ಬೆಳಗಾವಿಯಲ್ಲಿ ರೈಲಿಗೆ ತಲೆ ಕೊಟ್ಟು 3 ಜನ ಆತ್ಮಹತ್ಯೆ.
ವರದಿ : ಮಲ್ಲಿಕಾರ್ಜುನ ಘೋಸರವಾಡ.

ಬೆಳಗಾವಿ: ರೈಲು ಹಳಿಗೆ ತಲೆ ಕೊಟ್ಟು ಮೂವರು ಆತ್ಮಹತ್ಯೆ ಮಾಡಿಕೊಂಡ ಪ್ರತ್ಯೇಕ ಪ್ರಕರಣಗಳು ಬೆಳಗಾವಿಯಲ್ಲಿ ನಡೆದಿದ್ದು, ಒಬ್ಬನ ಗುರುತು ಪತ್ತೆ ಆಗಿದೆ. ಇನ್ನೂ ಇಬ್ಬರು ಅಪರಿಚಿತರಾಗಿದ್ದಾರೆ.
ಪಾಶ್ಚಾಪುರ-ಸುಲಧಾಳ ಮಾರ್ಗ ಮಧ್ಯೆ ರೈಲು ಹಳಿಗೆ ಬಿದ್ದು ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕುಡಿತದ ಚಟಕ್ಕೆ ದಾಸನಾಗಿದ್ದ ಅಂಕಲಗಿ ಗ್ರಾಮದ ಅಶೋಕ ಈರಪ್ಪ ಕಟ್ಟಿಮನಿ(46) ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಬೆಳಗಾವಿ ನಗರದ ಸಮರ್ಥ ನಗರದ ರೈಲ್ವೆ ಮಾರ್ಗದಲ್ಲಿ 60 ವರ್ಷದ ಅಪರಿಚಿತ ವ್ಯಕ್ತಿಯೊರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ವ್ಯಕ್ತಿ ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ ಹೊಂದಿದ್ದು. ಎತ್ತರ 5.4 ಅಡಿ, ಬೋಳು ತಲೆ, ವ್ಯಕ್ತಿ ಬಿಳಿ ಬಣ್ಣದ ಪುಲ್ ಶರ್ಟ್, ಗ್ರೇ ಕಲರ್ ಲೋಯರ್ ಪ್ಯಾಂಟ್, ಮೇಹಂದಿ ಕಲರ್ ನಿಕ್ಕರ್ ಧರಿಸಿರುತ್ತಾನೆ.
ತಲೆ ಮೇಲೆ ತೆಂಗಿನಕಾಯಿ ಬಿದ್ದು ಮಗು ಸಾವು
ಇನ್ನೊಂದೆಡೆ ಚಿಕ್ಕೋಡಿ ರೋಡ್ ನ ರೈಲು ನಿಲ್ದಾಣದ ಹತ್ತಿರ ಅಂದಾಜು 55 ವರ್ಷದ ಅಪರಿಚಿತ ವ್ಯಕ್ತಿಯೊರ್ವ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.