ಈ ಹಿಂದೆ 'ಕನ್ನಡ ದೇಶದೊಳ್' ಎಂಬ ಚಿತ್ರ ನಿರ್ದೇಶಿಸಿದ್ದ ಅವಿ ಈಗ ಸಾಹಸ ವೀರನೊಬ್ಬನ ಕಥೆ ಹೇಳುವ ಹೊಸ ಸಿನಿಮಾ ಮಾಡಿದ್ದಾರೆ. ಈ ಚಿತ್ರದ ಹೆಸರು 'ಕಲಿವೀರ'. ರಾಣೇಬೆನ್ನೂರು ಮೂಲದ ಏಕಲವ್ಯ ಈ ಚಿತ್ರದ ನಾಯಕ. ಉತ್ತರ ಕರ್ನಾಟಕದ ಏಕಲವ್ಯ ಅದ್ಬುತವಾಗಿ ತಯಾರಿ ಮಾಡಿಕೊಂಡೆ ಚಿತ್ರರಂಗಕ್ಕೆ ಬಂದಿದ್ಧಾರೆ. ಫೈಟ್ಸ್, ಡಾನ್ಸ್, ಕಲರಿಯಂತಹ ಕಲೆಗಳೊಂದಿಗೆ ಯೋಗ ದಲ್ಲೂ ಸಹ ಪರಿಣಿತಿ ಹೊಂದಿದ್ದಾರೆ. ಚಿತ್ರದಲ್ಲಿನ ಅವರ ಪಾತ್ರ ಬಹಳ ವಿಶೇಷವಾಗಿ ಮೂಡಿ ಬಂದಿದೆ ಎಂಬುದು ಚಿತ್ರ ತಂಡದ ಮಾತು.
ಕಲಿವೀರ ಎಂಬ ಮಾಸ್ ಟೈಟಲ್ ನ ಸಿನಿಮಾ, ನಿರಂತರವಾಗಿ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡುತ್ತಾ ಬಂದಿದ್ದು, ಹೊಸ ತಲೆಮಾರಿನ ಪ್ರತಿಭಾವಂತರ ಜೊತೆಗೆ ಹಳೆ ತಲೆಮಾರಿನ ಅನೇಕ ತಂತ್ರಜ್ಞರು ಸೇರಿ ಮಾಡಿರುವ ಚಿತ್ರ.
ಹೊಸ ಹೀರೋ ಮೇಲೆ ಕೋಟಿ ಬಂಡವಾಳ ಹಾಕಿ ಚಿತ್ರ ನಿರ್ಮಿಸುವ ಧೈರ್ಯ ಮಾಡುವುದು ಸುಲಭವೇನಲ್ಲ. ಶ್ರೀನಿವಾಸ್ ಅವರು ಅಂಥದ್ದೊಂದು ಸಾಹಸ ಮಾಡಿದ್ದಾರೆ. ರಾಣೆಬೆನ್ನೂರಿನಲ್ಲಿ ಸ್ವಂತ ಬ್ಯುಸಿನೆಸ್ ನಡೆಸುತ್ತಿರುವ ಅವರು ಇದೇ ಮೊದಲ ಬಾರಿಗೆ 'ಕಲಿವೀರ' ಚಿತ್ರ ನಿರ್ಮಾಣ ಮಾಡುವ ಮೂಲಕ ಗಾಂಧಿನಗರಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈಗ ಬಂಡವಾಳ ಹಾಕಿದ ನಿರ್ಮಾಪಕರಿಗೆ ಕಲಿವೀರ ಚಿತ್ರದ ಹಿಂದಿ ಡಬ್ಬಿಂಗ್ Rights ಬರೋಬ್ಬರಿ 1 ಕೋಟಿಗೆ ಮಾರಾಟವಾಗಿದೆ. ಹೊಸ ನಾಯಕನ ಚಿತ್ರಕ್ಕೆ ಇದು ಬಾರಿ ಮೊತ್ತ ಎನ್ನುವುದು ಗಾಂಧಿನಗರದ ಸುದ್ದಿ....
ಇನ್ನೂ ಕಲಿವೀರ ಚಿತ್ರಕ್ಕೆ ವಿ.ಮನೋಹರ್ - ಸಂಗೀತ, ಡಿಫರೆಂಟ್ ಡ್ಯಾನಿ - ಸಾಹಸ, ಎಸ್.ಹಾಲೇಶ್ - ಛಾಯಾಗ್ರಹಣ, ರಾಘವೇಂದ್ರ.ವಿ - ಹಿನ್ನೆಲೆ ಸಂಗೀತ, ಮುರಳಿ - ನೃತ್ಯ, ಎ.ಆರ್. ಕೃಷ್ಣ - ಸಂಕಲನ, ವಿ.ನಾಗೇಂದ್ರ ಪ್ರಸಾದ್, ಅರಸು ಅಂತಾರೆ, ವಿ.ಮನೋಹರ್, ಗಿರಿಧರ್ ಎಳೆಹೊಳೆ, ಸಚಿನ್ ಕಡೂರ್ ಸಾಹಿತ್ಯ ಚಿತ್ರಕ್ಕಿದೆ. ಕಲಿವೀರ ಚಿತ್ರದಲ್ಲಿ ದೊಡ್ಡ ತಾರಾಗಣವಿದೆ ಟಿ ಎಸ್ ನಾಗಾಭರಣ, ತಬಲಾ ನಾಣಿ, ಪಾವನ ಗೌಡ, ಚಿರಶ್ರೀ ಅಂಚನ್, ಅನಿತಾ ಭಟ್, ಡ್ಯಾನಿ ಕುಟ್ಟಪ್ಪ, ಮುನಿ, ನೀನಾಸಂ ಅಶ್ವಥ್, ಸೂರ್ಯ ನಾರಾಯಣ್, ರಾಕ್ ಲೈನ್ ಸುಧಾಕರ್, ಮೋಹನ್ ಜುನೇಜ, ಬೌ ಬೌ ಜಯರಾಮ್, ಸುರೇಶ್ ಚಂದ್ರ ಹೀಗೆ ದೊಡ್ಡ ತಾರಾಬಳಗದಲ್ಲಿ ಚಿತ್ರ ಮೂಡಿ ಬಂದಿದೆ.
ಇಷ್ಟೆಲ್ಲ ಅದ್ದೂರಿಯಾಗಿ ತಯಾರಾಗಿರುವ ಕಲಿವೀರದ ಅಬ್ಬರ ಕಾಣಬೇಕಾದರೆ, ರಾಜ್ಯ ಸರ್ಕಾರವು ಚಿತ್ರಮಂದಿರಗಳ ಬಿಡುಗಡೆಗೆ ಅನುಮತಿ ಕೊಡುವವರೆಗು ಕಾಯಬೇಕು.
ಇಷ್ಟೆಲ್ಲ ಅದ್ದೂರಿಯಾಗಿ ತಯಾರಾಗಿರುವ ಕಲಿವೀರದ ಅಬ್ಬರ ಕಾಣಬೇಕಾದರೆ, ರಾಜ್ಯ ಸರ್ಕಾರವು ಚಿತ್ರಮಂದಿರಗಳ ಬಿಡುಗಡೆಗೆ ಅನುಮತಿ ಕೊಡುವವರೆಗು ಕಾಯಬೇಕು.




Social Plugin