ಲಸಿಕೆ ಅಭಾವದಿಂದ ಶಿಬಿರ ನಡೆಸಲಾಗುತ್ತಿಲ್ಲ : ಬೆನಕೆ.
ವರದಿ : ಮಲ್ಲಿಕಾರ್ಜುನ ಘೋಸರವಾಡ.

ಬೆಳಗಾವಿ: 'ಕೋವಿಡ್ ಲಸಿಕೆ ಅಭಾವದಿಂದಾಗಿ ಎರಡು ದಿನಗಳಿಂದ ಉತ್ತರ ಮತ ಕ್ಷೇತ್ರದಲ್ಲಿ ಶಿಬಿರಗಳನ್ನು ನಡೆಸಲಾಗುತ್ತಿಲ್ಲ' ಎಂದು ಬಿಜೆಪಿ ಶಾಸಕ ಅನಿಲ ಬೆನಕೆ ತಿಳಿಸಿದ್ದಾರೆ.
ಈ ಬಗ್ಗೆ ಶನಿವಾರ ಪ್ರಕಟಣೆ ನೀಡಿರುವ ಅವರು, 'ನಗರದ ವಿವಿಧ ಪ್ರದೇಶಗಳಲ್ಲಿ ಶಿಬಿರಗಳನ್ನು ನಡೆಸಿ, ಅರ್ಹರೆಲ್ಲರಿಗೂ ಲಸಿಕೆ ನೀಡಬೇಕೆಂದು ನಾನು ಹಾಗೂ ನಮ್ಮ ಕಾರ್ಯಕರ್ತರು ಶ್ರಮಿಸುತ್ತಿದ್ದೇವೆ. ಜಾತಿ, ಮತ ಹಾಗೂ ಭಾಷೆ ಎನ್ನದೆ ಎಲ್ಲರೂ ನಮ್ಮ ಕುಟುಂಬವೆಂದು ತಿಳಿದು ಕೆಲಸ ಮಾಡುತ್ತಿದ್ದೇನೆ' ಎಂದು ತಿಳಿಸಿದ್ದಾರೆ.
'ಲಸಿಕೆ ಅಭಾವ ಎದುರಾಗಿರುವ ವಿಷಯವಾಗಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್, ಆರೋಗ್ಯ ಇಲಾಖೆ ಕಾರ್ಯದರ್ಶಿ ಜಾವೇದ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರೊಂದಿಗೆ ಚರ್ಚಿಸಿದ್ದೇನೆ.