"ಬದುಕುವ ಹಕ್ಕು" ಸಂವಿಧಾನ ನಮಗೆ ಒದಗಿಸಿ ಕೊಟ್ಟ "ಮೂಲಭೂತ ಹಕ್ಕು."
- - - - - - - - - 

ಹಾಗಿರುವಾಗ, ಬದುಕೋದಕ್ಕೆ ಉಸಿರಾಡಬೇಕಾ? 
ಆಮ್ಲಜನಕ ಬೇಕಾ? 
ಎಷ್ಟು ಬೇಕು? 
...ಅಂತೆಲ್ಲ ಕೋರ್ಟಿನಲ್ಲಿ ಸಮಯ ಕಳೆಯೋದಕ್ಕೆ ನಾಚಿಕೆ ಆಗಲ್ವಾ ನಿಮಗೆ? 
ಅದನ್ನೂ ಕೋರ್ಟು ಹೇಳಬೇಕಾ?
ನೂರಕ್ಕೆ 98 ಜನಕ್ಕೆ ಕೊರೊನಾದಿಂದ ಏನೂ ಆಗೋದಿಲ್ಲ ಅಂತ ವಿಜ್ಞಾನವೇ ಹೇಳಿದೆ. ಅವರನ್ನು ಬದುಕಿಸಿದೆವು ಎಂದು ಕಡಿದು ಕಟ್ಟೆಹಾಕಿದ ಕಥೆ ಹೇಳ್ಬೇಡಿ. ಜನ ನಗ್ತಾರೆ. ಯಾಕೆಂದ್ರೆ, ನಿಮ್ಮ ಸೋಂಕಿತರ ಪಟ್ಟಿಯಲ್ಲಿ ಬರದೆ ತಮ್ಮಷ್ಟಕ್ಕೆ ತಾವೇ ಕೊರೊನಾ ರೋಗ ಗುಣ ಮಾಡಿಕೊಂಡವರು, ಕಳೆದೊಂದು ವರ್ಷದಲ್ಲಿ ನಿಮ್ಮ ಪಟ್ಟಿಯ ಹತ್ತುಪಟ್ಟು ಇದ್ದಾರೆ.
ನಿಮ್ಮ ಜವಾಬ್ದಾರಿ ಇದ್ದದ್ದು, ಉಳಿದ 2% ಜನರಲ್ಲಿ ಎಷ್ಟು ಜನರನ್ನು ಬದುಕಿಸಿದಿರಿ ಎಂದು ಹೇಳುವುದು. ಆ ಲೆಕ್ಕ ಕೊಡಿ. ಆ 2% ಅಲ್ಲದೆ, ಮಧ್ಯಮ ಪ್ರಮಾಣದ ತೊಂದರೆ ಇದ್ದು ಆಕ್ಸಿಜನ್ ಬೇಕಾಗಿರುವರು ದೇಶದಾದ್ಯಂತ ತೀರಿಕೊಂಡರಲ್ಲಾ, ಆ ಪ್ರತೀ ಜೀವವೂ ಕೂಡ ವ್ಯವಸ್ಥೆ ಸರಿಯಾಗಿದ್ದರೆ ಬದುಕಬಹುದಾಗಿದ್ದ ಜೀವಗಳು. ಆ ಪ್ರತಿಯೊಂದು ಸಾವಿಗೂ ನೀವೇ ಹೊಣೆ… ಅದು ನಿಮ್ಮ ಸಾಂವಿಧಾನಿಕ ಬದ್ಧತೆಯ ವೈಫಲ್ಯ ಅಂತ ಒಪ್ಪಿಕೊಳ್ಳಿ.
ಈ ವೈಫಲ್ಯಗಳನ್ನು ಮರೆಮಾಚುವ ಕಪಟ ಆಟಗಳು, ಭ್ರಷ್ಟಾಚಾರ, ಪಕ್ಷಪಾತ, ರಾಜಕೀಯ, ಧರ್ಮ, ದ್ವೇಷ ಎಲ್ಲ ಬೇಡ. ಜನ ನಿಮ್ಮನ್ನು ಗಮನಿಸ್ತಿದ್ದಾರೆ.
ಎಲ್ಲರನ್ನೂ ಒಟ್ಟಿಗೆ ಸೇರಿಸಿಕೊಂಡು ಮುಂದುವರಿಯುವುದು ಸಾದ್ಯ ಆಗದಿದ್ದರೆ, ದೇಶದ ಜನತೆಯ ಕ್ಷಮೆ ಕೇಳಿ ಹಿಂದೆ ಸರಿಯಿರಿ. ಸರ್ವಪಕ್ಷ ವ್ಯವಸ್ಥೆಯೊಂದು ಈ ಕ್ರೈಸಿಸ್ ಮುಗಿಯುವ ತನಕ ದೇಶದ ಚುಕ್ಕಾಣಿ ಹಿಡಿದು, ವಿಷಯ ಪರಿಣತರು ಜಗನ್ಮಾರಿ ನಿಭಾಯಿಸುವ ಸ್ಥಾನಗಳಲ್ಲಿ ಕೆಲಸ ಮಾಡಲಿ. ಭಾರತದ ಮತದಾರನ ಮಾತು....