ಘಟಪ್ರಭಾ: ಇಲ್ಲಿನ ಜೆ.ಜಿ.ಕೋ ಆಸ್ಪತ್ರೆಯ ಸರಕಾರಿ ಶಾಲೆಯ ಮುಖ್ಯೋಪಾಧ್ಯಾಪಕಿ ಸರಕಾರಿ ಶಾಲೆಯ ಬಗ್ಗೆ ಪಾಲಕರಿಗೆ ಮತ್ತು ಮಕ್ಕಳಿಗೆ ಆಸಕ್ತಿ ಮುಡಿಸುವ ಸಲುವಾಗಿ ತನ್ನ ಶಾಲೆಯಲ್ಲಿ ಪ್ರವೇಶ ಪಡೆದರೆ ಮಕ್ಕಳ ಹೆಸರಲ್ಲಿ 1ಸಾವಿರ ಹಣ ಠೇವಣಿ ಇಡುವುದಲ್ಲದೆ ಸ್ಕೂಲ್ ಬ್ಯಾಗ್ ಮತ್ತು ನೋಟ್ ಬುಕ್ಕ್ ನೀಡುತ್ತೇನೆ ಎಂದು ಘೋಷಣೆ ಮಾಡಿದ ಸರಕಾರಿ ಪ್ರಾಥಮಿಕ ಶಾಲೆಗೆ ಇಂದು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕರಾದ ಗಜಾನನ ಮಣ್ಣಿಕೇರಿಯವರು ಭೇಟಿ ನೀಡಿ ಪರಿಶೀಲಿಸಿದರು.
ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಮಕ್ಕಳು ಹೆಚ್ಚು ಪ್ರವೇಶ ಪಡೆಯುತ್ತಿರುವ ಬಗ್ಗೆ ಮುಖ್ಯೋಪಾಧ್ಯಾಪಕಿಯ ಕಾರ್ಯವೈಕರಿ ಬಗ್ಗೆ ಅವರು ಮೆಚ್ಚುಗೆ ವ್ಯಕ್ತ ಪಡಿಸಿ ಶಾಲೆಗೆ ಇಲಾಖೆಯಿಂದ ಎಲ್ಲಾ ಸಹಕಾರ ನೀಡುವುದಾಗಿ ಹೇಳಿದರು. ಇದೇ ಸಂದರ್ಭದಲ್ಲಿ ಏಕ ಶಿಕ್ಷಕಿ ಶಾಲೆಯಗಿರುವ ಈ ಶಾಲೆಗೆ ಇನ್ನೊರ್ವ ಶಿಕ್ಷಕರನ್ನು ಕೊಡುವಂತೆ ಬೇಡಿಕೆ ಇಟ್ಟರು. ಮುಖ್ಯ ಶಿಕ್ಷಕಿ ಇಟ್ಟಿರುವ ಕಾರಣ ತಕ್ಷಣ ಅತಿಥಿ ಶಿಕ್ಷಕರೊಬ್ಬರನ್ನು ನೇಮಿಸಿಕೊಳ್ಳಿ ಮುಂದಿನ ದಿನದಲ್ಲಿ ಬೇರೆ ಶಿಕ್ಷಕರನ್ನು ನೇಮಕ ಮಾಡುವುದಾಗಿ ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.

Social Plugin