ವರದಿ : ವಿಜಯ ವಾಜಂತ್ರಿ
ತೇರದಾಳದ ಪುರಸಭೆ ಆವರಣದ ಬಯಲು ರಂಗ ಮಂದಿರದಲ್ಲಿ ಪೌರ ಕಾರ್ಮಿಕರಿಗೆ ಸದಾಶಿವ ಹೊಸಮನಿ ಹ್ಯಾಂಡ್‍ಕ್ಲೋಸ್ ಹಾಗೂ ಮಾಸ್ಕ್ ವಿತರಿಸಿದರು.
 
ಪೌರ ಕಾರ್ಮಿಕರಿಗೆ ಹ್ಯಾಂಡ್‍ಕ್ಲೋಸ್ ಹಾಗೂ ಮಾಸ್ಕ್ ವಿತರಣೆ
ತೇರದಾಳ : ಪುರಸಭೆ ಕೋವಿಡ್ ಅನುದಾನದಲ್ಲಿ ಪೌರ ಕಾರ್ಮಿಕರಿಗೆ ಪುರಸಭೆ ವತಿಯಿಂದ ಹ್ಯಾಂಡ್‍ಕ್ಲೋಸ್ ಹಾಗೂ ಮಾಸ್ಕ್ ನ್ನು  ಫುರಸಭೆ ಅಧ್ಯಕ್ಷೆ ಅನ್ನಪೂರ್ಣ ಹೊಸಮನಿ ಅವರ ಪತಿ ಸದಾಶಿವ ಹೊಸಮನಿ ವಿತರಿಸಿದರು.
   ಪಟ್ಟಣವನ್ನು ಸ್ವಚ್ಚವಾಗಿಡುವ ಪೌರ ಕಾರ್ಮಿಕರಿಗೆ ವರ್ಷದಲ್ಲಿ ನಾಲ್ಕು ಸಾರಿ ಮಾಸ್ಕ್ ಹಾಗೂ ಹ್ಯಾಂಡ್ ಕ್ಲೋಸ್ ವಿತರಿಸಬೇಕು ಎಂದು ಸರಕಾರದ ಆದೇಶದ ಮೇರೆಗೆ ಇಂದು ಒಂದು ಜೊತೆ ಹ್ಯಾಂಡ್‍ಕ್ಲೋಸ್ ಹಾಗೂ ಮಾಸ್ಕ್ ನ್ನು ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಮಹಾಮಾರಿ ಕೊರೊನಾ ಎಲ್ಲೆಲ್ಲೂ ಅರ್ಭಟ ನಡೆಸಿದೆ. ಅದಕ್ಕಾಗಿ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸ್ಯಾನಿಟೈಜರ್ ದಿಂದ ಆಗಾಗ ಕೈತೊಳೆಯಬೇಕು. ಮತ್ತು ಸಾಮಾಜಿಕ ಅಂತರವನ್ನು ಕಾಯ್ದಕೊಳ್ಳುವುದು ಅಗತ್ಯವಾಗಿದೆ. ಅನಗತ್ಯವಾಗಿ ಹೊರ ಬರದೆ ಮನೆಯಲ್ಲಿಯೇ ಇದ್ದು ಕೊರೊನಾ ಹರಡುವುದನ್ನು ತಡೆಗಟ್ಟಬೇಕು. ಸರಕಾರದ ನಿಯಮಗಳನ್ನು ಪಾಲಿಸುವುದರ ಜೊತೆಗೆ ಮನೆಯಲ್ಲಿಯೇ ಇದ್ದು ಕೊರೊನಾ ತಡೆಗಟ್ಟಲೂ ನಾವೆಲ್ಲರೂ ಸರಕಾರದ ಜೊತೆಗೆ ಕೈಜೋಡಿಸೋಣ. ಕೊರೊನಾ ವಾರಿಯರ್ಸ್‍ಗಳಾದ ಪೋಲಿಸರು ಹಾಗೂ ವೈದ್ಯರುಗಳು ತಮ್ಮ ಜೀವದ ಹಂಗು ತೊರೆದು, ತಮ್ಮೆಲ್ಲ ಕುಟುಂಬಗಳನ್ನು ಮರೆತು ನಮ್ಮೆಲ್ಲರ ಸಲುವಾಗಿ ಹೋರಾಟ ಮಾಡುತ್ತಿದ್ದಾರೆ. ಅದಕ್ಕಾಗಿ ನಾವೆಲ್ಲರೂ ಮನೆಯಲ್ಲಿಯೇ ಇದ್ದು ಕೊರೊನಾ ಹರಡುವುದನ್ನು ತಡೆಯೋಣ ಎಂದರು.
   ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ವಿನಾಯಕ ಬಂಕಾಪೂರ, ಸಂತೋಷ ಜಮಖಂಡಿ, ಶಂಕರ ಕುಂಬಾರ, ಸಚೀನ ಕೊಡತೆ, ಜೆಇ ಎಸ್.ಪಿ.ಮಾತಾಳೆ, ಭಾಗ್ಯಶ್ರಿ ಪಾಟೀಲ, ಹನಮಂತ ಮಾಳಗಿ ಸೇರಿದಂತೆ ಪೌರ ಕಾರ್ಮಿಕರು ಇದ್ದರು.