ಕೊಟ್ಟೋರು ಯಾರು.. ತಗೊಂಡೋರು ಯಾರು?
- - - - - - - - - -
 ನಿಮಗೆ ಇಲ್ಲೊಂದು ಒಳ್ಳೆಯ ಸ್ಟೋರಿ ಲೀಡ್ ಇದೆ. ಗಮನಿಸಿ.
ಇಂದು ಬ್ರಿಟಿಷ್ ಗಾರ್ಡಿಯನ್ ಪತ್ರಿಕೆಯಲ್ಲಿ ಒಂದು ಪೂರ್ಣ ಪುಟ ಜಾಹೀರಾತು ಗಮನಿಸಿದೆ. ಅದು ಬ್ರಿಟನ್ನಿನ ರೆಡ್ ಕ್ರಾಸ್ ಸಹಿತ 14ಚಾರಿಟಿ ಸಂಸ್ಥೆಗಳನ್ನೊಳಗೊಂಡ ಡಿಸೀಸ್ ಎಮರ್ಜನ್ಸಿ ಕಮಿಟಿ (DEC) ಹೊರಡಿಸಿದ ಜಾಹೀರಾತು. ಅದರಲ್ಲಿ ಭಾರತದ ಕೋವಿಡ್ ದುರಂತದಬಗ್ಗೆ, ಪರಿಸ್ಥಿತಿ ಕೈಮೀರಿರುವ ಬಗ್ಗೆ ವಿವರಗಳಿದ್ದು, ಆರ್ಥಿಕ ಸಹಾಯ ನೀಡುವಂತೆ ಬ್ರಿಟಿಷ್ ಜನತೆಯನ್ನು ಕೋರಲಾಗಿದೆ.

ಅದನ್ನು ಕಂಡು, ಕಸಿವಿಸಿ ಆಗಿ, ಇದೇನಪ್ಪ ಅಂದ್ಕೊಂಡು ಬ್ರಿಟಿಷ್ ರೆಡ್‌ಕ್ರಾಸ್ ಅಧಿಕೃತ ವೆಬ್‌ಸೈಟಿಗೆ ಹೋದರೆ, ಅಲ್ಲಿ ಆ ಜಾಹೀರಾತು ಅಧಿಕೃತ ಎಂದು ಗೊತ್ತಾಯಿತು. ಅವರ ಪ್ರಕಾರ Over 46,000 Red Cross staff and volunteers across India are supporting Covid-19 response efforts - providing oxygen, ambulance services, first aid, and PPE. But there are so many people who need our vital help. (ವಿವರಗಳನ್ನು ಇಲ್ಲಿ ನೋಡಿ: https://donate.redcross.org.uk/appeal/global-coronavirus-appeal)
ನಾನು ಮೊದಲಿನಿಂದಲೂ ಈ ಕೋವಿಡ್ ಗದ್ದಲ ಶುರುವಾದ ಬಳಿಕ, ಸ್ವತಃ ರಾಷ್ಟ್ರಪತಿಗಳೇ ಅಧ್ಯಕ್ಷರಾಗಿರುವ ರೆಡ್‌ಕ್ರಾಸ್ ಸಂಸ್ಥೆ ಈ ಜಗನ್ಮಾರಿಯ ಪರಿಹಾರ ಕಾರ್ಯದಲ್ಲಿ ಮುಂಚೂಣಿಯಲ್ಲಿರಬೇಕೆಂದು ವಾದಿಸುತ್ತಾ ಬಂದವನು. ಅದು ಸರಿಯಾದ ಹಾದಿ ಕೂಡ.
ಈ ಹಿನ್ನೆಲೆಯಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ವೆಬ್‌ಸೈಟಿಗೆ ಹೋಗಿ ನೋಡಿದರೆ, ಅಲ್ಲಿ ವಿದೇಶಗಳಿಂದ ಬಂದ ನೆರವಿನ (ಬ್ರಿಟನ್ ಸೇರಿದಂತೆ) ವಿವರಗಳಿವೆ. ಅದರಲ್ಲಿ ಆಕ್ಸಿಜನ್ ಕಾನ್ಸೆಂಟ್ರೇಟರ್‌ಗಳು, ಬೈಪಾಪ್ ಯಂತ್ರಗಳು, ವೆಂಟಿಲೇಟರ್‌ಗಳು, ಬೆಡ್ ಸೈಡ್ ಮಾನಿಟರ್‌ಗಳು, ಔಷಧಿಗಳು ಬಂದಿಳಿದ ಮಾಹಿತಿ ಇದೆ. (ವಿವರಗಳಿಗೆ:https://www.indianredcross.org/ircs/index.php)

ಆದರೆ, ಕುತೂಹಲಕರ ಸಂಗತಿ ಏನೆಂದರೆ, ಸದ್ಯ ಭಾರತದೊಳಗೆ ಬರುತ್ತಿರುವ ಎಲ್ಲ ಇಂತಹ ಸಲಕರಣೆಗಳನ್ನೂ PMCARES ನಿಧಿಯಿಂದ ಕೊಡಮಾಡಲಾಗುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡುತ್ತಿವೆ ಮತ್ತು ಅಂತಹ ಉಪಕರಣಗಳ ಮೇಲೆ ಸ್ಟಿಕರ್‌ಗಳನ್ನು ತೋರಿಸುವ ಫೋಟೋಗಳನ್ನೂ ನಾನು ಮಾಧ್ಯಮಗಳಲ್ಲಿ ಕಂಡಿದ್ದೇನೆ. 
ಕೇಂದ್ರ ಸರ್ಕಾರ ಕೊರೊನಾಕ್ಕೆ ಸಂಬಂಧಿಸಿದಂತೆ ವಿದೇಶಗಳಿಂದ ಸಹಾಯ ಸ್ವೀಕರಿಸಲು SOPಒಂದನ್ನು ಮೊನ್ನೆ ಮೇ 2ರಂದು ಬಿಡುಗಡೆ ಮಾಡಿದ್ದು, ಅದರಲ್ಲಿ ಈ ಎಲ್ಲ ವಿದೇಶೀ ಕೊಡುಗೆಗಳು ಭಾರತ ಸರ್ಕಾರ ಒದಗಿಸುತ್ತಿರುವ ಸಹಾಯಕ್ಕೆ ಹೆಚ್ಚುವರಿಯಾದ ಸಹಾಯಗಳು ಮತ್ತು ರಾಜ್ಯಗಳಿಗೂ ಅವು ಹೆಚ್ಚುವರಿ ಸಹಾಯ ಎಂದು ಸ್ಪಷ್ಟವಾಗಿ ಹೇಳಿದೆ (ವಿವರಗಳಿಗೆ: https://www.indianredcross.org/ircs/sites/default/files/SoP_Recv_Donations_Govt_abroad.pdf )

ಹಾಗಾಗಿ, ನನ್ನ ಪ್ರಶ್ನೆ ಇಷ್ಟು:
>>ಕರ್ನಾಟಕಕ್ಕೆ ಈ ತನಕ ಕೋವಿಡ್ ಸಂಬಂಧಿ ಉಪಕರಣಗಳು PM CARES ಮೂಲಕ ಬಂದದ್ದೆಷ್ಟು?
>> ಕರ್ನಾಟಕಕ್ಕೆ ಈ ತನಕ ಕೋವಿಡ್ ಸಂಬಂಧಿ ಉಪಕರಣಗಳು ರೆಡ್‌ಕ್ರಾಸ್ ಮೂಲಕ ಅಥವಾ ಬೇರೆ ವಿದೇಶದಿಂದ ಸಂಗ್ರಹಿಸಲಾದ ಮೂಲದಿಂದ ಬಂದದ್ದೆಷ್ಟು?
>> ಕರ್ನಾಟಕಕ್ಕೆ ಕೇಂದ್ರ ಸರ್ಕಾರ ತನ್ನ ಖಾತೆಯಿಂದ ಒದಗಿಸಿದ ಸಹಾಯ-ಉಪಕರಣ ಇತ್ಯಾದಿಗಳು (ಬಜೆಟರಿ ಅಲೊಕೇಷನ್‌ನಿಂದ) ಎಷ್ಟು?
ಈಗಾಗಲೇ ಕೊರೊನಾ ಸಂಬಂಧಿ ಭ್ರಷ್ಟಾಚಾರ ಇತ್ಯಾದಿಗಳು ಬಹಳ ಚರ್ಚೆಯಲ್ಲಿರುವುದರಿಂದ ಇವು ಬಹಳ ಪ್ರಸ್ತುತವಾದ ಪ್ರಶ್ನೆ ಮತ್ತು ಇದನ್ನು ಕೇಂದ್ರ – ರಾಜ್ಯ ಸರ್ಕಾರಗಳು ಮತ್ತು ಭಾರತೀಯ ರೆಡ್‌ಕ್ರಾಸ್ ಪಾರದರ್ಶಕವಾಗಿರಿಸಬೇಕೆಂಬುದು ಭಾರತೀಯ ರೆಡ್‌ಕ್ರಾಸ್ ನ ಆಜೀವ ಸದಸ್ಯನಾಗಿ ನನ್ನ ವಿನಂತಿ. ಮಾಧ್ಯಮಗಳು ಈ ನಿಟ್ಟಿನಲ್ಲಿ ಗಮನ ಹರಿಸಿ ತಮ್ಮ ಕರ್ತವ್ಯವನ್ನು ನಿರ್ವಹಿಸಬೇಕು.
ಲೇಖನ : ರಾಜಾರಾಮ್ ತಲ್ಲೂರ್

Social Distancing: Stay Home, Stay Safe & Protect Others
👆SWARUPA SANDARSHAN
      ಸ್ವರೂಪ ಸಂದರ್ಶನ

#COVID19