ಲಸಿಕೆಗಾಗಿ ಸಾರ್ವಜನಿಕರ ನೂಕುನುಗ್ಗಲು
ವರದಿ : ವಿಜಯ್ ವಾಜಂತ್ರಿ.

ತೇರದಾಳ : ಪಟ್ಟಣದ ಶ್ರೀ ಸಿದ್ದೇಶ್ವರ ದೇವಸ್ಥಾನದಲ್ಲಿ ಇಂದು ಗುರುವಾರ ಕೊರೊನ ಲಸಿಕೆಯನ್ನು ಹಾಕಲಾಯಿತು. ಈ ಸಂದರ್ಭದಲ್ಲಿ ಸಾರ್ವಜನಿಕರು ಸಾಮಾಜಿಕ ಅಂತರ ಮರೆತು ಲಸಿಕೆಗಾಗಿ ಒಬ್ಬರ ಮೇಲೆ ಒಬ್ಬರು ಬೀಳುವಂತೆ ಕಂಡುಬಂದಿತು.
     ಸರ್ಕಾರದ ನಿರ್ದೇಶನದಂತೆ ಉಚಿತ ಲಸಿಕೆಯನ್ನು ಪಡೆಯಲು ಪಟ್ಟಣದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಪಟ್ಟಣದಲ್ಲಿ ಲಸಿಕಾ ಕೇಂದ್ರಗಳನ್ನು ತೆರೆಯಲಾಗಿದೆ. ವಾರದಲ್ಲಿ ಒಂದು ದಿನ ಒಂದು ವಾರ್ಡಿಗೆ ಹೋಗಿ ಲಸಿಕೆಯನ್ನು ಕೊಡಲಾಗುತ್ತದೆ ಅದರಂತೆ ಇಂದು ಪಟ್ಟಣದ ಶ್ರೀ ಸಿದ್ದೇಶ್ವರ ದೇವಸ್ಥಾನದಲ್ಲಿ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಲಸಿಕೆಯನ್ನು ಹಾಕಿದರು. ಆದರೆ ಸಾರ್ವಜನಿಕರು ಲಸಿಕೆಗಾಗಿ ನಾ ಮುಂದು ತಾ ಮುಂದು ಎಂದು ನುಗ್ಗು ನುಗ್ಗುಲಾಯಿತು. ಮಾಸ್ಕ ಧರಿಸದೆ, ಸಾಮಾಜಿಕ ಅಂತರ ಮರೆತು ಸಾರ್ವಜನಿಕರು ಗುಂಪುಗೂಡಿದ್ದರು. ನಾಲ್ಕು ವಾರ್ಡುಗಳು ಸೇರಿ ಒಂದೇ ಕಡೆಗೆ ಲಸಿಕೆಯನ್ನು ಹಾಕಲಾಗುತ್ತದೆ . ಇಂದು 60 ಲಸಿಕೆಗಳು ಬಂದಿದ್ದವು. ಅರುವತ್ತು ಜನರಿಗೆ ಲಸಿಕೆಯನ್ನು ಹಾಕಲಾಯಿತು. ಲಸಿಕೆ ಸಿಗದೇ ಕೆಲವು ಜನರು ಮುಂಜಾನೆಯಿಂದ ನಿಂತು ನಿಂತು ಮರಳಿ ಮನೆಗೆ ಹೋದರು. ಈ ಸಂದರ್ಭದಲ್ಲಿ ಸಂತೋಷ ಜಮಖಂಡಿ, ವಿಜಯ ಬಿಜ್ಜರಗಿ ಸೇರಿದಂತೆ ಇನ್ನಿತರರು ಇದ್ದರು.