ತೇರದಾಳದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಗೆ ಶಾಸಕ ಸಿದ್ದು ಸವದಿ ಟ್ಯಾಬಲೇಟ್ ಪಿಸಿಗಳನ್ನು ವಿತರಿಸಿದರು.
ತೇರದಾಳ : ದೇಶದ ಅಭಿವೃದ್ಧಿಯಾಗಬೇಕಾದರೆ ಶಾಲಾ ಕೋಣೆಗಳಿಂದ ಮಾತ್ರ ಸಾಧ್ಯ. ಪದವಿ ವಿದ್ಯಾರ್ಥಿಗಳಿಗೆ ಆನ್‍ಲೈನ್ ತರಗತಿಗಳನ್ನು ಆಲಿಸಲು ಅನುಕೂಲವಾಗುವ ಸದುದ್ದೇಶದಿಂದ ಸರಕಾರ ಟ್ಯಾಬಲೇಟ್ ಪಿಸಿಗಳನ್ನು ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಉಚಿತವಾಗಿ ವಿತರಿಸಲಾಗುತ್ತಿದೆ ಎಂದು ಶಾಸಕ ಸಿದ್ದು ಸವದಿ ಹೇಳಿದರು.
ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಐಸಿಟಿ ಸ್ಮಾರ್ಟ ಕ್ಲಾಸ್ ಉದ್ಘಾಟಿಸಿ, ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಸರಕಾರದಿಂದ ಉಚಿತವಾಗಿ ಟ್ಯಾಬಲೇಟ್ ಪಿಸಿಗಳನ್ನು ವಿತರಿಸಿ ಮಾತನಾಡಿದರು. ಕೊರೊನಾ ಸಂದರ್ಭದಲ್ಲಿ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು. ಶಿಕ್ಷಣಕ್ಕೆ ಮಾತ್ರ ಇದನ್ನು ಬಳಸುವ ಮೂಲಕ ಸದುಪಯೋಗ ಪಡೆದುಕೊಳ್ಳಬೇಕು. ಬಹು ದೊಡ್ಡ ಪ್ರಮಾಣದಲ್ಲಿ ಶಿಕ್ಷಣಕ್ಕಾಗಿ ಅನುದಾನವನ್ನು ಖರ್ಚು ಮಾಡುತ್ತಿದೆ. 18ಸಾವಿರ ಕೋಟಿ ರೂ.ಗಳನ್ನು ಪ್ರಾಥಮಿಕ ಶಿಕ್ಷಣಕ್ಕಾಗಿ ಖರ್ಚು ಮಾಡುತ್ತಿದೆ. ರಾಜ್ಯ ಸರಕಾರಕ್ಕೆ ಎಷ್ಟೋ ತೊಂದರೆಗಳು ಬಂದಿದ್ದರು ಅದನ್ನು ಬದಿಗಿಟ್ಟು ಶಿಕ್ಷಣಕ್ಕಾಗಿ ಅಗಾಧವಾದ ಬಜೆಟ್‍ನ್ನು ಶಿಕ್ಷಣಕ್ಕಾಗಿ ಖರ್ಚು ಮಾಡುತ್ತಿದೆ. ವಿದ್ಯಾರ್ಥಿಗಳು ಮನಸಾ ಪೂರ್ವಕವಾಗಿ ಅಧ್ಯಯನ ಮಾಡಿದರೆ ಅವರು ಜೀವನದಲ್ಲಿ ಶೈಕ್ಷಣಿಕವಾಗಿ ಯಶಸ್ವಿಯಾಗುತ್ತಾರೆ. ಉದಾತ್ತವಾದ ಗುರಿಯಿಟ್ಟುಕೊಂಡು ಗುರಿ ಮುಟ್ಟುವ ಆಲೋಚನೆ ಮಾಡಿ ಸರಕಾರ ಸೌಲಭ್ಯಗಳನ್ನು ಬಳಸಿಕೊಂಡು ಶೈಕ್ಷಣಿಕವಾಗಿ ಮುಂದೆ ಬರಬೇಕು. ಸರಕಾರದಿಂದ ದೊರೆಯುವ ಸೌಲಭ್ಯಗಳನ್ನು ಪಡೆದು ಮುಂದೆ ನೀವು ಅನೇಕ ಕ್ಷೇತ್ರಗಳಲ್ಲಿ ಸೇವೆ ಮಾಡುವ ಮೂಲಕ ಸಂಪಾದನೆ ಮಾಡಿ ಸರಕಾರಕ್ಕೆ ಟ್ಯಾಕ್ಸ ಕೊಡುವ ಮೂಲಕ ಸರಕಾರದ ಋಣ ತೀರಿಸಬೇಕು. ಕಾಲೇಜು ಆಟದ ಮೈದಾನವನ್ನು ಹಾಗೂ ಮೂಲ ಭೂತ ಸೌಲಭ್ಯಗಳನ್ನು ಅಭಿವೃದ್ಧಿ ಪಡಿಸುವ ಮೂಲಕ ಸ್ಥಳೀಯ ಸುಧಾರಣಾ ಸಮೀತಿಯವರು ಶ್ರಮವಹಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಐಸಿಟಿ ಸ್ಮಾರ್ಟ ಕ್ಲಾಸ್ ಉದ್ಘಾಟನೆಯನ್ನು ಮಾಡಲಾಯಿತು. ಪದವಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ 30 ಉಚಿತ ಟ್ಯಾಬಲೇಟ್ ಪಿಸಿಗಳನ್ನು ಸಾಂಕೇತಿಕವಾಗಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಹಾವೀರ ಕೊಕಟನೂರ, ರಾಮಣ್ಣ ಹಿಡಕಲ್ಲ, ರಮೇಶ ಧರೆನ್ನವರ, ಸುರೇಶ ರೇಣಕೆ, ಬಾಳು ದೇಶಪಾಂಡೆ, ಅಪ್ಪು ಮಂಗಸೂಳಿ, ಸಿದ್ದು ಅಮ್ಮಣಗಿ, ವಿಜಯ ಬಿಜ್ಜರಗಿ, ವಿಠ್ಠಲ ಹಾಡಕರ ಸೇರಿದಂತೆ ಪುರಸಭೆ ಸದಸ್ಯರು ಮತ್ತು ಶಾಲಾ ಅಭಿವೃದ್ಧಿ ಸದಸ್ಯರು ಇನ್ನಿತರರು ಇದ್ದರು. ಪ್ರಾಚಾರ್ಯ ಅಪ್ಪಣ್ಣ ಪೂಜಾರಿ ಸ್ವಾಗತಿಸಿ ನಿರೂಪಿಸಿದರು. ಡಾ. ಚೇತನ ಡಾಗ್ ವಂದಿಸಿದರು.

Social Plugin