ತೇರದಾಳ ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಮುಂಗಾರು ಬಿತ್ತನೆಗೆ ಸಹಾಯ ಧನದಲ್ಲಿಬೀಜಗಳ ವಿತರಣೆಗೆ ಶಾಸಕ ಸಿದ್ದು ಸವದಿ ಚಾಲನೆ ನೀಡಿದರು.
ಸಹಾಯಧನದಲ್ಲಿ ಬಿತ್ತನೆ ಬೀಜ ವಿತರಣೆಗೆ ಚಾಲನೆ
ತೇರದಾಳ : ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಸಹಾಯ ಧನದಲ್ಲಿ ಬಿತ್ತನೆ ಬೀಜ ವಿತರಣಾ ಕಾರ್ಯಕ್ರಮಕ್ಕೆ ಶಾಸಕ ಸಿದ್ದು ಸವದಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಮುಂಗಾರು ಹಂಗಾಮಿಗೆ ರೈತರಿಗೆ ಅನುಕೂಲವಾಗುವ ದೃಷ್ಟಿಯಿಂದ ಸೋಯಾಬಿನ್, ಉದ್ದು ಹಾಗೂ ಹೆಸರು ಬೀಜಗಳನ್ನು ಈಗಾಗಲೇ ದಾಸ್ತಾನು ಮಾಡಲಾಗಿದೆ. ಆಧಾರ ಕಾರ್ಡ, ಜಮೀನಿನ ಉತಾರ, ಬ್ಯಾಂಕ್ ಖಾತೆ ಝರಾಕ್ಷ್ ಪಾಸ್ ಬುಕ್, ಎಸ್‍ಸಿ, ಎಸ್‍ಟಿಯವರು ಜ್ಯಾತಿ ಪ್ರಮಾಣ ಪತ್ರ ಕಡ್ಡಾಯವಾಗಿ ತರಬೇಕು. ಹಾಗೂ ರೈತ ಸಂಪರ್ಕ ಕೇಂದ್ರಕ್ಕೆ ಬಂದಾಗ ಕೋವಿಡ್-19 ಮಾರ್ಗಸೂಚಿ ಪಾಲಿಸಬೇಕು. ಬೀಜಗಳನ್ನು ಹೆಚ್ಚಿನ ದರದಲ್ಲಿ ಮಾರಾಟ ಮಾಡುವುದು ಕಂಡು ಬಂದರೆ ದೂರು ಸಲ್ಲಿಸಿ ಅಂತವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಕಚೇರಿಯ ಕೆಲಸದ ದಿನಗಳಲ್ಲಿ ಬೆಳಿಗ್ಗೆ 6ಗಂಟೆಯಿಂದ 10ಗಂಟೆಯವರೆಗೆ ಬೀಜಗಳನ್ನು ವಿತರಿಸಲಾಗುವುದು. ರೈತರು ಕೋವಿಡ್ ಮಾರ್ಗಸೂಚಿಯಂತೆ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಕೇಂದ್ರದಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಎಂದು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಎಸ್.ಎಮ್, ಬಿರಾದಾರ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ನಗರ ಘಟಕ ಅಧ್ಯಕ್ಷ ಮಹಾವೀರ ಕೊಕಟನೂರ, ಪ್ರಭಾರಿ ನಗರ ಘಟಕ ಅಧ್ಯಕ್ಷ ರಾಮಣ್ಣ ಹಿಡಕಲ್, ತಾ. ಪಂ. ಅಧ್ಯಕ್ಷ ಶಿವಾನಂದ ಮoಟೂರ, ಜಮಖಂಡಿ ಸಹಾಯಕ ಕೃಷಿ ನಿರ್ದೇಶಕ ಆರ್. ಬಿ. ಬಿದರಿ, ಕೃಷಿ ಅಧಿಕಾರಿ ಎಸ್.ಎಮ್. ಬಿರಾದಾರ, ಸಹಾಯಕ ಕೃಷಿ ಅಧಿಕಾರಿಗಳಾದ ಆಯ್.ಎನ್.ಚವಜ, ಪ್ರಭು ಬಾಗಿ, ಸಿದ್ದು ಅಮ್ಮಣಗಿ, ಸದಾಶಿವ ಹೊಸಮನಿ, ಶಂಕರ ಕುಂಬಾರ ಹಾಗೂ ಪುರಸಭೆ ಸದಸ್ಯರು, ರೈತ ಸಂಪರ್ಕ ಕೇಂದ್ರ ಸಿಬ್ಬಂದಿ ಬಿ.ಪಿ.ಚೌಗಲಾ, ಬಿ.ಎಮ್. ಗಣಾಚಾರಿ, ಆತ್ಮಾ ಸಿಬ್ಬಂದಿ ಪ್ರವೀಣ ಕೊಪ್ಪದ, ಲೆಕ್ಕಿಗರು ಮೋಪಗಾರ ಹಾಗೂ ಪಟ್ಟಣದ ಪ್ರಮುಖರು ಇನ್ನಿತರರು ಇದ್ದರು.
Social Plugin