ಗೋಕಾಕ: ಕೊಂಕಣ ರೈಲ್ವೆ ಸಮಿತಿಗೆ ಸಂಸದ ಶ್ರೀ ಈರಣ್ಣ ಕಡಾಡಿ. ಕೊಂಕಣ ರೈಲ್ವೆ ಬಳಕೆದಾರರ ಸಲಹಾ ಸಮಿತಿಯ ಸದಸ್ಯರನ್ನಾಗಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರನ್ನು ನಾಮನಿರ್ದೇಶನ ಮಾಡಿರುವುದಾಗಿ ಕೊಂಕಣ ರೈಲ್ವೆ ನಿಗಮ ನಿಯಮಿತ ಸಂಸ್ಥೆಯ ಪ್ರಕಟಣೆ ಮೂಲಕ ತಿಳಿಸಿದೆ.
ಶನಿವಾರ ಜೂನ್ 26 ರಂದು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುವ ಅವರು ಕೊಂಕಣ ರೈಲ್ವೆ ನಿಗಮದ ಮುಂಬರುವ ಯೋಜನೆಗಳ ಅನುಷ್ಠಾನ ನಿಗಮದ ಗುರಿ ಮತ್ತು ಉದ್ದೇಶಗಳ ಸಾಧನೆ. ಸಮರ್ಥ ಕಾರ್ಯನಿರ್ವಹಣೆಯಲ್ಲಿ ನೆರವು ಹಾಗೂ ಮಾರ್ಗದರ್ಶನದ ಜವಾಬ್ದಾರಿ ನಿರ್ವಹಿಸಲು ನಿಗಮವು ಕೋರಿ ಕೊಂಡಿದೆ. ಎರಡು ವರ್ಷಗಳ ಅಧಿಕಾರ ಅವಧಿಯಲ್ಲಿ ಕರ್ನಾಟಕದ ರೈಲ್ವೆ ಬೆಳವಣಿಗೆಯಲ್ಲಿ ಸಕ್ರಿಯವಾಗಿ ಪಾಲುಗೊಳ್ಳಲು ಸಂಸದ ಈರಣ್ಣ ಕಡಾಡಿ ಅವರಿಗೆ ಅವಕಾಶ ಒದಗಿದೆ. ಕೊಂಕಣ ರೈಲ್ವೆ ಕರ್ನಾಟಕ, ಗೋವಾ, ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳ ವ್ಯಾಪ್ತಿಯನ್ನು ಹೊಂದಿದೆ. ಕೊಂಕಣ ರೈಲ್ವೆ ಬಳಕೆದಾರರ ಸಲಹಾ ಸಮಿತಿಯಲ್ಲಿ ಸಂಸದರು, ಶಾಸಕರು, ವಾಣಿಜ್ಯೋದ್ಯಮ ಮತ್ತು ಕೈಗಾರಿಕೆಗಳ ಚೇಂಬರ ಗಳು ಪ್ರತಿನಿಧಿಗಳು ಮತ್ತು ಪಾಸಂಜರ್ ಅಸೋಶಿಯೇಶನ್ ಸದಸ್ಯರಾಗಿರುತ್ತಾರೆ.

Social Plugin