*ಪತ್ರಿಕಾ ವಿತರಕರಿಗೆ ಡಾ. ಬೆಳಗಲಿ ದಿನಸಿ ಕಿಟ್ ವಿತರಣೆ*
 ಕೋವಿಡ್-೧೯ ಸಂದರ್ಭದಲ್ಲಿಯೂ ಪತ್ರಿಕಾ ವಿತರಕರು ತಮ್ಮ ಅವಿರತ ಉತ್ತಮ ಸೇವೆಯೊಂದಿಗೆ ಜೀವದ ಹಂಗು ತೊರೆದು ಕೆಲಸ ಮಾಡಿರುವದು ಶ್ಲಾಘನೀಯ. ಈಗಾಗಲೇ ಆಶಾ ಹಾಗು ಅಂಗನವಾಡಿ ಕಾರ್ಯಕರ್ತೆಯರಿಗೆ ಸಹಾಯ ಮಾಡಿದ್ದು, ಪತ್ರಿಕೆ ವಿತರಕರ ಸಂಕಷ್ಟ ಅರಿತು ಅವರಗೂ ಕೂಡ ಕಿಟ್ ನೀಡಿದ್ದೇನೆಂದು ಕಾಂಗ್ರೆಸ್ ಜಿಲ್ಲಾ ಮುಖಂಡ ಮಹಾಲಿಂಗಪೂರದ ಡಾ. ಎ.ಆರ್. ಬೆಳಗಲಿ ಹೇಳಿದರು.

ರಬಕವಿಯ ದಾನಮ್ಮದೇವಿ ಸಮುದಾಯ ಭವನದಲ್ಲಿ ರಬಕವಿ-ಬನಹಟ್ಟಿ-ಹೊಸೂರ-ರಾಮಪೂರ ಪಟ್ಟಣಗಳಲ್ಲಿ ಪತ್ರಿಕಾ ವಿತರಣೆ ಮಾಡುವ ೫೦ಕ್ಕೂ ಅಧಿಕ ಜನರಿಗೆ ವಿತರಿಸಿ ಮಾತನಾಡಿ, ಕೊರೊನಾ ಹಾಟಸ್ಪಾಟ್‌ಗಳಲ್ಲಿಯೂ ದಿನಾಲೂ ಪ್ರತಿ ಮನೆಗೂ ಪತ್ರಿಕೆಗಳನ್ನು ಹಾಕುವ ಮೂಲಕ ತಮ್ಮ ವೃತ್ತಿ ನಿಷ್ಠೆ ಮೆರೆದಿದ್ದಾರೆ. ಒಂದು ದಿನ ಪತ್ರಿಕೆ ಬರಲಿಲ್ಲಾ ಎಂದರೂ ಏನೋ ಕಳೆದುಕೊಂಡಂತೆ ಅನಿಸುತ್ತದೆ. ಕಾರ್ಯನಿರತ ಪತ್ರಕರ್ತರ ಸಂಘ ಪತ್ರಿಕಾ ವಿತರಕರನ್ನು ಗುರ್ತಿಸಿ ಅವರಿಗೆ ಸಹಾಯ ಮಾಡಲು ಕೇಳಿಕೊಂಡಾಗ ಸಂತೋಷದಿಂದ ಒಪ್ಪಿದೆ ಎಂದು ಡಾ. ಬೆಳಗಲಿ ತಿಳಿಸಿದರು.

ವರದಿ
ಮಲ್ಲಿಕಾರ್ಜುನ ತುಂಗಳ
ಮುಖ್ಯ ವರದಿಗಾರರು
ಬಾಗಲಕೋಟೆ