್ಟಿ, ವಿಜಯಪ್ರಕಾಶ ದಾನಿಗೊಂಡ, ನಾಗಪ್ಪ ದೊಡಮನಿ, ಸದಾಶಿವ ಹೊಸಮನಿ,ಸಂಗಮೇಶ ಕಾಲತಿಪ್ಪಿ, ಶೀತಲ ಘೂಳನ್ನವರ, ವಿರಾಜ ಬಂಕಾಪೂರ ಸೇರಿದಂತೆ ಪುರಸಭೆ ಸದಸ್ಯರು ಸೇರಿದಂತೆ ಇನ್ನಿತರರು ಇದ್ದರು.