ಕೋವಿಡ್ ನಿಯಮ ಉಲ್ಲಂಘಸಿ ಮದುವೆ ಮಾಡಿದ್ದಕ್ಕೆ 20000 ದಂಡ....
ವರದಿ :ಮಲ್ಲಿಕಾರ್ಜುನ ಘೋಸರವಾಡ
ಘಟಪ್ರಭಾ : ನಲ್ಲನಟ್ಟಿ ಗ್ರಾಮದಲ್ಲಿ ನಿನ್ನೆ ರವಿವಾರ ದಿನಾಂಕ.31ರಂದು ಅನುಮತಿ ಇಲ್ಲದೆ ಮದುವೆ ಸಮಾರಂಭ ಜರುಗಿಸಿ ಲಾಕ್ ಡೌನ್ ನಿಯಮ ಉಲ್ಲಂಘನೆ ಮಾಡಿದ್ದಕ್ಕೆ 20000/ ದಂಡ ವಿಧಿಸಲಾಗಿದೆ.
ನಲ್ಲನಟ್ಟಿ ಗ್ರಾಮದ ದಶರಥ ಯಶವಂತ ಪಾಟೀಲ ಎನ್ನುವವರು ಮದುವೆ ಸಮಾರಂಭವನ್ನು ಆಯೋಜಿಸಿದ್ದು ತಿಳಿದು ಬಂದಿದ್ದು, ಕೂಡಲೇ ಪಂಚಾಯತ್ ಅಭಿರುದ್ದಿ ಅಧಿಕಾರಿಗಳು,ಗ್ರಾಮ ಲೆಕ್ಕಾಧಿಕಾರಿ ಮತ್ತು ಘಟಪ್ರಭಾ ಠಾಣೆಯ ಆರಕ್ಷಕ ನಿರೀಕ್ಷಕರು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಆಗಮಿಸಿ ದಂಡ ವಿಧಿಸಿ ಜನರನ್ನು ತೆರವುಗಿಳಿಸಿದ್ದಾರೆ. ಇಂತಹ ಉಲ್ಲಂಘನೆಗಳು ಜರುಗದಂತೆ ಎಲ್ಲ ಸಾರ್ವಜನಿಕರು ಲಕ್ಷವಹಿಸಬೇಕು ಎಂದು ಗೋಕಾಕ ತಹಸೀಲ್ದಾರ ಪ್ರಕಾಶ ಹೊಳೆಪ್ಪಗೋಳ ತಿಳಿಸಿದ್ದಾರೆ.
Social Plugin