ತೇರದಾಳದ ಪುರಸಭೆಗೆ ನೂತನ ಮುಖ್ಯಾಧಿಕಾರಿಯಾಗಿ ಅಶೋಕ ಗುಡಿಮನಿ ಅಧಿಕಾರವಹಿಸಿಕೊಂಡರು.
ವರದಿ : ವಿಜಯ ವಾಜಂತ್ರಿ
ಪುರಸಭೆಗೆ ನೂತನ ಮುಖ್ಯಾಧಿಕಾರಿಯಾಗಿ ಅಶೋಕ ಗುಡಿಮನಿ
ತೇರದಾಳ : ಪಟ್ಟಣದ ಪುರಸಭೆಗೆ ಮುಖ್ಯಾಧಿಕಾರಿಯಾಗಿ ಅಶೋಕ ಗುಡಿಮನಿ ಅಧಿಕಾರ ವಹಿಸಿಕೊಂಡರು. ಮೊದಲಿದ್ದ ಮುಖ್ಯಾಧಿಕಾರಿ ಈರಣ್ಣ ದಡ್ಡಿ ಅವರು ಅಶೋಕ ಗುಡಿಮನಿ ಅವರಿಗೆ ಅಧಿಕಾರವನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ನೂತನ ಮುಖ್ಯಾಧಿಕಾರಿ ಗುಡಿಮನಿಯವರು ಪಟ್ಟಣದ ಸುಧಾರಣೆಗೆ ಕಟಿಬದ್ಧರಾಗಿ ಸರಕಾರದ ಆದೇಶ ಹಾಗೂ ಸುತ್ತೋಲೆಗಳ ಮೇರೆಗೆ ಯಾವ ರೀತಿ ಕಾರ್ಯ ನಿರ್ವಹಿಸಬೇಕು ಎಂದು ಮನಗೊಂಡು ತಮ್ಮೇಲ್ಲರ ಮಾರ್ಗದರ್ಶನದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತೇನೆ. ಹಾಗೂ ಪಟ್ಟಣದ ಸ್ವಚ್ಚ, ಸುಂದರ ಸ್ವಸ್ತ ಪಟ್ಟಣವನ್ನು ಕಟ್ಟುವಲ್ಲಿ ಹಿಂದಿನ ಮುಖ್ಯಾಧಿಕಾರಿ ಪಟ್ಟಿರುವ ಶ್ರಮದಲ್ಲಿ ನಾನು ಮುಂದುವರೆಸಿಕೊಂಡು ಹೋಗುತ್ತೇನೆ ಎಂದರು.
ಈ ಸಂದರ್ಭದಲ್ಲಿ ಹಿಂದಿನ ಮುಖ್ಯಾಧಿಕಾರಿ ಈರಣ್ಣ ದಡ್ಡಿಯವರನ್ನು ಶಾಲು ಹೊದಿಸಿ ಸನ್ಮಾನಿಸಿ ಬೀಳ್ಕೊಟ್ಟರು. ನೂತನ ಮುಖ್ಯಾಧಿಕಾರಿ ಅಶೋಕ ಗುಡಿಮನಿಯವರನ್ನು ಶಾಲು ಹೊದಿಸಿ ಸನ್ಮಾನಿಸಿ ಸ್ವಾಗತಿಸಿಕೊಂಡರು. ಮುಖಂಡರಾದ ಸುರೇಶ ರೇಣಕೆ, ಬಾಳು ದೇಶಪಾಂಡೆ, ರಾಮಣ್ಣ ಹಿಡಕಲ್ಲ, ಸದಾಶಿವ ಹೊಸಮನಿ, ಕೇದಾರಿ ಪಾಟೀಲ, ಶಂಕರ ಕುಂಬಾರ ಸೇರಿದಂತೆ ಪುರಸಭೆ ಸದಸ್ಯರು ಹಾಗೂ ಸಿಬ್ಬಂದಿಯವರು ಇದ್ದರು.
Social Plugin