ವರದಿ : ವಿಜಯ ವಾಜಂತ್ರಿ

ತೇರದಾಳದ ವಾರ್ಡ ನಂ.2ರಲ್ಲಿನ ಶ್ರೀವೀರಭದ್ರೇಶ್ವರ ದೇವಸ್ಥಾನದ ಹತ್ತಿರದಲ್ಲಿ ಸಾರ್ವಜನಿಕರಿಗೆ ಕೋವಿಡ್ ಲಸಿಕೆಯನ್ನು ಹಾಕಿದರು.

ಲಸಿಕೆ ಪೂರೈಕೆಯಲ್ಲಿ ತಾರತಮ್ಯವಾಗಿಲ್ಲ, ಜನರ ಅನುಕೂಲತೆಗಾಗಿ ಈ ವ್ಯವಸ್ಥೆ 

ತೇರದಾಳ : ಸರಕಾರ ಉಚಿತವಾಗಿ ಕೊಡುತ್ತಿರುವ ಮಹಾಮಾರಿ ಕೊರೊನಾ ಲಸಿಕೆಯಿಂದ ಯಾರೂ ವಂಚಿತರಾಗಬಾರದು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗಲಿ ಎಂದು ತೇರದಾಳ ಪಟ್ಟಣದಲ್ಲಿ ಆರು ಲಸಿಕಾ ವಿಭಾಗಗಳನ್ನು ಮಾಡಲಾಗಿದೆ. ಲಸಿಕೆ ಪೂರೈಕೆಯಲ್ಲಿ ತಾರತಮ್ಯವಾಗಿಲ್ಲ ಪಟ್ಟಣದ ಎಲ್ಲ ಜನತೆಗೆ ಲಸಿಕೆ ದೊರಕುವ ಸಲುವಾಗಿ ಈ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ನಗರ ಘಟಕ ಪ್ರಭಾರಿ ಅಧ್ಯಕ್ಷ ರಾಮಣ್ಣ ಹಿಡಕಲ್ ಹೇಳಿದರು. 

   ಪಟ್ಟಣದ ಶ್ರೀವೀರಭದ್ರೇಶ್ವರ ದೇವಸ್ಥಾನದ ಸಮೀಪದ ಕೋವಿಡ್ ಲಸಿಕಾ ಸಾರ್ವಜನಿಕರಿಗೆ ಲಸಿಕೆಯನ್ನು ಹಾಕುವ ಸಂದರ್ಭದಲ್ಲಿ ಮಾತನಾಡಿದ ಅವರು ಬಡ ಜನರು ಸರದಿಯಲ್ಲಿ ನಿಂತು ಲಸಿಕೆಯನ್ನು ಪಡೆಯಬೇಕು ಆದರೆ ಅಂದು ಅವರಿಗೆ ಲಸಿಕೆ ಸಿಗದೇ ಹೋದರೆ ಅವರ ಒಂದು ದಿನದ ಕೂಲಿಯು ಸಹ ಕಳೆದುಕೊಳ್ಳುತ್ತಾರೆ. ಇದರಿಂದ ನಮಗೇನು ಲಾಭವಿಲ್ಲ. ಜನರ ಹಿತಕ್ಕಾಗಿ ಈ ಕೇಂದ್ರಗಳನ್ನು ಮಾಡಲಾಗಿದೆ. ಪ್ರತಿಯೊಬ್ಬರಿಗೂ ಲಸಿಕೆಯನ್ನು ಕೊಡುವ ವ್ಯವಸ್ಥೆ ಇಲ್ಲಿ ಮಾಡಲಾಗಿದೆ. ಇಂದು ಲಸಿಕೆ ಸಿಗದೆ ಇದ್ದರೆ ಅವರಿಗೆ ನಾಳೆಯ ದಿನ ಎಲ್ಲಿಗೆ ಬರಬೇಕು ಎಂದು ಆಶಾ ಕಾರ್ಯಕರ್ತರು ಹೇಳುತ್ತಾರೆ ಅಲ್ಲಿಗೆ ಹೋಗಿ ಲಸಿಕೆಯನ್ನು ಪಡೆಯುತ್ತಾರೆ. ಪಕ್ಷ ಪಂಗಡ ಎನ್ನುವ ದುರುದ್ದೇಶವನ್ನು ನಾವು ಹೊಂದಿಲ್ಲ. ಜನರಿಗೆ ಒಳ್ಳೆಯದಾಗಲಿ ಎಂದು ಈ ಕಾರ್ಯಕ್ರಮವನ್ನು ನಾವು ಮಾಡುತ್ತಿದ್ದೇವೆ ಎಂದರು.

   ಬಾಳು ದೇಶಪಾಂಡೆ ಮಾತನಾಡಿ ಕೋವಿಡ್ ಎನ್ನುವ ಮಹಾ ಯುದ್ಧದಲ್ಲಿ ನಾವು ಜಯಗಳಿಸಬೇಕಾಗಿದೆ ಜ್ಯಾತಿ, ರಾಜಕೀಯ, ಪಕ್ಷಪಾತ ಮಾಡದೇ ಜನರಿಗೆ ಲಸಿಕೆಯನ್ನು ಕೊಡಿಸುವ ಕೆಲಸವಾಗಬೇಕಿದೆ ಹಾಗೂ ಎಲ್ಲರೂ ಲಸಿಕೆಯನ್ನು ಪಡೆದು ಕೋವಿಡ್ ನಿರ್ಮೂಲನೆ ಮಾಡಿದಾಗ ನಾವು ಜಯಗಳಿಸಿದಂತೆ. ಭಾಜಪ ನಗರ ಘಟಕದ ಅಧ್ಯಕ್ಷ ಮಹಾವೀರ ಕೊಕಟನೂರ ಮಾತನಾಡಿ ಕಾಂಗ್ರೆಸ್‍ದವರು ಮಾಡುವ ಆರೋಪ ಸತ್ಯಕ್ಕೆ ದೂರವಾದುದು ಇದನ್ನು ನಾವು ಖಂಡಿಸುತ್ತೇವೆ. ಬಿಜೆಪಿ ಪಕ್ಷದವರಾಗಲಿ ಕಾಂಗ್ರೆಸ್ ಪಕ್ಷದವರಾಗಲಿ ಅವರಿಗಷ್ಟೇ ಲಸಿಕೆಯನ್ನು ಕೊಡುತ್ತಿಲ್ಲ ಪಟ್ಟಣದ ಎಲ್ಲ ಜನತೆಗೆ ಲಸಿಕೆ ಕೊಡಿಸಲು ನಾವು ಶ್ರಮಿಸುತ್ತಿದ್ದೇವೆ. ದೇಶಕ್ಕೆ ಬಂದಿರುವ ಗಂಡಾಂತರವನ್ನು ನಿಬಾಯಿಸುವ ಮೂಲಕ ನಾವು ಜಯಗಳಿಸಬೇಕಾಗಿದೆ.    

   ಈ ಸಂದರ್ಭದಲ್ಲಿ ಶಂಕರ ಕುಂಬಾರ, ಸದಾಶಿವ ಹೊಸಮನಿ, ಸುರೇಶ ರೇಣಕೆ, ಕಾಶೀನಾಥ ರಾಠೋಡ, ಪ್ರಭು ಬಾಗಿ, ಸಚೀನ ಕೊಡತೆ, ಸಂತೋಷ ಜಮಖಂಡಿ, ಸಂಗಮೇಶ ಕಾಲತಿಪ್ಪಿ, ಕೇದಾರಿ ಪಾಟೀಲ ಸೇರಿದಂತೆ ಆಶಾ ಕಾರ್ಯಕರ್ತರು ಇನ್ನಿತರರು ಇದ್ದರು.