ವರದಿ : ಮಲ್ಲಿಕಾರ್ಜುನ ಘೋಸರವಾಡ
ಬೆಳಗಾವಿ ಜಿಲ್ಲೆಯಲ್ಲಿ ದಿನೇದಿನೇ ಕೋವಿಡ್-19 ಹೆಚ್ಚಾಗುತ್ತಿರುವುದರಿಂದ ವೈರಸ್ ಹರಡುವಿಕೆಯ ನ್ನು ತಡೆಗಟ್ಟಲು ಹಾಗೂ ಸಾರ್ವಜನಿಕ ಆರೋಗ್ಯ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಹಿತದೃಷ್ಟಿಯಿಂದ ಜೂನ್ 4ರ ಬೆಳಗ್ಗೆ 6 ಗಂಟೆಯಿಂದ ಜೂನ್ 7ನೇ 6:00 ಗಂಟೆಯವರೆಗೆ ಸಂಪೂರ್ಣ ಲಾಕ್ ಡೌನ್ ಇರಲಿದೆ ಎಂದು ಜಿಲ್ಲಾಧಿಕಾರಿಗಳು ಎಂ ಜಿ  ಹಿರೇಮಠ್ ಅವರು ತಿಳಿಸಿದ್ದಾರೆ ಜಿಲ್ಲೆಯಾದ್ಯಂತ ಕೋವಿಡ್-19 ಪರಿಣಾಮಕಾರಿಯಾಗಿ ಹಬ್ಬುತ್ತಿರುವ ದರಿಂದ ಅದನ್ನು ತಡೆಗಟ್ಟಲು ಸಾರ್ವಜನಿಕ ಆರೋಗ್ಯ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಹಿತದೃಷ್ಟಿಯಿಂದ ದಿನಾಂಕ 4/6/2021 ರ ಬೆಳಗ್ಗೆ 6 ಗಂಟೆಯಿಂದ ದಿನಾಂಕ 7/6/2021ರ ಬೆಳಗ್ಗೆ 6 ಗಂಟೆಯವರೆಗೆ ಸಂಪೂರ್ಣ ಲಾಕ್ಡೌನ್ ಘೋಷಿಸಿ ಈ ಮೂಲಕ ಆದೇಶಿಸಿದ್ದೇನೆ ಅಗತ್ಯ ವಸ್ತುಗಳಾದ ಹಾಲು ಔಷಧಿ ಪೂರೈಕೆ ಹಾಗೂ ಖರೀದಿಗೆ ಆನ್ಲೈನ್ ಫುಡ್ ಸರ್ವಿಸ್ ಗಳಿಗೆ ಸರ್ಕಾರಿ ಅಧಿಕಾರಿಗಳಿಗೆ ಸರಕಾರಿ ಸಭೆಗೆ ಹಾಜರಾಗಲು ಸಾರ್ವಜನಿಕ ವಿತರಣಾ ಪದ್ಧತಿ ಅಡಿಯಲ್ಲಿ ಬರುವ ನ್ಯಾಯ ಬೆಲೆ ಅಂಗಡಿ ಸದರಿ ದಿನಗಳೆಂದು ಬೆಳಗ್ಗೆ 6 ಗಂಟೆಯಿಂದ ಬೆಳಗ್ಗೆ 10 ಗಂಟೆಯವರೆಗೆ ಮಾತ್ರ ಅವಕಾಶವಿರುತ್ತದೆ.