ತೇರದಾಳ ಸರಕಾರಿ ಆಸ್ಪತ್ರೆ ಸಮೀಪದಲ್ಲಿ ನಡೆದ ಸುದ್ದಿ ಗೋಷ್ಟಿಯಲ್ಲಿ ಪ್ರವೀಣ ನಾಡಗೌಡ ಮಾತನಾಡಿದರು.
ತೇರದಾಳ : ದುಬಾರಿ ಬೆಲೆಯಲ್ಲಿ ಹುರಳಿ ಬೀಜಗಳನ್ನು ಮಾರಾಟ ಮಾಡುತ್ತಿರುವುದರಿಂದ ಬಡ ರೈತರಿಗೆ ಇದು ಹೊರೆಯಾಗಿದೆ. ಸಂಕಷ್ಟದ ಪರಿಸ್ಥಿತಿಯಲ್ಲಿ ಬೀಜ ಗೊಬ್ಬರಗಳ ಬೆಲೆ ಗಗನಕ್ಕೇರಿದೆ ಅದನ್ನು ಕಡಿಮೆ ಮಾಡಿ ಕಳೆದ ವರ್ಷ ಹುರಳಿ ಬೀಜಗಳಿಗಿದ್ದ ಬೆಲೆಯಂತೆ ಈ ವರ್ಷ ಮಾರಾಟ ಮಾಡಬೇಕು ಎಂದು ಯುವ ಮುಖಂಡ ಪ್ರವೀಣ ನಾಡಗೌಡ ಸರಕಾರಕ್ಕೆ ಆಗ್ರಹಿಸಿದರು.
ಕಳೆದ ವರ್ಷ ಸರಿಯಾಗಿ ಮಳೆಯಾಗಿದ್ದರಿಂದ ರೈತ ಸಂಪರ್ಕ ಕೇಂದ್ರದಿಂದ ಹುರಳಿ ಬೀಜಗಳನ್ನು 30ಕೆ.ಜಿ ಒಂದು ಪಾಕೀಟನ್ನು 1260 ರೂ.ಗಳಿಗೆ ಒಂದು ಪಾಕೀಟನ್ನು ತಂದು ಬಿತ್ತಿಗೆ ಮಾಡಿದ್ದೇವು. ಒಂದು ವರ್ಷದಲ್ಲಿ 2370ರೂ. ಗೆ 30 ಕೆ.ಜಿ ಒಂದು ಪಾಕೀಟು ಎಂದು ಸರಕಾರ ನಿಗದಿ ಪಡಿಸಿದೆ ಇದು ರೈತರಿಗೆ ಹೊರೆಯಾಗಿದೆ. ರಸಗೊಬ್ಬರ, ಔಷಧಿಗಳ ಬೆಲೆ ಸಾಕಷ್ಟು ತುಟ್ಟಿಯಾಗಿದ್ದರಿಂದ ರೈತರಿಗೆ ಇದು ಹೊರೆಯಾಗಿದೆ. ಈಗಾಗಲೇ ಲಾಕ್‍ಡೌನದಿಂದಾಗಿ ಹೂವು, ಹಣ್ಣು,ತರಕಾರಿಗಳು ಹಾಳಾಗಿ ಹೋಗಿ ರೈತರು ಸಾಕಷ್ಟು ನಷ್ಟವನ್ನು ಅನುಭವಿಸುತ್ತಿದ್ದಾರೆ. ಅದಕ್ಕೆ ಸರಕಾರದವರು ಹುರಳಿ ಬೀಜವನ್ನು ಕಳೆದ ವರ್ಷದಲ್ಲಿರುವ ಬೆಲೆ 1260ರೂ.ಗಳಿಗೆ ಮಾರಾಟ ಮಾಡಬೇಕು. ಈಗ ನಿಗದಿ ಪಡಿಸಿರುವ ಬೆಲೆಯಲ್ಲಿ ಖರೀದಿ ಮಾಡಿ ಬಿತ್ತುವುದು ಅನಿವಾರ್ಯವಾದರೂ ರೈತರಿಗೆ ನಾಳೆ ಪೇಟೆಯಲ್ಲಿ ಯೋಗ್ಯ ಬೆಲೆ ಸಿಗದೇ ರೈತರು ಪರದಾಡಬೇಕಾಗುತ್ತದೆ. ಗೊಂಜಾಳ, ಸೂರ್ಯಕಾಂತಿ ಸೇರಿದಂತೆ ಇನ್ನಿತರ ಬೆಳೆಗಳಿಗೆ ಸರಕಾರದವರು ಬೆಂಬಲ ಬೆಲೆ ಕೊಡಬೇಕು. ಕಬ್ಬಿನ ಬಿಲ್ಲುಗಳು ಇನ್ನೂವರೆಗೆ ಪೂರ್ಣ ಪ್ರಮಾಣದಲ್ಲಿ ಪಾವತಿಯಾಗಿರುವುದಿಲ್ಲ. ಬಾಕಿ ಉಳಿದುಕೊಂಡಿದೆ. ಅದನ್ನು ಸಹ ಬಿಲ್ಲ್ ಕೊಡುವಂತ ವ್ಯವಸ್ಥೆಯಾಗಬೇಕು. ಕಬ್ಬು ಕಳುಹಿಸಿ ಆರು ತಿಂಗಳು ಕಳೆದರು ಎಫ್‍ಆರ್‍ಪಿ ದರ ಪಟ್ಟಿ ಪ್ರಕಾರ ರೈತರಿಗೆ ಬಿಲ್ ನ್ನು ಹಾಕಿರುವುದಿಲ್ಲ. ಮಂತ್ರಿಗಳು ಹಾಗೂ ಸಚಿವರಲ್ಲಿ ಕಬ್ಬಿನ ಕಾರ್ಖಾನೆಗಳಿಗೆ ಬಿಲ್ ನ್ನು ಕೊಡುವಂತೆ ನೋಟಿಸ್‍ನ್ನು ಕೊಡಲಾಗಿದೆ ಎಂದು ಮಾಧ್ಯಮಗಳ ಮುಖಾಂತರ ರೈತರಿಗೆ ತಿಳಿಸಿದ್ದಾರೆ. ಆದರೆ ಯಾವುದೇ ಅನುಕೂಲ ರೈತರಿಗೆ ಆಗಿಲ್ಲ ಆದಷ್ಟು ಬೇಗನೆ ಕಾರ್ಖಾನೆಯವರು ಬಡ ರೈತರಿಂದ ಉಳಿಸಿಕೊಂಡಿರುವ ಬಿಲ್ ನ್ನು ಪಾವತಿಸಬೇಕು ಎಂದು ಅವರು ಆಗ್ರಹಿಸಿದರು.
ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕೋವಿಡ್ ಪರಿಸ್ಥಿತಿಯಲ್ಲಿ ತಾರತಮ್ಯದೊಂದಿಗೆ ಪ್ಯಾಕೇಜನ್ನು ಬಿಡುಗಡೆಗೊಳಿಸಿದರೂ ಅರ್ಹ ಫಲಾನುಭವಿಗಳಿಗೆ ಹಾಗೂ ಸಾಮಾನ್ಯ ಜನರಿಗೆ ಇಲ್ಲಿಯವರೆಗೆ ಪರಿಹಾರ ಮುಟ್ಟಿರುವುದಿಲ್ಲ. ಪೆಟ್ರೋಲ್ ಹಾಗೂ ಡಿಸೇಲ್‍ಗಳು ಬೆಲೆ ನೂರರ ಗಡಿ ದಾಟಿದೆ, ಸಾಮಾನ್ಯ ಜನರು ಬದುಕಲಾರದ ಪರಿಸ್ಥಿತಿ ಇದೆ. ದಿನ ನಿತ್ಯ ಬಳಕೆಯ ಆಹಾರ ಪದಾರ್ಥಗಳ ಬೆಲೆಯು ಗಗನಕ್ಕೇರಿದೆ ಇದರಿಂದ ಸಾಮಾನ್ಯ ಜನರು ಬದುಕಲಾರದಂತಾಗಿದೆ. ಸರಕಾರ ನೆರವಿಗೆ ಬಂದು ಅವರಿಗೆ ಹೆಚ್ಚಿನ ಪ್ಯಾಕೇಜ್ ಘೋಷಿಸಬೇಕು ಎಂದು ಪುರಸಭೆ ಸದಸ್ಯ ಶೆಟ್ಟೆಪ್ಪ ಸುಣಗಾರ ಸರಕಾರವನ್ನು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಸುರೇಶ ಕಬಾಡಗಿ, ಆಧಿನಾಥ ಸಪ್ತಸಾಗರ, ಪಜಲ್ ಅತಾರಾವುತ್, ರುಸ್ತುಂ ನಿಪ್ಪಾಣ , ಗೌತಮ ರೋಡಕರ, ಕುಮಾರ ಪಾತ್ರೋಟ, ರಾಜೇಸಾಬ ನಗಾರ್ಜಿ, ಶಿವಪ್ಪ ಖವಾಸಿ ಸೇರಿದಂತೆ ಇನ್ನಿತರರು ಇದ್ದರು.
Social Plugin