ನಾನು ರಮೇಶ್ ಜಾರಕಿಹೊಳಿ ಬೆಂಬಲವಾಗಿ ನಿಲ್ಲುತ್ತೇನೆ.. ಮಹೇಶ್ ಕುಮಟಳ್ಳಿ
ವರದಿ : ಮಲ್ಲಿಕಾರ್ಜುನ ಘೋಸರವಾಡ.

ಬೆಳಗಾವಿ: ಅಥಣಿ ಮಾನ್ಯಶಾಸಕರಾದ ಮಹೇಶ್ ಕುಮ್ಟಳ್ಳಿ ಅವರು ರಮೇಶಣ್ಣ ಜಾರಕಿಹೊಳಿ ಬೆಂಬಲಕ್ಕೆ ನಿಂತಂತಾಗಿದೆ. ರಮೇಶಣ್ಣ ಜಾರಕಿಹೊಳಿಗೆ ಈ ಗೊಂದಲದಿಂದ ಮನಸ್ಸಿಗೆ ನೋವಾಗಿದೆ. ಆ ನೋವನ್ನು ನಿವಾರಿಸಲು ಪಕ್ಷ ನಿವಾರಿಸಲಿದೆ. ಅವರ ಶಕ್ತಿ ಸಾಮರ್ಥ್ಯವನ್ನು ಪಕ್ಷ ಬಳಸಿಕೊಳ್ಳುವಂತೆ ಎಲ್ಲರೂ ಸೇರಿ ಮನವರಿಕೆ ಮಾಡುತ್ತೇವೆ. ನಾನು ಅವರ ಬೆಂಬಲವಾಗಿ ನಿಲ್ಲುತ್ತೇನೆ. ಎಂದು ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಸ್ಪಷ್ಟಪಡಿಸಿದ್ದಾರೆ. ಅಥಣಿ ಗ್ರಾಮೀಣ ವ್ಯಾಪ್ತಿಯ ಭರಮಖೋಡಿಯಲ್ಲಿ 50 ಲಕ್ಷ ರೂಪಾಯಿ ರಸ್ತೆ ಸುಧಾರಣಾ ಕಾಮಗಾರಿ ಮತ್ತು ಅಥಣಿ ಗ್ರಾಮೀಣ ಸೀಡ್ ಫಾರ್ಮಲ್ಲಿ ಸುಮಾರು 11 ಲಕ್ಷ ರೂಪಾಯಿ ವೆಚ್ಚದಲ್ಲಿ ಪ್ರಾಥಮಿಕ ಶಾಲೆಯ ಒಂದು ಕೊಠಡಿ ಕಾಮಗಾರಿಗೆ ಭೂಮಿಪೂಜೆ ಮಹೇಶ್ ಕುಮಟಳ್ಳಿ ಭೂಮಿಪೂಜೆ ನೆರವೇರಿಸಿದರು.
 ಆ ಬಳಿಕ ರಮೇಶ್ ಜಾರಕಿಹೊಳಿ ರಾಜೀನಾಮೆ ವಿಚಾರದ ಕುರಿತು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಹೇಶ್ ಕುಮ್ಟಳ್ಳಿ ಅಣ್ಣಾ ಜಾರಕಿಹೊಳಿ ಅವರು ಕೆಟ್ಟ ಘಳಿಗೆಯಿಂದ ರಾಜೀನಾಮೆ ಕೊಡುವ ಪ್ರಸಂಗ ಎದುರಾಗಿತು. ಆದರೆ ಕೆಲ ದಿನಗಳಲ್ಲಿ ಅದರಿಂದ ಮುಕ್ತರಾಗುತ್ತಾರೆ ಎಂದು ನಮಗೆ ಭರವಸೆ ಇದೆ. ಅವರು ಬಿಜೆಪಿ ಪಕ್ಷ ಕಟ್ಟುವಲ್ಲಿ ತಮ್ಮ ಸಾಮರ್ಥ್ಯದಿಂದ ಕರ್ನಾಟಕದಲ್ಲಿ ಬಿಜೆಪಿ ಬಲಿಷ್ಠಗೊಳಿಸಿದ್ದಾರೆ. ಆ ಸಾಮರ್ಥ್ಯಕ್ಕೆ ತಕ್ಕಂತೆ ಮುಂಬರುವ ದಿನಗಳಲ್ಲಿ ಅವರಿಗೆ ಉತ್ತಮ ಸ್ಥಾನ ಸಿಗುವುದು ನಿಶ್ಚಿತ ಬಿಜೆಪಿಯಲ್ಲಿ ಗೊಂದಲ ಇರುವುದು ನಿಜ ಆದರೆ ಅದಕ್ಕೆಲ್ಲ ತಾರ್ಕಿಕ ಅಂತ್ಯ ಹೈಕಮಾಂಡ್ ನೀಡಲಿದೆ ಎಂದು ಹೇಳಿದರು.