ವರದಿ : ವಿಜಯ ವಾಜಂತ್ರಿ

ತೇರದಾಳದ ಸರಕಾರಿ ಆಸ್ಪತ್ರೆಯಲ್ಲಿ ಕೊರೊನಾ ಲಸಿಕೆಯನ್ನು ಹಾಕಿಸುವಲ್ಲಿ ಆಸ್ಪತ್ರೆ ಸಿಬ್ಬಂದಿಯವರು ತಾರತಮ್ಯ ಮಾಡುತ್ತಿದ್ದಾರೆ ಎಂದು ಇಂದು ಕಾಂಗ್ರೇಸ್ ಕಾರ್ಯಕರ್ತರು ಆರೋಪಿಸಿದರು.

ಕೊರೊನಾ ಲಸಿಕೆಯನ್ನು ಹಾಕಿಸುವಲ್ಲಿ ಆಸ್ಪತ್ರೆ ಸಿಬ್ಬಂದಿಯವರು ತಾರತಮ್ಯ 

ತೇರದಾಳ : ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ಕೊರೊನಾ ಲಸಿಕೆಯನ್ನು ಹಾಕಿಸುವಲ್ಲಿ ಆಸ್ಪತ್ರೆ ಸಿಬ್ಬಂದಿಯವರು ತಾರತಮ್ಯ ಮಾಡುತ್ತಿದ್ದಾರೆ ಎಂದು ಇಂದು ಕಾಂಗ್ರೇಸ್ ಕಾರ್ಯಕರ್ತರು ಆಸ್ಪತ್ರೆಯ ಆವರಣದಲ್ಲಿ ಜಮಾವಣೆಗೊಂಡು ಆರೋಪಿಸಿದರು.

  ಸರಕಾರದ ನಿಯಮದ ಪ್ರಕಾರ ಸಿಬ್ಬಂದಿಯವರು ಲಸಿಕೆಯನ್ನು ವಿತರಿಸುವಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ. ಈ ಕುರಿತು ಆಸ್ಪತ್ರೆ ವೈದ್ಯಾಧಿಕಾರಿ ಡಾ.ಸುದರ್ಶನ್ ನಿಡೋಣ ಯವರ ಜೊತೆ ಕಾಂಗ್ರೇಸ್ ಕಾರ್ಯಕರ್ತರ ಮಾತಿನ ಚಕಮಕಿ ನಡೆಯಿತು. ಸರಕಾರದ ನಿಯಮದಂತೆ ಕೊರೊನಾ ವಾರಿಯರ್ಸ್ ಹಾಗೂ ಪ್ರಂಟ್ ಲೈನ್ ಇದ್ದವರಿಗೆ ಲಸಿಕೆಯನ್ನು ಕೊಡಬೇಕು. ಹಾಗೂ 45 ವರ್ಷ ವಯಸ್ಸು ಮೇಲ್ಪಟ್ಟವರಿಗೆ ಲಸಿಕೆಯನ್ನು ಕೊಡಬೇಕು. ಈಗಾಗಲೇ 45 ವಯೋಮಿತಿ ಒಳಗಿನವರಿಗೆ ಸಾಕಷ್ಟು ಜನರಿಗೆ ಲಸಿಕೆಯನ್ನು ಕೊಟ್ಟಿದ್ದಾರೆ. ವಾರ್ಡ ಹಾಗೂ ಗಲ್ಲಿಗಳಲ್ಲಿ ಲಸಿಕೆಯನ್ನು ಕೊಡುತ್ತಿರುವುದು ಕಂಡು ಬಂದಿದೆ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿಯೇ ಲಸಿಕೆಯನ್ನು ಕೊಡಬೇಕು ಅದನ್ನು ಬಿಟ್ಟು ವಾರ್ಡ ಅಥವಾ ಗಲ್ಲಿ ಗಲ್ಲಿಯಲ್ಲಿ ಕೊಡಬಾರದು. ಸರಕಾರಿ ಆಸ್ಪತ್ರೆಗೆ ಬಂದ ಸಾರ್ವಜನಿಕರಿಗೆ ಮೊದಲು ಲಸಿಕೆಯನ್ನು ಕೊಡಬೇಕು. ಲಸಿಕೆ ಉಳಿದ ನಂತರ ವಾರ್ಡ ಅಥವಾ ಗಲ್ಲಿಗಳಲ್ಲಿ ಕೊಡಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದು ಮುಂಜಾನೆಯಿಂದ ಸರದಿಯಲ್ಲಿ ನಿಂತು ಲಸಿಕೆ ಸಿಗದೇ ಮರಳಿ ಮನೆಗೆ ಹೋಗುತ್ತಾರೆ. ಬಡವರು ಕೂಲಿಯನ್ನು ಬಿಟ್ಟು ಲಸಿಕೆಯನ್ನು ಹಾಕಿಸಿಕೊಳ್ಳಲು ಬಂದಿರುತ್ತಾರೆ ಅವರಿಗೆ ಅನ್ಯಾಯವಾಗಬಾರದು ಎಂದು ಕಾಂಗ್ರೆಸ್ ಮುಖಂಡರು ಹೇಳಿದರು. ದಾಸರಟ್ಟಿಯಂತಹ ಕೆಲವು ಬಡ ಜನರು ವಾಸಿಸುವಂತ ಪ್ರದೇಶಗಳಲ್ಲಿ ಲಸಿಕೆಯನ್ನು ಈವರೆಗೆ ಹಾಕಿಲ್ಲ ಎಂದು ಅವರು ವಾರ್ಡ ಅಥವಾ ಗಲ್ಲಿಗಳನ್ನು ಬಿಟ್ಟು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿಯೇ ಲಸಿಕೆಯನ್ನು ಕೊಡಬೇಕು ಎಂದು ಅವರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸುದರ್ಶನ್ ನಿಡೋಣ  ಅವರನ್ನು ಒತ್ತಾಯಿಸಿದರು.

  ಈ ಸಂದರ್ಭದಲ್ಲಿ ಪಟ್ಟಣದ ಧನಿಗಳಾದ ಪ್ರವೀಣ ನಾಡಗೌಡ, ಪುರಸಭೆ ಸದಸ್ಯರಾದ ಸುರೇಶ ಕಬಾಡಗಿ, ಆಧಿನಾಥ ಸಪ್ತಸಾಗರ, ಪಜಲ್ ಅತಾರಾವುತ್, ಶೆಟ್ಟೆಪ್ಪ ಸುಣಗಾರ, ರುಸ್ತುಂ ನಿಪ್ಪಾಣ , ಗೌತಮ ರೋಡಕರ, ಕುಮಾರ ಪಾತ್ರೋಟ, ರಾಜೇಸಾಬ ನಗಾರ್ಜಿ, ಶಿವಪ್ಪ ಖವಾಸಿ ಸೇರಿದಂತೆ ಇನ್ನಿತರರು ಇದ್ದರು.