ಕುಂದರನಾಡಿನ ಗ್ರಾಮ ಪಂಚಾಯಿತಿ ನೂತನ ಕಟ್ಟಡ ಉದ್ಘಾಟನೆ.
ವರದಿ : ಮಲ್ಲಿಕಾರ್ಜುನ ಘೋಸರವಾಡ.

ಬೆಳಗಾವಿ: ಶ್ರೀ ರಮೇಶ್ ಅಣ್ಣಾ ಜಾರಕಿಹೊಳಿ ಅವರ ಅನುಪಸ್ಥಿತಿಯಲ್ಲಿ ಕುಂದರನಾಡಿನ ಗ್ರಾಮ ಪಂಚಾಯತ್ ಅಂಕಲಿಗಿ ನೂತನ ಕಟ್ಟಡ ಉದ್ಘಾಟನಾ ಸಮಾರಂಭ ಮುಖ್ಯಅತಿಥಿಗಳಾಗಿ ಯುವ ನಾಯಕರಾದ ಶ್ರೀ ಅಮರನಾಥ ಜಾರಕಿಹೊಳಿ ಅವರು ಭಾಗವಹಿಸಿ ನೂತನ ಕಟ್ಟಡ ಉದ್ಘಾಟಿಸಿ ಲೋಕಾರ್ಪಣೆ ಮಾಡಿದರು. ಕಾರ್ಯಕ್ರಮದ ದಿವ್ಯ ಸಾನಿಧ್ಯ ಪ. ಪೂ. ಶ್ರೀ ಗುರುಸಿದ್ಧ ಮಹಾಸ್ವಾಮಿಗಳು ಅಂಕಲಗಿ ಮಠ, ಕುಂದರನಾಡಿನ ಮುಖಂಡರುಗಳಾದ ಶ್ರೀ ಭೀಮಗೌಡರ ಬ ಪೊಲೀಸ್ಗೌಡರು, ಶಿವಾನಂದ್ ಡೋಣಿ, ರಾಜು ತಳವಾರ ಸೇರಿದಂತೆ ಜಿಲ್ಲಾ ಪಂಚಾಯತ್ ಸದಸ್ಯರು, ಮತ್ತು ತಾಲೂಕ ಪಂಚಾಯಿತಿ ಸದಸ್ಯರು, ಅಂಕಲಗಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಅಧ್ಯಕ್ಷರು. ಉಪಾಧ್ಯಕ್ಷರು. ಸರ್ವ ಸದಸ್ಯರು.ಕುಂದರನಾಡು ಸುತ್ತಮುತ್ತಲಿನ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.