ವರದಿ : ವಿಜಯ ವಾಜಂತ್ರಿ
ತೇರದಾಳದ ಪೆಟ್ರೋಲ್ ಪಂಪ್‍ನಲ್ಲಿ ಇಂಧನ ಬೆಲೆ ಏರಿಕೆ ಖಂಡಿಸಿ ಮಾಜಿ ಸಚಿವೆ ಉಮಾಶ್ರೀ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.

ತೈಲ ಬೆಲೆ ಏರಿಕೆಯಿಂದಾಗಿ ಬಡವರು ಬದುಕು ಸಾಗಿಸುವಲ್ಲಿ ದುಸ್ತರವಾಗಿದೆ

ತೇರದಾಳ : ಕೊರೊನಾದಿಂದಾಗಿ ಬಡವರ ಬದುಕು ಕೊಚ್ಚಿಕೊಂಡು ಹೋಗಿದೆ. ಜಿಎಸ್‍ಟಿ ಹಾಗೂ ನೋಟ್ ಬ್ಯಾನ್‍ದಿಂದ ದೇಶದ ಆರ್ಥಿಕ ಪರಿಸ್ಥಿತಿ ತತ್ತರಿಸಿ ಹೋಗಿದೆ. ಸರಿಯಾದ ರೀತಿಯಲ್ಲಿ ಸರಕಾರ ಸರಿಯಾದ ರೀತಿಯಲ್ಲಿ ಆಡಳಿತ ಮಾಡುವಲ್ಲಿ ವಿಫಲವಾದ ಕಾರಣ ಕೊರೊನಾದಿಂದ ಸಾವು ನೋವುಗಳು ಹೆಚ್ಚಾಗಿವೆ. ಇಂತಹ ಪರಿಸ್ಥಿತಿಯಲ್ಲಿ ತೈಲ ಬೆಲೆ ಏರಿಕೆಯಿಂದಾಗಿ ಬಡವರು ಬದುಕು ಸಾಗಿಸುವಲ್ಲಿ ದುಸ್ತರವಾಗಿದೆ ಎಂದು ಮಾಜಿ ಸಚಿವೆ ಉಮಾಶ್ರೀ ಹೇಳಿದರು. 
   ಪಟ್ಟಣದ ಪೆಟ್ರೋಲ್ ಪಂಪಗಳಲ್ಲಿ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಏರಿಕೆ ಖಂಡಿಸಿ ಕೇಂದ್ರ ಹಾಗೂ ರಾಜ್ಯ ಸರಕಾರಗಳ ವಿರುದ್ಧ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮೀತಿ ತೇರದಾಳ ಸಮೀತಿಯಿಂದ ಹಮ್ಮಿಕೊಂಡ ಪ್ರತಿಭಟನೆ ಸಂದರ್ಭದಲ್ಲಿ ಮಾತನಾಡಿದ ಅವರು ಎಲ್ಲರ ಬದುಕಿಗೆ ಮೂಲ ಆಧಾರವೇ ದಿನ ನಿತ್ಯ ಬಳಕೆಯ ವಸ್ತುಗಳು. ಉದ್ಯೋಗವಿಲ್ಲದೆ ಬಡಜನರು ಸಾಕಷ್ಟು ತೊಂದರೆಯನ್ನು ಅನುಭವಿಸುತ್ತಿದ್ದರೂ ಕೇಂದ್ರ ಹಾಗೂ ರಾಜ್ಯ ಸುಮ್ಮನೆ ಕುಳಿತಿದೆ. ಕೇಂದ್ರ ಹಾಗೂ ರಾಜ್ಯ ಸರಕಾರ ಮತ್ತು ಬಿಜೆಪಿಯವರು ಸುಳ್ಳುಗಾರರು. ವಿಚಿತ್ರ ಸಳ್ಳುಗಳನ್ನು ಸೃಷ್ಟಿ ಮಾಡಿ ಜನರ ಮೆದುಳಿನಲ್ಲಿ ಬಿಟ್ಟು ಜನರ ಮನಸ್ಸನ್ನು ಕೆಡಿಸಿ ದೇಶವನ್ನು ಹಾಳು ಮಾಡುತ್ತಿದ್ದಾರೆ. 70 ವರ್ಷದಿಂದ ಕಾಂಗ್ರೆಸ್ ಏನು ಮಾಡಿದೆ ಎಂದು ಕೇಳುತ್ತಾರೆ. ಕಾಂಗ್ರೆಸ್ ಸರಕಾರ ಇಂತಹ ಜನರ ಪರಿಸ್ಥಿತಿ ನಿರ್ಮಾಣ ಮಾಡಿರಲಿಲ್ಲ. ಜನರ ಬದುಕನ್ನು ಹಾಳು ಮಾಡಿರಲಿಲ್ಲ. ಇವತ್ತಿಗೆ ಕಚ್ಚಾ ತೈಲು ಒಂದು ಬ್ಯಾರಲ್‍ಗೆ 60ರಿಂದ 70 ಡಾಲರ್ ಇದೆ. ಹಾಗಾದರೆ ಒಂದು ಲೀ.ಗೆ 35ರೂ. ಗೆ ಪೆಟ್ರೋಲ್ ಸಿಗುತ್ತದೆ, ಜನರು ನೇರವಾಗಿ ಟ್ಯಾಕ್ಸ್ ತುಂಬುತ್ತಿದ್ದಾರೆ. ಇದೆಲ್ಲಾ ನೇರವಾಗಿ ದೇಶದ ಜನರ ಹೊಟ್ಟೆ ಮೇಲೆ ಹೊರೆ ಬೀಳುತ್ತಿದೆ. ಜಿಡಿಪಿ ನೆಲ ಕಚ್ಚಿದೆ. ಜನರ ಬದುಕು ದುಸ್ತರವಾಗಿದೆ. ಈಗಲೇ ಸರಕಾರ ಎಚ್ಚತ್ತುಗೊಳ್ಳಬೇಕು. ಬಿಜೆಪಿಯವರು ದೇಶವನ್ನು ಹರಾಜು ಹಾಕುತ್ತಿದ್ದಾರೆ. ಜನರ ಹಣವನ್ನು ಲೂಟಿ ಮಾಡುತ್ತಿರುವ ಕೇಂದ್ರ ಸರಕಾರ ಇದನ್ನು ಖಂಡಿಸಿ ಇಂದು ಕೇಂದ್ರ ಹಾಗೂ ರಾಜ್ಯ ಸರಕಾರಗಳ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದೇವೆ. 
   ಈ ಸಂದರ್ಭದಲ್ಲಿ ಯುವ ಧುರೀಣ ಪ್ರವೀಣ ನಾಡಗೌಡ ಮಾತನಾಡಿದರು. ನಗರ ಘಟಕದ ಅಧ್ಯಕ್ಷ ಅಶೋಕ ಅಳಗೊಂಡ, ಪ್ರಭು ಗಸ್ತಿ, ಸುರೇಶ ಕಬಾಡಗಿ, ಶಿವಪ್ಪ ಖವಾಸಿ, ಆಧಿನಾಥ ಸಪ್ತಸಾಗರ, ಫಜಲ್ ಅತಾರಾವುತ, ಮಾಶೂಂ ಇನಾಮದಾರ, ಪಿ.ಎಸ್.ಮಾಸ್ತಿ, ದಾನಪ್ಪ ಕರೋಲಿ, ರಾಜು ಭದ್ರನ್ನವರ ಸೇಇರಿದಂತೆ ಇನ್ನಿತರರು ಇದ್ದರು.