*ಅವರು ಕರ್ನಾಟಕದ ಮೊಟ್ಟ ಮೊದಲ ಕಾಂಗ್ರೆಸ್ಸೇತರ ಮುಖ್ಯಮಂತ್ರಿ (1983).
*ಮೌಲ್ಯಾಧಾರಿತ ರಾಜಕಾರಣದ ಬಗ್ಗೆ ಆಕರ್ಷಕವಾಗಿ ಮಾತನಾಡುತ್ತಿದ್ದರು.
*ಜನತಾಪಕ್ಷವನ್ನು ಪೊರೆದ ವ್ಯಕ್ತಿ .
*ದೇವೇಗೌಡರಂತೆ ದಿನದ 24 ತಾಸೂ ರಾಜಕಾರಣ ಮಾಡುತ್ತಿರಲಿಲ್ಲ .
*ಅನಂತಮೂರ್ತಿ ರೀತಿಯ ಸಾಹಿತಿಗಳ ಸಂಗ ಹೆಗಡೆ ಅವರಿಗಿತ್ತು.
*ಕರ್ನಾಟಕದ ಎಲ್ಲ ಭಾಗಗಳಲ್ಲೂ ಅಭಿಮಾನಿಗಳನ್ನುಳ್ಳ ಏಕೈಕ ರಾಜಕಾರಣಿ.
*ವಾಜಪೇಯಿ ಅವರ ಸಂಪುಟದಲ್ಲಿ ವಾಣಿಜ್ಯ ಸಚಿವರಾಗಿದ್ದವರು.
*ವಿ.ಪಿ.ಸಿಂಗ್‌ ಪ್ರಧಾನಿಯಾಗಿದ್ದಾಗ ಕೇಂದ್ರ ಯೋಜನಾ ಆಯೋಗದ ಉಪಾಧ್ಯಕ್ಷರಾಗಿದ್ದರು.
*ನಿಜಲಿಂಗಪ್ಪ ಮತ್ತು ವೀರೇಂದ್ರ ಪಾಟೀಲ್‌ ಸಂಪುಟಗಳಲ್ಲಿ ಸಚಿವರಾಗಿದ್ದರು.
*ತುರ್ತು ಪರಿಸ್ಥಿತಿಯಲ್ಲಿ ಇಂದಿರಾ ವಿರುದ್ಧ ಹೋರಾಟ ನಡೆಸಿ, ಜೈಲು ವಾಸ ಅನುಭವಿಸಿದ್ದರು.
*ರಾಮಕೃಷ್ಣ ಹೆಗಡೆ ಎಂದರೆ ಏನು? ನೆನೆಯುತ್ತಾ ಕೂತಾಗ ಕಣ್ಮುಂದೆ ಸುಳಿಯುವ ಚಿತ್ರಗಳಿಗೆ ಕೊನೆಯೆಂಬುದೇ ಇಲ್ಲ . ರಾಮಕೃಷ್ಣ ಹೆಗಡೆ ಎಂದರೆ ಇವೆಲ್ಲವೂ ಹೌದು. ಆದರೆ ಇವಿಷ್ಟೇ ಅವರಲ್ಲ . ಜ.12, 2004ರಂದು ನಿಧನರಾದ ರಾಮಕೃಷ್ಣ ಹೆಗಡೆ ದೇಶದ ಅತ್ಯಂತ ವಿರಳ ರಾಜಕಾರಣಿಗಳಲ್ಲೊಬ್ಬರು. ಹೆಗಡೆ ಎಂದರೆ ರಾಜಕಾರಣಿಯಲ್ಲ ; ಒಂದು ಪರಂಪರೆಯ ಹರಿಕಾರ ಅವರಾಗಿದ್ದರು. ಹೆಗಡೆ ಅವರ ಅಂತ್ಯದೊಂದಿಗೆ ರಾಜ್ಯ ರಾಜಕಾರಣದ ಒಂದು ಮಜಲು ಕೊನೆಗೊಂಡಂತಾಗಿದೆ. ಆದರೆ ಅವರ ಅಭಿಮಾನಿಗಳು ಇನ್ನೂ ಇದ್ದಾರೆ. ಬೇರೆ ರಾಜಕೀಯ ಪಕ್ಷಗಳ ಹಾಗೆ ಅವರ ಅಭಿಮಾನಿಗಳಲ್ಲ ಎಂದು ಪ್ರತಿ ರಾಜಕಾರಣಿಗಳಿಗೂ ಗೊತ್ತು. ಈಗ ಅವರ ಕಟ್ಟಾ ಅಭಿಮಾನಿ ಸಂತೋಷ ಜೀ ಯವರು ಅವರ ತತ್ವ-ಆದರ್ಶಗಳ ಮೇಲೆ "ರಾಮಕೃಷ್ಣ ಹೆಗಡೆ ಜನತಾ ಪಕ್ಷ" ಕಟ್ಟಿ ರಾಜ್ಯದ ಎಲ್ಲಾ ರಾಮಕೃಷ್ಣ ಹೆಗಡೆರವರ ಅಭಿಮಾನಿಗಳು ಒಂದಾಗಲು ವೇದಿಕೆ ಮಾಡಿದ್ದಾರೆ. ಅಲ್ಲದೇ ವಿಶೇಷವಾಗಿ ಯೋಜನೆಗಳನ್ನು ಹಾಕಿಕೊಂಡಿರುವುದಾಗಿ ಪತ್ರಿಕೆಗೆ ತಿಳಿಸಿದ್ದಾರೆ.
- ಇದು ಸಂತೋಷ ಜೀ ಯವರ ಹೇಳಿಕೆ: ಮುಂದಿನ ದಿನಗಳಲ್ಲಿ ಮೌಲ್ಯಧಾರಿತ ಅಜಾತಶತ್ರು ರಾಜ್ಯದಲ್ಲಿ ಪಂಚಾಯತ್ ಲೋಕಯುಕ್ತ ರೌಡಿಗಳ ಅಟ್ಟಹಾಸ ಕೊನೆ ಮಾಡಿದ ಪ್ರಜಾಪ್ರಭುತ್ವದ ಪ್ರಜಾಸಕಾ೯ರ ನಡೆಸಿದ ಪ್ರಜೆಗಳು ಮರೆಯದ ದಕ್ಷ ಆಡಳಿತ ನಡೆಸಿದ ಶಾಶ್ವತ ಮೇರು ನಾಯಕ 
ಶ್ರೀ ರಾಮಕೃಷ್ಣ ಹೆಗಡೆ ಯವರು
ಇವರ ಹೆಸರಿನಲ್ಲಿ ರಾಜ್ಯದಲ್ಲಿ
ಉದಯಸಿರುತ್ತಿರುವ ಒಂದು
ಪ್ರಜಾಪ್ರಭುತ್ವದ ಪ್ರಜೆಗಳ ಅಭಿಮಾನಿಗಳ ಅಭಿಮಾನದ ಪಕ್ಷ ರಾಮಕೃಷ್ಣ ಹೆಗಡೆ ಜನತಾ ಪಕ್ಷ (RJP)  
ಇದನ್ನು ರಾಜ್ಯಕ್ಕೆ ಪರಿಚಯಸುತ್ತಿರುವವರು
ರಾಮಕೃಷ್ಣ ಹೆಗಡೆಯವರ ಕಟ್ಟಾ ಅಭಿಮಾನಿಯಾದ 
ಜಿ.ಸಂತೋಷ್ ರವರ ನೇತೃತ್ವದಲ್ಲಿ 
ರಾಜ್ಯದ ಜನರ ನಾಗರೀಕ ಸಮಾಜದ ಬದುಕಿಗಾಗಿ ನೆಮ್ಮದಿಯ ಜೀವನಕ್ಕಾಗಿ
ಸರ್ವ ಸಮುದಾಯ ಧಾಮಿ೯ಕ ಉಳಿವಿಗಾಗಿ ಎಲ್ಲಾ ವರ್ಗದ ಶ್ರಮಿಕರಿಗಾಗಿ ಹಸಿರೆ ಉಸಿರು ಅನ್ನುವ ನಮ್ಮ ರಾಜ್ಯದ ರೈತರಿಗಾಗಿ ಭ್ರಷ್ಟಚಾರ ನಿಮೂ೯ಲನೆಗೆ ಮತ್ತೆ ರಾಜ್ಯದಲ್ಲಿ ಮೌಲ್ಯಧಾರಿತ ರಾಜಕಾರಣ ಮಾಡಲು ಮತ್ತೊಮ್ಮೆ ನಿಮ್ಮೆಲ್ಲರ ಮುಂದೆ
ಹರಸಿ ಉಳಿಸಿ ಬೆಳಸಿ 
ಪ್ರಜಾಪ್ರಭುತ್ವ ಉಳಿಸಿ ಅನ್ನುವ
ಸರ್ವರಿಗೂ ಸಮಪಾಲು
ಸರ್ವರಿಗೂ ಸಮಬಾಳು
ಒಗ್ಗಟ್ಟಿನಲ್ಲಿ ಬಲವಿದೆ👏