ಬೆಳಗಾವಿಅಪ್ರಾಪ್ತೆ ಬಾಲಕಿ ಮೇಲೆ ಅತ್ಯಾಚಾರ, ಆರೋಪಿ ಪೋಲಿಸರ ವಶಕ್ಕೆ...!
ವರದಿ : ಮಲ್ಲಿಕಾರ್ಜುನ ಘೋಸರವಾಡ.

ಯಮಕನಮರಡಿ : ಬಾಲಕಿ ಮೇಲೆ ಸಂಬಂಧಿಕನಿಂದಲೇ ಆತ್ಯಾಚಾರ ನಡೆದ ಘಟನೆ ಹುಕ್ಕೇರಿ ತಾಲೂಕಿನ ಯಮಕನಮರಡಿ ಪೊಲೀಸ್ ಠಾಣೆ ವ್ಯಾಪ್ತಿ ಯಲ್ಲಿ ನಡೆದಿದ್ದು, ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮಾರುತಿ ಪೂಜೇರಿ ( 46 ) ಬಂಧಿತ ಆರೋಪಿ .

ಅಪ್ರಾಪ್ತಿಯ ತಂದೆ ಕುರಿ ಮೇಯಿಸಲು ಬೇರೆ ಊರಿನಲ್ಲಿ ಇರುತ್ತಿದ್ದು , ಬಾಲಕಿ ಅವಳ ಮಾವನ ಮನೆಯಲ್ಲಿದ್ದು ವಿದ್ಯಾಭ್ಯಾಸ ಮಾಡುತ್ತಿದ್ದಳು . ಪಕ್ಕದ ಜಮೀನಿನ ಮನೆಯಲ್ಲಿ ವಾಸವಿದ್ದ ವಿವಾಹಿತ ಮಾರುತಿ ಪೂಜೇರಿ ಬಹಿರ್ದೆಸೆಗೆ ಕಬ್ಬಿನ ಪಡದಲ್ಲಿ ಹೋದ ಅಪ್ರಾಪ್ತ ಮೇಲೆ ಅತ್ಯಾಚಾರ ಎಸಗಿದ್ದಾನೆ .

ಆಗ ಚೀರಾಟ ಕೇಳಿಸಿಕೊಂಡ ಸಂಬಂಧಿಕರು ಮನೆಯಿಂದ ಹೊರಗೆ ಹೋಗಿ ನೋಡಿದಾಗ ಆರೋಪಿ ಓಡಿ ಹೋಗಿದ್ದಾನೆ. ಮತ್ಯಾದಿಗೆ ಅಂಜಿದ ಅಪ್ರಾಪ್ತ ಯು ವಿಷ ಸೇವಿಸಿದ್ದು , ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ . ಪ್ರಕರಣಕ್ಕೆ ಸಂಬಂಧಿ ಸಿದಂತೆ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು , ಸ್ಥಳಕ್ಕೆ ಹುಕ್ಕೇರಿ ಸಿಪಿಐ ರಮೇಶ ಛಾಯಾಗೋಳ ಹಾಗೂ ಯಮಕನಮರಡಿ ಪಿಎಸೈ ಡಿ.ವಿ.ನ್ಯಾಮಗೌಡ ಭೇಟಿ ನೀಡಿ ಆರೋಪಿ ಮಾರುತಿ ಪೂಜೇರಿಯನ್ನು ಬಂಧಿಸಿದ್ದಾರೆ .