ಕೋವಿಡ್‍ಗಿಂತ ಅದರ ತಪ್ಪು ಮ್ಯಾನೇಜ್ಮೆಂಟೇ ಹೆಚ್ಚು ಅಪಾಯಕಾರಿ!
- - - - - - - - - - 
ಕೊವಿಡ್ ನಿರ್ವಹಣೆಯನ್ನು ಅರ್ಥ ಮಾಡಿಕೊಳ್ಳದೇ ಬೇಕಾಬಿಟ್ಟಿ ವ್ಯವಹರಿಸಿದ್ದೇ ಈವತ್ತಿನ ಸ್ಥಿತಿಗೆ ಕಾರಣ ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ. ನಮ್ಮಲ್ಲಿ ಡಾ|ಶ್ರೀನಿವಾಸ ಕಕ್ಕಿಲ್ಲಾಯರು, ದೇಶದ ಮತ್ತು ಜಗತ್ತಿನಾದ್ಯಂತ ಸಾಂಕ್ರಾಮಿಕ ರೋಗಗಳ ಪರಿಣತರು ಆರಂಭದಿಂದಲೇ ಎಚ್ಚರಿಸುತ್ತಾ ಬಂದ ಕೆಲವು ಸಂಗತಿಗಳನ್ನು ಇಲ್ಲಿ ಮತ್ತೆ ನೆನಪಿಸುತ್ತೇನೆ. ಆ ಬಳಿಕ ಕೆಳಗಿನ ಸುದ್ದಿಗಳನ್ನೊಮ್ಮೆ ಓದಿ. ಅಂದ ಹಾಗೆ ಅವಲ್ಲವೂ ಈವತ್ತಿನದೇ ದಿನಪತ್ರಿಕೆಗಳಲ್ಲಿ ಕಾಣಿಸಿಕೊಂಡ ಸುದ್ದಿಗಳು.

೧. ರೋಗ ಲಕ್ಷಣ ತೀವ್ರಗೊಳ್ಳುವ, ಮಾರಣಾಂತಿಕ ಆಪಾಯಗಳಿರುವವರನ್ನು ರಕ್ಷಿಸಿ. ಉಳಿದವರಿಗೆ ಕೊರೊನಾ ಬಂದು ಹೋಗುತ್ತದೆ.
೨. ರೋಗ ಒಮ್ಮೆ ತೀವ್ರವಾಗಿ ಹರಡಿದ ಕಡೆ ಮತ್ತೆ ತೀವ್ರವಾಗಿ ಹರಡುವುದಿಲ್ಲ 
೩. ಆಸ್ಪತ್ರೆಗಳ ಸೀಮಿತ ವ್ಯವಸ್ಥೆಯನ್ನು ಮೀರಿ ಆಸ್ಪತ್ರೆಗಳಲ್ಲಿ ರೋಗಿಗಳನ್ನು ತುಂಬಿಸಿಕೊಂಡರೆ, ರೋಗಕ್ಕಿಂತ ಬೇರೆ ಕಾರಣಗಳಿಗೇ ಜನ ಅಪಾಯಕ್ಕೀಡಾಗಬಹುದು.
೪. ಔಷಧಿಗಳ ಅನಗತ್ಯ ಬಳಕೆ ಅಪಾಯಕಾರಿ.
೫. ಕೊವಿಡ್ ನಿರ್ವಹಣೆಯಲ್ಲಿ ರಾಜಕೀಯದ ಬದಲು ರೋಗ ನಿಯಂತ್ರಣದತ್ತ ಗಮನ ಇರಬೇಕು.
#GOVIDIOTS #COVID19 #Whocares