*ಕೊರೊನಾಗಿಂತಲೂ ವಿಚಿತ್ರ ಘಟನೆ: ಗ್ರಾಮದಲ್ಲಿ ಒಂದೇ ವಾರದಲ್ಲಿ ೪೦ ಜನ ಸಾವು*
*ಕವಲಿ ಕೇಳುವ ಮೂಲಕ ಪರಿಹಾರ ಮಾಡಿಕೊಂಡ ಗ್ರಾಮಸ್ಥರು*

 ಕಳೆದೊಂದು ವಾರದಿಂದ ಗ್ರಾಮವೊಂದರಲ್ಲಿ ವಿಚಿತ್ರ ರೀತಿಯ ಸಾವು-ನೋವುಗಳು ಸಂಭವಿಸುತ್ತಿದ್ದವು.

 ಕೋವಿಡ್ ಮಹಾಮಾರಿಗೆ ತುತ್ತಾಗುತ್ತಿದ್ದಾರೆಯೇ ಅಥವಾ ಇತರೆ ರೋಗಗಳಿಗೆ ಎಂಬುದೇ ಅರಿವಾಗದಷ್ಟು ಗೊಂದಲದಲ್ಲಿ ಗ್ರಾಮಸ್ಥರಿದ್ದರು. ಕೊನೆಗೂ ಸ್ವಯಂಪ್ರೇರಿತ ಪರಿಹಾರ ಕಂಡುಕೊಳ್ಳುವ ಮೂಲಕ ರವಿವಾರ ಇಡೀ ಗ್ರಾಮ ಸಾವಿನ ದವಡೆಯಿಂದ ನಿರಾಳತೆ ಕಾಣುವಲ್ಲಿ ಕಾರಣವಾಗಿದೆ.
ಹೌದು, ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ನಾವಲಗಿ ಗ್ರಾಮದಲ್ಲಿ ಕಳೆದ ವಾರದಿಂದ ದಿನಂಪ್ರತಿ ಇಬ್ಬರು-ಮೂವರು ಸಾವನ್ನಪ್ಪುತ್ತಿದ್ದರು. ಕಳೆದ ಶನಿವಾರ ಒಂದೇ ದಿನ ೧೧ ಜನ ಸಾವನ್ನಪ್ಪಿದ ನಂತರ ಗ್ರಾಮಸ್ಥರು ಸೇರಿ ಇದ್ಯಾವ ಕೇಡು ಗ್ರಾಮಕ್ಕೆ ಬಂದಿದೆ? ಎಂಬ ಯಕ್ಷ ಪ್ರಶ್ನೆಯಲ್ಲಿರುವಾಗ, ಗ್ರಾಮದೇವತೆ ಮಾರುತೇಶ್ವರ ದೇವಸ್ಥಾನದಲ್ಲಿ ಗ್ರಾಮೀಣ ನಂಬಿಕೆಯಂತೆ ರವಿವಾರ ಬೆಳಿಗಿನ ಜಾವ ಕವಲಿ ಹಾಕಿ ಅಲ್ಲಿನ ಪೂಜಾರಿಯೊಂದಿಗೆ ಹಿರಿಯರೆಲ್ಲರೂ ದೇವಸ್ಥಾನದಲ್ಲಿ ಸೇರಿ ಕವಲಿಯನ್ನು ಕೇಳುತ್ತಿದ್ದಂತೆ ಪೂಜಾರಿಯ ಮಾತಿನಿಂದ ದೇವಸ್ಥಾನ ಆವರಣದೊಳಗಿದ್ದ ನೀರೋಕಳಿಯ ಹೊಂಡವನ್ನು ಸಂಪೂರ್ಣ ಮುಚ್ಚಿರುವದರಿಂದ ಗ್ರಾಮಕ್ಕೆ ಕೇಡು ಬಂದಿದೆ ಎಂದಾಗ, ರವಿವಾರ ನೆಲವನ್ನು ಅಗೆದು ಮೊದಲಿದ್ದ ಹೊಂಡವನ್ನುತೆರೆದ ನಂತರ ಗ್ರಾಮದಲ್ಲಿ ಸಾವು-ನೋವು ಸಂಭವಿಸುತ್ತಿಲ್ಲವೆಂದು ಗ್ರಾಮಸ್ಥರು ನಿಟ್ಟುಸಿರು ಬಿಟ್ಟರು.
- ವರದಿ: ಮಲ್ಲಿಕಾರ್ಜುನ ತುಂಗಳ ಮುಖ್ಯ ವರದಿಗಾರರು ಬಾಗಲಕೋಟೆ

*ಆಗಿದ್ದೇನು ಗೊತ್ತೆ ವೀಕ್ಷಕರೆ?*

 ನಾವಲಗಿ ಗ್ರಾಮದಲ್ಲಿ ಪ್ರತಿ ವರ್ಷವೂ ಕಾರ್ತಿಕೋತ್ಸವ ನಿಮಿತ್ತ ಹಾಲೋಕಳಿ ಹಾಗು ನೀರೋಕಳಿಯೊಂದಿಗೆ ವಾರ ಹಿಡಿಯುವ ಪ್ರತೀತಿ ಇದೆ. ಪ್ರಸಕ್ತ ವರ್ಷ ಯಾವದೇ ರೀತಿ ಧಾರ್ಮಿಕ ಕಾರ್ಯವನ್ನು ಸಮರ್ಪಕವಾಗಿ ಗ್ರಾಮಸ್ಥರು ನಡೆಸಿಲ್ಲವೆಂಬುದು ಹಾಗು ಹೊಂಡವನ್ನು ಸಂಪೂರ್ಣ ಮುಚ್ಚಿದ್ದರ ಪರಿಣಾಮ ಗ್ರಾಮಕ್ಕೆ ಈ ಕೇಡುಗಾಲ ಬಂದಿದೆ ಎಂದು ಅಲ್ಲಿನ ಹಿರಿಯರ ಹಾಗು ಸಾರ್ವಜನಿಕರವಾದ.

ಒಟ್ಟಾರೆ ರವಿವಾರದಿಂದ ಗ್ರಾಮದಲ್ಲಿ ಸಾವಿನ ಸಂಖ್ಯೆ ನಿಯಂತ್ರಣದಲ್ಲಿರುವದು ವಿಶೇಷ.
ವರದಿ