ವರದಿ : ವಿಜಯ ವಾಜಂತ್ರಿ
ತೇರದಾಳದ ಸರಕಾರಿ ಆಸ್ಪತ್ರೆಯ ಸಮೀಪದಲ್ಲಿ ಕೊರೊನಾ ಲಸಿಕೆಯನ್ನು ಹಾಕಿಸಿಕೊಳ್ಳುವವರಿಗೆ ಕಾಂಗ್ರೆಸ್ ಪಕ್ಷದ ವತಿಯಿಂದ ಉಪಹಾರದ ವ್ಯವಸ್ಥೆಗೆ ಮಾಜಿ ಸಚಿವೆ ಉಮಾಶ್ರೀ ಚಾಲನೆ ನೀಡಿದರು.

ತೇರದಾಳ : ತಮ್ಮ ದ್ವೇಷದ ರಾಜಕಾರಣಕ್ಕೆ ಅಧಿಕಾರಿಗಳನ್ನು ಬಳಸಿಕೊಂಡು ತಮ್ಮ ಅಧಿಕಾರವನ್ನು ಬಳಸಿಕೊಂಡು ಹತ್ತಿಕ್ಕುವ ಕೆಲಸ ನಮ್ಮವರು ಯಾರೂ ರೌಡಿಗಳಲ್ಲ ಜನ ಸೇವಕರು. ಅವರ ಆತ್ಮ ಸ್ಥೈರ್ಯ ಕುಗ್ಗಿಸಲು ನಿಮ್ಮಿಂದ ಆಗುವುದಿಲ್ಲ. ನಮ್ಮದು ಯಾವಾಗಲೂ ಜನಪರ ಕೆಲಸವಾಗಿದೆ. ಅಧಿಕೃತವಾಗಿ ಸಾಮಾಜಿಕ ಜಾಲತಾನದಲ್ಲಿ ಕೆಲಸ ಮಾಡಲು ನೇಮಕ ಮಾಡಿರುವವರನ್ನು ಹಾಗೂ ಕಾಂಗ್ರೇಸ್ ಕಾರ್ಯಕರ್ತರನ್ನು ಟೀಕೆ, ಟಿಪ್ಪಣಿ, ಸಲಹೆ ಮಾಡುತ್ತಿರುವಂತ ಕಾಂಗ್ರೆಸ್‍ನ ಮತದಾರರು ಹಾಗೂ ಕಾರ್ಯಕರ್ತರ ಮೇಲೆ ಅಸಹನೆಯಿಂದ ಅಧಿಕಾರಿಗಳು ಅಧಿಕಾರ ದುರುಪಯೋಗ ಮಾಡಿಕೊಂಡು ನಮ್ಮವರನ್ನು ಹತ್ತಿಕ್ಕುವಂತ ಕೆಲಸವನ್ನು, ಅಧಿಕಾರುಳ್ಳವಂತವರು ಮಾಡುತ್ತಿದ್ದಾರೆ. ಅಧಿಕಾರಿಗಳ ಮೇಲೆ ಒತ್ತಡ ಹೇರಿ ನಮ್ಮ ಕಾರ್ಯಕರ್ತರನ್ನು ಕರೆದುಕೊಂಡು ಬಂದು ಪೋಲಿಸ್ ಠಾಣೆಯಲ್ಲಿ ಇರಿಸಿ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು, ದೌರ್ಜನ್ಯ ಮಾಡಿ ಹೆದರಿಸುವಂತ ಕೆಲಸ ನಡೆಯುತ್ತಿದೆ. ಇದು ಯಾವುದೇ ಕಾರಣಕ್ಕೂ ಆಗಬಾರದು ಎಂದು ಮಾಜಿ ಸಚಿವೆ ಉಮಾಶ್ರೀ ಹೇಳಿದರು.
   ಪಟ್ಟಣದ ಸರಕಾರಿ ಆಸ್ಪತ್ರೆಗೆ ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ಬರುವವರಿಗೆ ಉಪಹಾರದ ವ್ಯವಸ್ಥೆಗೆ ಚಾಲನೆ ನೀಡಿ ಮಾತನಾಡಿದ ಅವರು ಬಿಜೆಪಿಯವರು ಅವರ ಸಾಮಾಜಿಕ ಜಾಲತಾನದಲ್ಲಿ ಕೆಲಸ ಮಾಡುತ್ತಿರುವವರು ಆಗಲಿ ಕಾರ್ಯಕರ್ತರು ಆಗಲಿ ಟೀಕೆ, ಟಿಪ್ಪಣಿಗಳನ್ನು ಮಾಡಿದಾಗ ನಾವು ದೂರು ಕೊಡಲು ಹೋದಾಗ ನಮ್ಮ ಮುಖಂಡರನ್ನು, ಕಾರ್ಯಕರ್ತರನ್ನು ದೂರ ಸರಿಸಿ ಅವರನ್ನು ಹೆದರಿಸಿ ಹತ್ತಿಕ್ಕುವ ಕೆಲಸ ಪೋಲಿಸ್ ಠಾಣೆಗಳಲ್ಲಿ ನಡೆಯುತ್ತಿದೆ ಎಂಬ ಸುದ್ದಿ ನಮ್ಮ ಗಮನಕ್ಕೆ ಬಂದಿದೆ. ನಮ್ಮವರು ಯಾರೂ ರೌಡಿಗಳಲ್ಲ ಜನ ಸೇವಕರು. ನಮ್ಮ ಮಾನಸಿಕ ಸ್ಥೈರ್ಯವನ್ನು ಹತ್ತಿಕ್ಕುವ ಕೆಲಸ ಸಾಧ್ಯವಿಲ್ಲ. ಇದಕ್ಕೆ ಸಂಭಂದ ಪಟ್ಟ ಅಧಿಕಾರಿಗಳ ಜೊತೆ ನಾನು ಮಾತನಾಡಿದ್ದೇನೆ. ಯುವಕರನ್ನು, ಮುಖಂಡರನ್ನು ಹತ್ತಿಕ್ಕುವಂತ ಕೆಲಸ ವಿರೋಧ ಪಕ್ಷದವರು ಹಾಗೂ ಅಧಿಕಾರಿಗಳು ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ದೂರು ಕೊಡಲು ಹೋದಾಗ ಅವರುಗಳ ಮೇಲೆ ದೂರುಗಳನ್ನು ದಾಖಲಿಸಿಕೊಳ್ಳವಂತೆ ಬೆದರಿಕೆ ಹಾಕಿ, ಮಾನಸಿಕವಾಗಿ ಅವರನ್ನು ಹಿಂದೆ ಸರಿಸುವಂತ ಕೆಲಸ, ನೈತಿಕವಾಗಿ ಅವರನ್ನು ಕುಗ್ಗಿಸುವಂತ ಕೆಲಸ ತೇರದಾಳ ಮತಕ್ಷೇತ್ರದಲ್ಲಿ ನಡೆಯುತ್ತಿದೆ. ಇದು ಖಂಡನೀಯವಾದದ್ದು. ಮುಂದೊಂದು ದಿನ ಇದೇ ರೀತಿ ಅಧಿಕಾರಿಗಳು ನೆಡದುಕೊಂಡರೆ ಅಥವಾ ಅಧಿಕಾರ ಇರುವಂತವರು ನಡೆದುಕೊಂಡರೆ ಕಾಂಗ್ರೇಸ್ ಪಕ್ಷದವರು ಇದಕ್ಕೆ ತಕ್ಕ ಉತ್ತರವನ್ನು ಕೊಡುತ್ತೇವೆ. ಅದಾಗದಂತೆ ಅಧಿಕಾರಿಗಳು ಹಾಗೂ ಅಧಿಕಾರ ಇರುವಂತವರು ನೋಡಿಕ್ಕಳ್ಳುವ ಜವಾಬ್ದಾರಿಯಾಗಿದೆ. ಸಾರ್ವಜನಿಕರ ನೋವು, ಕಷ್ಟ ಸುಖಗಳನ್ನು ಹಂಚಿಕೊಳ್ಳವಂತದ್ದು ಅವರ ಜವಾಬ್ದಾರಿ. ಸಾಮಾಜಿಕ ಜಾಲತಾಣ ಕೇವಲ ಕಾಂಗ್ರೆಸ್ ಪಕ್ಷದವರಿಗೆ ಮಾತ್ರವಲ್ಲ, ಇದು ಬಿಜೆಪಿ ಪಕ್ಷದವರಿಗೂ  ಇದೆ. ಇದು ಇಡೀ ದೇಶದ ಜನತೆಗೆ ಸಂಭಂದ ಪಡುವಂತದ್ದಾಗಿದೆ. ಜನರ ಹಕ್ಕಿನ ವೇದಿಕೆ ಅದು. ನಮ್ಮ ಕಾರ್ಯಕರ್ತರನ್ನು ಹತ್ತಿಕ್ಕುವಂತ ಕೆಲಸವನ್ನು ಮಾಡಿದರೆ ಮುಂದಿನ ದಿನಗಳಲ್ಲಿ ನಿಮಗೆ ಸರಿಯಾದ ಉತ್ತರವನ್ನು ನಾವು ನಿಮಗೆ ಕೊಡಬೇಕಾಗುತ್ತದೆ ಎಂದರು.
  ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷ ಲಕ್ಷ್ಮಣ ದೇಸಾರಟ್ಟಿ, ಪಿ.ಎಸ್.ಮಾಸ್ತಿ, ಪ್ರಭು ಗಸ್ತಿ, ಪೈಜುಲ್ಲಾ ಇನಾಮದಾರ, ಆಧಿನಾಥ ಸಪ್ತಸಾಗರ, ಫಜಲ್ ಅತಾರಾವುತ್, ನೇಮಣ್ಣ ಸಾವಂತನವರ, ಕೃಷ್ಣಾ ದೊಡಮನಿ, ರಾಜೇಸಾಬ ನಗಾರ್ಜಿ, ಮೆಹಬೂಬ ಜಮಾದಾರ ಸೇರಿದಂತೆ ಇನ್ನಿತರರು ಇದ್ದರು.