ಕೋವಿಡ್-19 ಹಿನ್ನಲೆಯಲ್ಲಿ ಬನಹಟ್ಟಿ ನಗರದಲ್ಲಿ ಸರಕಾರದ ನಿಯಮ ಮೀರಿ ಅಂಗಡಿ ತೆಗೆದವರಿಗೆ ದಂಡ ವಿಧಿಸಿ ಎಚ್ಚರಿಕೆ ನೀಡಲಾಯಿತು. 

ನಿಯಮ ಉಲ್ಲಂಘಿಸಿದ ಅಂಗಡಿಕಾರರಿಗೆ ದಂಡ

ರಬಕವಿ-ಬನಹಟ್ಟಿ,ಮೇ23: ಕೋವಿಡ್-19 ತಡೆಗಟ್ಟುವ ನಿಟ್ಟಿನಲ್ಲಿ ಸರಕಾರ ಲಾಕ್‍ಡೌನ್ ವಿಧಿಸಿದ್ದು ಅದು ಯಾವುದೇ ಸಂಬಂಧವಿಲ್ಲದಂತೆ ಸರಕಾರದ ನಿಯಮಗಳನ್ನು ಮೀರಿ ಅಂಗಡಿ ತೆಗೆದವರಿಗೆ ನಗರಸಭೆ ಹಾಗೂ ಪೊಲೀಸ್ ಇಲಾಖೆ ವತಿಯಿಂದ ದಂಡ ವಿಧಿಸಲಾಯಿತು. 

ಪೌರಾಯುಕ್ತ ಶ್ರೀನಿವಾಸ ಜಾಧವ ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ಸರಕಾರ ಕಠಿಣ ನಿಯಮಗಳನ್ನು ವಿಧಿಸಿದ್ದು ಬೆಳ್ಳಿಗ್ಗೆ 6 ರಿಂದ 10ರ ವರೆಗೆ ಅಗತ್ಯ ವಸ್ತುಗಳಿಗೆ ಮಾತ್ರ ಅವಕಾಶ ನೀಡಿದ್ದು ಅದನ್ನು ಹೊರತು ಪಡಿಸಿ ಬೇರೆ ಯಾರಾದರೂ ಅಂಗಡಿ ಮುಗ್ಗಟ್ಟುಗಳನ್ನು ತೆಗೆದಿರುವುದು ಕಂಡು ಬಂದಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ತೆಗದುಕೊಳ್ಳಲಾಗುವುದು. ಅದಕ್ಕೂ ಮೀರಿ ಪದೇ ಪದೇ ತಪ್ಪ ಕಂಡು ಬಂದಲ್ಲಿ ಅಂತವರ ಮೇಲೆ ವಿಪತ್ತು ನಿರ್ವಹಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುವುದೆಂದರು.