ಗ್ರಾಮಮಟ್ಟದಲ್ಲಿ ಕೊರೊನಾ ಇಳಿಮುಖ-ಸವದಿ
ರಬಕವಿ-ಬನಹಟ್ಟಿ,ಮೇ22: ತೇರದಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಗ್ರಾಮಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಇಳಿಕೆ ಪ್ರಮಾಣದಲ್ಲಿದ್ದು, ಗ್ರಾಮದ ಜನತೆ ಇದೇ ರೀತಿ ಸಾಮಾಜಿಕ ಅಂತರ, ಮಾಸ್ಕ್ ಧರಿಸುವ ಮೂಲಕ ನಿಯಮಗಳನ್ನು ಪಾಲಿಸಿದ್ದಲ್ಲಿ ಮತ್ತಷ್ಟು ಹತೋಟಿಗೆ ತರುವ ಮೂಲಕ ಸಂಪೂರ್ಣ ನಿರ್ಮೂಲನೆ ಮಾಡಲು ಸಾಧ್ಯವೆಂದು ತೇರದಾಳ ಶಾಸಕ ಸಿದ್ದು ಸವದಿ ತಿಳಿಸಿದರು.
ಸಮೀಪದ ಜಗದಾಳ ಗ್ರಾಮದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದಲ್ಲಿ ಸಾವು-ನೋವುಗಳ ಸಂಖ್ಯೆ ತೀರಾ ಕಡಿಮೆಯಾಗಿದ್ದು, ಕೊರೊನಾ ಮುಕ್ತ ಗ್ರಾಮಗಳಾಗಿ ಮಾಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು. ಗ್ರಾಮದಲ್ಲಿ ಸ್ವಚ್ಛತೆಯ ಬಗ್ಗೆ ಡಂಗುರ ಹಾಗು ಟಂಟಂ ಮೂಲಕ ಕೊರೊನಾ ಬಗ್ಗೆ ಮುನ್ನೆಚ್ಚರಿಕೆಯ ಜೊತೆಗೆ ಸ್ವತಃ ನಾನೂ ಸಹ ಜಾಗೃತಿ ಮೂಡಿಸುವಲ್ಲಿ ಕಾರಣವಾಗಿದ್ದು, ಎಲ್ಲರೂ ಸಹಕರಿಸುವದರ ಮೂಲಕ ಇನ್ನಷ್ಟು ದಿನ ಮನೆಯಲ್ಲಿಯೇ ಇರಿ ಎಂದು ಸವದಿ ತಿಳಿಸಿದರು.
ಗ್ರಾಮ ಪಂಚಾಯ್ತಿ ಅಧ್ಯಕ್ಷ ಸುರೇಶ ಅಸ್ಕಿ, ಉಪಾಧ್ಯಕ್ಷ ಕಮಲಾ ಜನವಾಡ, ತಹಶೀಲ್ದಾರ ಸಂಜಯ ಇಂಗಳೆ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸಂಜಯ ಹಿಪ್ಪರಗಿ, ಶಿವಪ್ಪ ಬಿರಾದಾರ, ಬಸವರಾಜ ಉಳ್ಳಾಗಡ್ಡಿ, ಮಲ್ಲಪ್ಪ ಉಳ್ಳಾಗಡ್ಡಿ, ಗುರುಪಾದ ಅಸ್ಕಿ, ಶಿವಾನಂದ ಕಚ್ಚು, ಸಿದ್ದಪ್ಪ ಬಿದರಿ, ಇಂದಿರಾ ಹಾದಿಮನಿ, ಪಿಡಿಓ ರಾಜಶೇಖರ ಗುದಗೇನ್ನವರ ಸೇರಿದಂತೆ ಆಶಾ ಹಾಗು ಅಂಗನವಾಡಿ ಕಾರ್ಯಕರ್ತರು ಹಾಜರಿದ್ದರು.

Social Plugin