ಅಥಣಿ : ಸೋಮವಾರದಂದು ಅಥಣಿ ತಾಲೂಕಿನ ಹಳ್ಯಾಳ ಗ್ರಾಮದ ಸಮೀಪ ಕೃಷ್ಣಾ ನದಿಯಲ್ಲಿ ಒಂದೇಮನಿಯ ನಾಲ್ಕು ಜನ ಸಹೋದರರು ಕಾಲು ಜಾರಿ ನೀರಿನಲ್ಲಿ ಬಿದಿದ್ದು ಅವರ ಶೋಧ ಕಾರ್ಯಾಚರಣೆ ಎರಡನೇ ದಿನವೂ ಮುಂದುವರೆದಿದೆ.
ಎನ್ ಡಿ ಆರ್ ಎಫ್ ಹಾಗೂ ಸ್ಕೂಬಾ ಡ್ರೈವಿಂಗ್ ತಂಡ ಜಂಟಿಯಾಗಿ ನದಿಯಲ್ಲಿ ಸಹೋದರರ ಶೋಧಕಾರ್ಯಾಚರಣೆ ಮುಂದುವರಿಸಲಾಗಿದೆ. ಬೆಳಗಾವಿ ಜಿಲ್ಲಾ ಆಡಳಿತದ ಮನವಿ ಮೇರೆಗೆ ಮಹಾರಾಷ್ಟ್ರ ರಾಜ್ಯದ ಕೊಲಾಪುರ ಜಿಲ್ಲಾಧಿಕಾರಿ ಸ್ಕೂಬಾ ಡೈವಿಂಗ್ ಕಳುಹಿಸಿದ್ದಾರೆ.
ಸ್ಕೂಬಾ ಡ್ರೈವಿಂಗ್ ನೀರಿನಲ್ಲಿ ಮುಳುಗಿ ಶೋಧಕಾರ್ಯಾಚರಣೆ ನಡೆಸುತ್ತಿದ್ದಾರೆ.
ಚಿಕ್ಕೋಡಿ ಉಪವಿಭಾಗ ಅಧಿಕಾರಿ ಯಾಕೇಶ ಕುಮಾರ್ ಹಾಗೂ ಅಥಣಿ ತಶಿಲ್ದಾರ್ ದುಂಡಪ್ಪ ಕುಮಾರ್. ಡಿವೈಎಸ್ಪಿ ಶ್ರೀ ಗಿರೀಶ್ ಹಾಗೂ ಇತರೆ ಅಧಿಕಾರಿ ಬೀಡುಬಿಟ್ಟಿದ್ದಾರೆ. ಎನ್ ಡಿ ಆರ್ ಎಫ್ ಹಾಗೂ ಸ್ಥಳೀಯ ಅಗ್ನಿಶಾಮಕದಳ ಸಿಬ್ಬಂದಿ ನದಿಯ ತುಂಬೆಲ್ಲಾ ಶೋಧಕಾರ್ಯ ನಡೆಸುತ್ತಿದ್ದಾರೆ.

Social Plugin