ತೇರದಾಳದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಸಂಘದ ಸದಸ್ಯರಿಗೆ ಲಾಭಾಂಶ ವಿತರಣೆ ಮಾಡಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಸದಸ್ಯರಿಗೆ ಲಾಭಾಂಶ ವಿತರಣೆ
ತೇರದಾಳ : ತೇರದಾಳ ವಲಯದ ವ್ಯಾಪ್ತಿಯಲ್ಲಿ ಸುಮಾರು 425 ಧರ್ಮಸ್ಥಳದ ಸ್ವಸಹಾಯ ಗುಂಪುಗಳಿದ್ದು ಅದರಲ್ಲಿ 219 ಸ್ವಸಹಾಯ ಸಂಘಗಳಿಗೆ 14 ಲಕ್ಷ ಲಾಭಾಂಶ ಮೊತ್ತವನ್ನು ಪೂಜ್ಯರು ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀವಿರೇಂದ್ರ ಹೆಗ್ಗೆಡೆಯವರು ಮಂಜೂರಾತಿಯನ್ನು ಮಾಡಿರುತ್ತಾರೆ. 5ವರ್ಷ ಪೂರ್ಣಗೊಂಡಿರುವ ತಂಡಗಳಿಗೆ ಲಾಭಾಂಶವು ಮಂಜೂರಾತಿಯಾಗಿರುತ್ತದೆ. ಈ ಲಾಭಾಂಶವನ್ನು ವಲಯದ ಮೇಲ್ವಿಚಾರಕರಾದ ಸಂತೋಷರವರು ತಿಳಿಸಿದ್ದಾರೆ.
5ವರ್ಷ ಪೂರ್ಣಗೊಂಡ ಸಂಘಗಳಿಗೆ ಲಾಭಾಂಶವನ್ನು ವಿತರಣೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಊರಿನ ಪ್ರಮುಖರಾದ ಶಮ್ಸುದಿನ್ ತಹಸೀಲ್ದಾರ ಮಾತನಾಡಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಬಡ ಜನರಿಗೆ ಬಹಳಷ್ಟು ಅನುಕೂಲವಾಗಿದೆ. ಆರ್ಥಿಕವಾಗಿ ಸಬಲರಾಗಲೂ ಇಂತಹ ಸಂಘಗಳು ಕಾರ್ಯನಿರ್ವಹಿಸುವುದರಿಂದ ಆರ್ಥಿಕವಾಗಿ ಹಿಂದುಳಿದ ಜನರು ಮುಂದೆ ಬರಲು ಸಹಾಯಕವಾಗಿದೆ. ಶ್ರೀಕ್ಷೇತ್ರ ಧರ್ಮಸ್ಥಳದ ಸ್ವಸಹಾಯ ಸಂಘದ ಸದಸ್ಯರಿಗೆ ಲಾಭಾಂಶವನ್ನು ಮಂಜೂರಾತಿ ಮಾಡಿದಂತಹ ಪೂಜ್ಯರಿಗೆ ಎಷ್ಟು ಅಭಿನಂದನೆ ಸಲ್ಲಿಸಿದರೂ ಸಾಲದು. ಲಾಭಾಂಶ ಆರ್ಥಿಕವಾಗಿ ಸಂಘದ ಸದಸ್ಯರಿಗೆ ತುಂಬಾ ಅನುಕೂಲವಾಗಿದೆ. ಎಂದು ಹೇಳಿದರು. ಸಂಘದ ಸದಸ್ಯರು ಕೂಡಾ ತುಂಬ ಸಂತಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಒಕ್ಕೂಟದ ಪದಾಧಿಕಾರಿಗಳು ಸೇವಾ ಪ್ರತಿನಿಧಿಗಳು ಹಾಗೂ ತಂಡದ ಸದಸ್ಯರು ಇದ್ದರು.

Social Plugin