ತೇರದಾಳದ ಸರಕಾರಿ ಆಸ್ಪತ್ರೆಯಲ್ಲಿ ಶವ ಮರಣೋತ್ತರ ಪರೀಕ್ಷಾ ಕೊಠಡಿಯ ಸ್ಥಳ ಬದಲಾಯಿಸುವಂತೆ ಒತ್ತಾಯಿಸಿ ತಾಲೂಕಾ ಆರೋಗ್ಯಾಧಿಕಾರಿ ಗೈಬುಸಾಬ ಗಲಗಲಿ ಅವರಿಗೆ ಮನವಿ ಸಲ್ಲಿಸಿದರು.
ಶವ ಪರೀಕ್ಷಾ ಕೊಠಡಿ ಸ್ಥಳ ಬದಲಾಯಿಸುವಂತೆ ತೀವೃ ಒತ್ತಾಯ
ತೇರದಾಳ : ಪಟ್ಟಣದ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಟ್ಟಡ ಕಾಮಗಾರಿ ನಡೆಸುತ್ತಿರುವ ಶವ ಮರಣೋತ್ತರ ಪರೀಕ್ಷಾ ಕೊಠಡಿಯ ಸ್ಥಳವನ್ನು ಬದಲಾಯಿಸಬೇಕು ಎಂದು ಮಾಜಿ ಸಚಿವೆ ಉಮಾಶ್ರೀ ಹಾಗೂ ಅಲ್ಲಿನ ನಿವಾಸಿಗಳು ಇಂದು ತಾಲೂಕಾ ಆರೋಗ್ಯ ಅಧಿಕಾರಿ ಗೈಬುಸಾಬ ಗಲಗಲಿ ಅವರಿಗೆ ಮನವಿ ಸಲಿಸಿದರು.
ಕಳೆದ ಒಂದು ವಾರದ ಹಿಂದೆ ಶವ ಮರಣೋತ್ತರ ಪರೀಕ್ಷಾ ಕೊಠಡಿಯ ಕಾಮಗಾರಿಯನ್ನು ಪಾರಂಭಿಸಿದ್ದರು. ಅದು ಅವೈಜ್ಞಾನಿಕವಾದ ಸ್ಥಳದಲ್ಲಿ ಕಟ್ಟಡ ಕಾಮಗಾರಿಯನ್ನು ನಡೆಸಿದ್ದಾರೆ ಎಂದು ಅಲ್ಲಿನ ನಿವಾಸಿಗಳು ಇಂದು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಅಲ್ಲಿನ ನಿವಾಸಿಗಳು ತಮ್ಮ ಅನಿಸಿಕೆಗಳನ್ನು ಹೇಳುತ್ತಾ ಇವರು ನಿರ್ಮಾಣ ಮಾಡುತ್ತಿರುವ ಶವ ಮರಣೋತ್ತರ ಪರೀಕ್ಷಾ ಕೊಠಡಿಯು ಮನೆಗಳ ಹತ್ತಿರದಲ್ಲಿದೆ. ಇಲ್ಲಿ ಮಕ್ಕಳು ಹಾಗೂ ಮಹಿಳೆಯರು ಭಯದಿಂದ ಸಂಚರಿಸುವಂತ ವಾತಾವರಣವನ್ನು ಸೃಷ್ಟಿಸುತ್ತಿದ್ದಾರೆ. ಅದು ವಾಸಿಸುವ ಮನೆಗಳಿಂದ ದೂರವಿರಬೇಕು. ಆಸ್ಪತ್ರೆಯ ಆವರಣದಲ್ಲಿ ಸಾಕಷ್ಟು ಖಾಲಿ ಜಾಗವಿದೆ ಅಲ್ಲಿ ಕಟ್ಟಡವನ್ನು ನಿರ್ಮಾಣ ಮಾಡಲಿ ಎಂದರು.
ಈ ಸಂದರ್ಭದಲ್ಲಿ ಮಾಜಿ ಸಚಿವೆ ಉಮಾಶ್ರೀ ಮಾತನಾಡಿ ಜನರ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ಊರಿಗೆ ಹಿತವನ್ನು ಮಾಡುವಂತ ದೃಷ್ಟಿಕೋನವನ್ನು ಇಟ್ಟುಕೊಂಡು ಮಾಡುತ್ತಿರುವ ಕಾಮಗಾರಿ ಕಾರ್ಯಗತವಾಗುವಂತೆ ಮಾಡಬೇಕು. ಶಾಸಕರ ಗಮನಕ್ಕೆ ತಂದರೆ ಅವರು ಸಹಕರಿಸಬಹುದು. ನಾನು ಜಿಲ್ಲಾಧಿಕಾರಿಗಳ ಗಮನಕ್ಕೆ ತರುತ್ತೇನೆ. ಮಾನಸಿಕವಾಗಿ ಭಯಗೊಂಡಿರುವ ಜನರ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ಯಾರಿಗೂ ತೊಂದರೆಯಾಗದಂತೆ ಕಾಮಗಾರಿಯನ್ನು ನಡೆಸಬೇಕು. ನಾನು ಇಲ್ಲಿ ಬಂದಿರುವುದು ಕಾಮಗಾರಿಯನ್ನು ತಡೆಹಿಡಿಯಲು ಬಂದಿಲ್ಲ. ಅಂತಹ ಬುದ್ದಿ ನನ್ನಲ್ಲಿ ಇಲ್ಲ, ಸೌಲಭ್ಯ ಇಲ್ಲಿ ಬೇಕು ಅದು ಇಲ್ಲಿ ಅವಶ್ಯವಿದೆ. ಜನರ ಮಾತು, ಭಾವನೆಗಳನ್ನು, ಅವರ ಸಮಸ್ಯೆಗಳನ್ನು ಅರಿತು ಯಾರಿಗೂ ತೊಂದರೆಯಾಗದಂತೆ ಅಧಿಕಾರಿಗಳ ಜೊತೆ ಚರ್ಚಿಸಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದರು.
ಮನವಿ ಸ್ವೀಕರಿಸಿ ಮಾತನಾಡಿದ ತಾಲೂಕಾ ಆರೋಗ್ಯಾಧಿಕಾರಿ ಗೈಬುಸಾಬ ಗಲಗಲಿ ಶಾಸಕರು, ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರರ ಜೊತೆ ಚರ್ಚಿಸಿ ಯೋಗ್ಯ ರೀತಿಯಲ್ಲಿ ಪರಿಹಾರ ಅರಿತು ಕಾಮಗಾರಿಯನ್ನು ಪ್ರಾರಂಭಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಯುವ ದುರೀಣ ಪ್ರವೀಣ ನಾಡಗೌಡ ಮಾತನಾಡಿದರು. ಪ್ರಭು ಗಸ್ತಿ, ಸುರೇಶ ಕಬಾಡಗಿ, ಫಜಲ್ ಅತಾರಾವುತ, ರಾಜೇಸಾಬ ನಗಾರ್ಜಿ, ಮುಸ್ತಫಾ ಮೋಮಿನ್, ನಸೀರನಬಾನು ನಗಾರ್ಜಿ, ಇಕ್ಬಾಲ ಅಲಾಸ, ನಿಸಾರ ಅಲಾಸ, ಮುನ್ನಾ ತಾಂಬೋಳಿ ಸೇರಿದಂತೆ ವಾರ್ಡಿನ ಮಹಿಳೆಯರು ಆಸ್ಪತ್ರೆ ಸಿಬ್ಬಂದಿಯವರು ಇದ್ದರು.
Social Plugin