ವರದಿ : ವಿಜಯ ವಾಜಂತ್ರಿ

ತೇರದಾಳದ ಬಸ್ ನಿಲ್ದಾಣದ ಹತ್ತಿರ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ ಕಟೀಲರವರನ್ನು ಬಿಜೆಪಿ ಮುಖಂಡರು ಸತ್ಕರಿಸಿದರು.

ತೇರದಾಳದಲ್ಲಿ ನಳಿನ್‍ಕುಮಾರಗೆ ಸ್ವಾಗತ ಬೀಳ್ಕೊಡುಗೆ

ತೇರದಾಳ : ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ ಕಟೀಲರವರು ಬಾಗಲಕೋಟೆಯಿಂದ ತೇರದಾಳ ಮಾರ್ಗವಾಗಿ ಕಾಗವಾಡಕ್ಕೆ ಹೋಗುವ ಸಂದರ್ಭದಲ್ಲಿ ಪಟ್ಟಣದ ಬಿಜೆಪಿ ಮುಖಂಡರು ಅವರ ಕಾರನ್ನು ನಿಲ್ಲಿಸಿ ಸ್ವಾಗತಿಸಿ ಶ್ಯಾಲು ಹೊದಿಸಿ ಹಾರ ಹಾಕಿ ಸತ್ಕರಿಸಲು ಪ್ರಯತ್ನಿಸಿದಾಗ ಅದನ್ನು ಅವರು ನಿರಾಕರಿಸಿದರು.

   ಈ ಸಂದರ್ಭದಲ್ಲಿ ಮಾತನಾಡಿದ ಅವರು ಕೋವಿಡ್ ಸಂಕಷ್ಟದ ಪರಿಸ್ಥಿತಿಯಲ್ಲಿ ನಾವು ಸನ್ಮಾನ ಸತ್ಕಾರ ಸ್ವೀಕರಿಸುವ ತಪ್ಪು. ರಾಜ್ಯದಲ್ಲಿ ಕೋವಿಡ್ ಮಹಾಮಾರಿಯಿಂದಾಗಿ ಸಾಕಷ್ಟು ಜನರು ಆಸ್ಪತ್ರೆಯಲ್ಲಿ ನರಳುತ್ತಿದ್ದಾರೆ. ಸಾವುಗಳು ಹೆಚ್ಚುತ್ತಿವೆ ಅದಕ್ಕಾಗಿ ಇದೆಲ್ಲ ತರವಲ್ಲವೆಂದು ಸನ್ಮಾನವನ್ನು ನಿರಾಕರಿಸಿ ತೇರದಾಳ ಮಾರ್ಗವಾಗಿ ಕಾಗವಾಡಕ್ಕೆ ಹೋಗಲು ಬೀಳ್ಕೊಟ್ಟರು . 

   ಈ ಸಂದರ್ಭದಲ್ಲಿ ಸದಾಶಿವ ಹೊಸಮನಿ, ಬಿಜೆಪಿ ನಗರ ಘಟಕ ಪ್ರಭಾರಿ ಅಧ್ಯಕ್ಷ ರಾಮಣ್ಣ ಹಿಡಕಲ್, ಪ್ರಭು ಬಾಗಿ ಸಚಿನ್ ಕೊಡತೆ ಕೇದಾರಿ ಪಾಟೀಲ ಸೇರಿದಂತೆ ಇನ್ನಿತರರು ಇದ್ದರು.