ಕೇವಲ 10×10 ಚದುರ ಅಡಿಯಿಂದ ಪ್ರಾರಂಭವಾದ ಇವರ ಪುಸ್ತಕಯಾನ ಇಂದು ಒಂದು ಲಕ್ಷಕ್ಕೂ ಅಧಿಕ ಚದುರ ಅಡಿಯವರೆಗೆ ಭಾರತಾಧ್ಯಾಂತ ಹರಡಿಕೊಂಡಿದೆ, ಸ್ವತಃ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಮಾಡಿದ್ದು ಅಲ್ಲದೆ ದೇಶದ ಸಾವಿರಾರು ಪ್ರಕಾಶಕರ ಪುಸ್ತಕಗಳು ಓದುಗರ ಮನೆ ಮನ ಸೇರುತ್ತಿದ್ದುದ್ದು ಸಪ್ನದ ಆಶ್ರಯ ದಲ್ಲಿ, ನಾಡಿನ ಲಕ್ಷಾಂತರ ಓದುಗರು ಸಾವಿರಾರು ಲೇಖಕರು ನೂರಾರು ಪ್ರಕಾಶಕರಿಗೆ ಸರಸ್ವತಿ ಮಂದಿರವಾಗಿದೆ ಸಪ್ನ, ಅಷ್ಟೇ ಅಲ್ಲದೆ ಕನ್ನಡದ ಸಾವಿರಾರು ಯುವಕರಿಗೆ ಉದ್ಯೋಗ ಕೊಟ್ಟು ಅವರ ಮನೆ ಮನಗಳನ್ನು ಬೆಳಗುತ್ತಿರುವ ಕೀರ್ತಿ ಸಪ್ನಕ್ಕೆ ಸಲ್ಲುತ್ತದೆ, ಅವರು ಅಗಲಿಕೆ ಸಪ್ನ ಕುಟುಂಬಕ್ಕೆ ಅಷ್ಟೇ ಅಲ್ಲ ನಾಡಿನ ಸಾಹಿತ್ಯ ಮತ್ತು ಪುಸ್ತಕ ಜಗತ್ತಿಗೆ ತುಂಬಾಲಾರದ ನಷ್ಟವಾಗಿದೆ
ಭಾರತೀಯ ಪುಸ್ತಕೋದ್ಯಮದ ಇತಿಹಾಸದಲ್ಲಿ ನಿಮ್ಮ ಹೆಸರು ಹಾಗೂ " ಸಪ್ನ ಬುಕ್ ಹೌಸ್ " ಅಜರಾಮರವಾಗಿ ಇರುತ್ತದೆ, ನಿಮ್ಮ ಮಕ್ಕಳ ಸಮೇತ ಇಡೀ ಕುಟುಂಬವನ್ನೇ ಪುಸ್ತಕ ಜಗತ್ತಿಗೆ ಅರ್ಪಿಸಿದ್ದೀರಾ
ನೀವು ದೈಹಿಕ ವಾಗಿ ನಮ್ಮ ಜೊತೆ ಇಲ್ಲದಿದ್ದರೂ ಸಹ ನಿಮ್ಮ ಸಪ್ನದ ಮೂಲಕ ಕನ್ನಡಿಗರ ಮನಸ್ಸಿನಲ್ಲಿ ಸದಾ ಜೀವಂತವಾಗಿದ್ದೀರಾ ಸರ್
ಮತ್ತೊಮ್ಮೆ ಹುಟ್ಟಿ ಬನ್ನಿ

Social Plugin