*ಕಪ್ಪು ಬಟ್ಟೆ ಕಟ್ಟಿಕೊಂಡು ಪ್ರತಿಭಟನೆಗಿಳಿದ ವೈದ್ಯರು*
 ದೇಶದಲ್ಲಿ ವೈದ್ಯರ ಮೇಲೆ ನಿರಂತರ ನಡೆಯುತ್ತಿರುವ ಹಲ್ಲೆ ನಡೆಯುತ್ತಿದೆ. ಆರೋಗ್ಯ ಆರೈಕೆ ವೃತ್ತಿ ಪರರ ಮೇಲೆ ಹಲ್ಲೆ ಮಾಡುವವರಿಗೆ ಹತ್ತು ವರ್ಷಗಳ ಕಾಲ ಜೈಲು ಶಿಕ್ಷೆಯನ್ನು ವಿಧಿಸಬೇಕು. 

ವೃತ್ತಿಪರ ವೈದ್ಯರ ಮೇಲೆ ದಾಳಿ ಮಾಡುವ ಸಮಾಜ ವಿರೋಧಿ ಶಕ್ತಿಗಳಿಗೆ ಪರಿಣಾಮಕಾರಿ ಪ್ರತಿಬಂಧಕವನ್ನು ಸೃಷ್ಠಿಸಬೇಕೆಂದು ಸ್ಥಳೀಯ ಐಎಂಎ ಅಧ್ಯಕ್ಷ ಡಾ.ಪದ್ಮಜೀತ ನಾಡಗೌಡಪಾಟೀಲ ತಿಳಿಸಿದರು.

ರಬಕವಿ-ಬನಹಟ್ಟಿ-ತೇರದಾಳದ ಐಎಂಎ ವೈದ್ಯರ ಸಂಘದಿಂದ ರಾಷ್ಟ್ರೀಯ ಪ್ರತಿಭಟನಾ ದಿನದ ನಿಮಿತ್ತವಾಗಿ ಉಪ ತಹಶೀಲ್ದಾರ್ ಎಸ್.ಎಲ್.ಕಾಗಿಯವರ ಅವರಿಗೆ ಮನವಿ ಸಲ್ಲಿಸಲಾಯಿತು.

 ಕೋವಿಡ್-೧೯ ಸಂದರ್ಭದಲ್ಲಿ ಪ್ರಾಣ ಕಳೆದುಕೊಂಡ ವೈದ್ಯರನ್ನು ಕೋವಿಡ್ ಹುತಾತ್ಮರು ಎಂದು ಘೋಷಣೆ ಮಾಡಬೇಕು. ಪ್ರಾಣ ಕಳೆದುಕೊಂಡ ವೈದ್ಯರ ಕುಟುಂಬಗಳಿಗೆ ವಿಮಾ ಸೌಲಭ್ಯ ಪ್ರಧಾನಿಗಳು ಕಲ್ಪಿಸುತ್ತಿದ್ದಾರೆ. ಆದರೆ ದೇಶದಲ್ಲಿ ೭೫೪ ವೈದ್ಯರು ನಿಧನರಾಗಿದ್ದಾರೆ. ಆದರೆ ಕೇವಲ ೧೬೮ ವೈದ್ಯರಿಗೆ ಮಾತ್ರ ಈ ಯೋಜನೆ ಅಡಿ ಅರ್ಜಿಯನ್ನು ಸಲ್ಲಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿರುವ ಕೆಲವು ತೊಂದರೆಗಳಿಂದಾಗಿ ಬಹಳಷ್ಟು ವೈದ್ಯರ ಕುಟುಂಬ ಅರ್ಜಿ ಸಲ್ಲಿಸಲಾಗಿಲ್ಲ. 

ಈ ಕುರಿತು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಡಾ.ನಾಡಗೌಡಪಾಟೀಲ ತಿಳಿಸಿದರು.ಈ ಸಂದರ್ಭದಲ್ಲಿ ಡಾ.ಬಿ.ಎನ್.ಬಾಗಲಕೋಟ ಮನವಿ ಪತ್ರವನ್ನು ಓದಿದರು. ವೈದ್ಯರು ಬನಹಟ್ಟಿ ಬಸ್ ನಿಲ್ದಾಣ ಬಳಿ ಕಪ್ಪು ಬಟ್ಟೆ ಕಟ್ಟಿಕೊಂಡು ಪ್ರತಿಭಟನೆ ನಡೆಸಿ ತಹಶೀಲ್ದಾರ ಕಚೇರಿವರೆಗೆ ತೆರಳಿದರು.

ವರದಿ
ಮಲ್ಲಿಕಾರ್ಜುನ ತುಂಗಳ
ಮುಖ್ಯ ವರದಿಗಾರರು
ಬಾಗಲಕೋಟೆ