ಕಾರ - ಬೈಕ್ ಡಿಕ್ಕಿ :ಓರ್ವ ಸ್ಥಳದಲ್ಲಿಯೇ ಸಾವು...
ವರದಿ : ಮಲ್ಲಿಕಾರ್ಜುನ ಘೋಸರವಾಡ.

ಮಹಾಲಿಂಗಪುರ :ಕಾರ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದ ಘಟನೆ ಮಹಾಲಿಂಗಾಪುರದ ನಾಗಪ್ಪನ ಗುಡಿ ಹತ್ತಿರ. ಮುದೋಳ -ನಿಪ್ಪಾಣಿ ರಾಜ್ಯ ಹೆದ್ದಾರಿಯಲಿ ಇಂದು (ದಿ 26) ಮಧ್ಯಾಹ್ನ ನಡಿದಿದೆ. ಅಪಘಾತಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.
 ಅಪಘಾತವಾದ ಬೈಕಿನಲ್ಲಿ ಇಬ್ಬರು ಸಂಚರಿಸುತ್ತಿದ್ದ ಓರ್ವ ಸ್ಥಳದಲ್ಲೇ ಮೃತಪಟ್ಟರೆ ಇನ್ನೊಬ್ಬನಿಗೆ ಗಂಭೀರ ಗಾಯಾಳುಗಳಾಗಿ ಮಾಲಿಂಗಪುರ ಆಸ್ಪತ್ರೆಗೆ ಸಾಗಿಸಲಾಗಿದೆ.
 ಗಾಯಾಳು ಹಳ್ಳೂರ ಗ್ರಾಮದ ಗೋಪಾಲ್ ಕುಂದರಗಿ ಎಂದು ಗುರುತಿಸಲಾಗಿದೆ. ಮೃತ ವ್ಯಕ್ತಿ ಮೂಡಲಗಿಯನ್ನಾಲಾಗಿದ್ದು. ಆರ್ಮಿಯಲಿ ಸೇವೆ ಸಲ್ಲಿಸುತಿದ್ದನೆಂದು ಹೇಳಲಾಗುತ್ತಿದೆ.ಆತನ ಪೂರ್ಣ ಮಾಹಿತಿ ಇನ್ನಷ್ಟುತಿಳಿದು ಬರಬೇಕಿದೆ.