ತೇರದಾಳ ಬಸ್ ನಿಲ್ದಾಣದಲ್ಲಿನ ಮಳಿಗೆಗಳನ್ನು ಬಾಡಿಗೆ ನೀಡುವಂತೆ ಶಾಸಕ ಸಿದ್ದು ಸವದಿಯವರಿಗೆ ಮನವಿ ಸಲ್ಲಿಸಿದರು.
ಬಸ್ ನಿಲ್ದಾಣದಲ್ಲಿನ ಮಳಿಗೆಗಳನ್ನು ಬಾಡಿಗೆ ನೀಡುವಂತೆ ಮನವಿ
ತೇರದಾಳ : ಪಟ್ಟಣದ ಬಸ್ ನಿಲ್ದಾಣದಲ್ಲಿನ ಮಳಿಗೆಗಳನ್ನು ಬಾಡಿಗೆ ನೀಡುವಂತೆ ಶಾಸಕ ಸಿದ್ದು ಸವದಿಯವರಿಗೆ ಪುರಸಭೆ ಸದಸ್ಯರು ಹಾಗೂ ಸಾರ್ವಜನಿಕರು ಸೇರಿ ಮನವಿ ಸಲ್ಲಿಸಿದರು.
ಬಸ್ ನಿಲ್ದಾಣದಲ್ಲಿ ಬಹಳ ದಿನಗಳಿಂದ ಮಳಿಗೆಗಳು ಖಾಲಿ ಇದ್ದದರಿಂದ ಅದನ್ನು ಸಾರಿಗೆ ಇಲಾಖೆಯವರು ಅವರ ಅಂದಾಜು ಮೊತ್ತ ನಿಗಧಿ ಮಾಡದೇ ಇರುವ ಕಾರಣ ಯಾವುದೇ ಬಾಡಿಗೆದಾರರು ಬರುತ್ತಿಲ್ಲ. ಕಾರಣ ಸಾರಿಗೆ ಇಲಾಖೆಯವರು ಜೊತೆ ಚರ್ಚಿಸಿ ನಗರದಲ್ಲಿ ಈಗ ಮಾರುಕಟ್ಟೆಯ ಪ್ರಕಾರ ಅಂದಾಜು ಮೊತ್ತ ನಿಗಧಿ ಮಾಡಲು ಅಧಿಕಾರಿಗಳಿಗೆ ತಿಳಿಸಿ ಹಾಗೂ ಬಸ್ ನಿಲ್ದಾಣಕ್ಕೆ ಬರುವ ಸಾರ್ವಜನಿಕರಿಗೆ ಸಂಚಾರ ಮಾಡುವವರಿಗೆ ಊಟ ಮತ್ತು ಉಪಹಾರ ತೊಂದರೆಯಾಗುತ್ತಿದ್ದು, ಪಟ್ಟಣದ ಬಸ್ ನಿಲ್ದಾಣಿನಲ್ಲಿ ಇನ್ನು ಸ್ವಲ್ಪ ಅಭಿವೃದ್ಧಿ ಪಡಿಸಿ ಕ್ಯಾಂಟೀನ ಮಾಡಿ ಕೊಡಬೇಕೆಂದು ಪುರಸಭೆ ಸದಸ್ಯರು ಹಾಗೂ ಸಾರ್ವಜನಿಕರು ಸೇರಿ ಶಾಸಕರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ನಗರ ಘಟಕ ಅಧ್ಯಕ್ಷ ಮಹಾವೀರ ಕೊಕಟನೂರ, ಸಂತೋಷ ಜಮಖಂಡಿ, ಸದಾಶಿವ ಹೊಸಮನಿ, ರಾಮಣ್ಣ ಹಿಡಕಲ್ಲ, ಸುನೀಲ ಬಾವಿ, ವಿಷ್ಣು ಘಟ್ಟೆನ್ನವರ, ಶಂಕರ ಕುಂಬಾರ, ಕುಮಾರ ಸರಿಕರ, ಸಂಗಮೇಶ ಕಾಲತಿಪ್ಪಿ, ವಿನಯಕ ಬಂಕಾಪೂರ, ಕಾಶೀನಾಥ ರಾಠೋಡ, ಅನೀಲ ವಡ್ಡರ, ಅಲ್ಲಪ್ಪ ಬಾಬಗೊಂಡ,ವಿರಾಜ ಬಂಕಾಪೂರ, ಆಕಾಶ ತೇಲಿ, ಸುರೇಶ ಪರೀಟ ಸೇರಿದಂತೆ ಇನ್ನಿತರರು ಇದ್ದರು.
Social Plugin