ಕೆಲವೇ ದಿನಗಳ ಹಿಂದೆ ಡಾರ್ಲಿಂಗ್ ಕೃಷ್ಣ ಮತ್ತು ರಚಿತಾರಾಮ್ ಅಭಿನಯದ ಹೊಸ ಚಿತ್ರಕ್ಕೆ 'ಲವ್ ಮಿ ಆರ್ ಹೇಟ್ ಮಿ' ಎಂದು ಹೆಸರಿಡಲಾಗಿದೆ ಅಂತ ಸುದ್ದಿಯಾಗಿತ್ತು. ಈಗ ಆ ಚಿತ್ರದ ಕುರಿತು ವಿವಾದದ ಶೀರ್ಷಿಕೆ ಎನ್ನುವಂತಾಗಿದೆ . ಈ ಹಿಂದೆ 'ಸೈಕೊ' ಎಂಬ ಕನ್ನಡ ಚಲನಚಿತ್ರದ ನಿರ್ದೇಶಕ ವಿ. ದೇವದತ್ತ ರವರು ಈ ಕುರಿತಂತೆ 'ಲವ್ ಮಿ ಆರ್ ಹೇಟ್ ಮಿ' ಶೀರ್ಷಿಕೆಯನ್ನು 30/11/2020 ರಂದೇ ಶ್ರೀ ವೆಂಕಟೇಶ್ವರ ಇಂಟೆರ್ ನ್ಯಾಷನಲ್ ಸಂಸ್ಥೆಯ ಅಡಿಯಲ್ಲಿ ನೋಂದಾಯಿಸಲಾಗಿತ್ತು ಅಲ್ಲದೇ 04/01/2021ರಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಚಲನಚಿತ್ರ ಅನುಮತಿ ಪತ್ರ ಕೂಡಾ ಪಡೆಯಲಾಗಿದೆ ಎಂದು ದಾಖಲೆ ಸಹ ಪತ್ರಿಕೆಗಳಿಗೆ ತಿಳಿಸಿದ್ದಾರೆ.
ಫ್ರೀ-ಪ್ರೊಡಕ್ಷನ್ ಕೆಲಸಗಳನ್ನು ಮುಗಿಸಿ ಇನ್ನೇನು ಚಿತ್ರೀಕರಣಕ್ಕೆ ಹೋಗಬೇಕು ಎನ್ನುವಷ್ಟರಲ್ಲಿ ಲಾಕ್ ಡೌನ್ ಆಗಿದೆ. ಲಾಕ್ ಡೌನ್ ಮುಗಿದ ಮೇಲೆ ಚಿತ್ರೀಕರಣ ಪ್ರಾರಂಭಿಸುವ ಯೋಜನೆ ಹಾಕಿಕೊಂಡಿದ್ದ ವಿ. ದೇವದತ್ತ ಅವರಿಗೆ, ಅದೇ ಹೆಸರಿನ ಇನ್ನೊಂದು ಚಿತ್ರ ತಯಾರಾಗುತ್ತಿರುವ ಸುದ್ದಿ ಕೇಳಿ ಶಾಕ್ ಆಗಿದೆ ಎಂದಿದ್ದಾರೆ.
ಡಾರ್ಲಿಂಗ್ ಕ್ರಷ್ಣ ಮತ್ತು ರಚಿತಾ ರಾಮ್ ನಟನೆಯ ಚಿತ್ರಕ್ಕೆ ಈ ಟೈಟಲ್ ಬಿಟ್ಟು ಕೊಡಲು ಸಾಧ್ಯವಿಲ್ಲ ಎಂದಿದ್ದಾರೆ ನಿರ್ದೇಶಕ ವಿ.ದೇವದತ್ತ.
Social Plugin