ರಬಕವಿ ಬನಹಟ್ಟಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಾತ್ರೆಗಳ ಕಿಟ್ ತಯಾರಿಸಿಕೊಳ್ಳುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು
ಕೊರೊನಾ ನಿಯಂತ್ರಣಕ್ಕೆ ಔಷಧಿ ಕಿಟ್‍ಗಳೇ `ರಾಮಬಾಣ’
ರಬಕವಿ-ಬನಹಟ್ಟಿ,ಮೇ23: ತಾಲೂಕಿನಾದ್ಯಂತ ಲಾಕ್‍ಡೌನ್‍ದಷ್ಟೇ ಪ್ರಖರವಾಗಿ ಕಾರ್ಯನಿರ್ವಹಿಸುವಲ್ಲಿ ಸರ್ಕಾರಿ ಆಸ್ಪತ್ರೆಯ ಔಷಧಿ ಕಿಟ್ ಮನೆ-ಮನೆಗೆ ತಲುಪಿಸುವಲ್ಲಿ ಯಶಸ್ವಿ ಕಾಣುತ್ತಿರುವ ಆಶಾ ಹಾಗು ಅಂಗನವಾಡಿ ಕಾರ್ಯಕರ್ತೆಯರ ಕಾರ್ಯವೇ `ರಾಮಬಾಣ’ವಾಗಿದೆ.
ಸರ್ಕಾರದ ನಿಯಮಾವಳಿಯನ್ನು ತಿಳಿ ಹೇಳುತ್ತ, ಅನಾರೋಗ್ಯದಲ್ಲಿರುವ ಕುಟುಂಬಗಳಿಗೆ ತೆರಳಿ ರೋಗ ಲಕ್ಷಣಗಳಿರುವವರಿಗೆ ಔಷಧಿ ಕಿಟ್ ನೀಡುವದರ ಜೊತೆಗೆ ಜಾಗೃತಿ ಅಭಿಯಾನದಲ್ಲಿ ತೊಡಗಿರುವ ಕಾರ್ಯಕರ್ತೆಯರು ದಿನಂಪ್ರತಿ ತಯಾರಿಸಿಕೊಂಡ ಔಷಧಿಗಳನ್ನು ಪ್ರಾಮಾಣಿಕವಾಗಿ ಒದಗಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ಈಗಾಗಲೇ ನಾಲ್ಕೈದು ಸಾವಿರದಷ್ಟು ಔಷಧಿ ಕಿಟ್‍ಗಳನ್ನು ತಾಲೂಕಿನಾದ್ಯಂತ ನೀಡಲಾಗಿದೆ. ಇದರಿಂದ ಸಾಕಷ್ಟು ಜನರಿಗೆ ಅನುಕೂಲವಾಗಿದ್ದು, ಇದರ ಪ್ರಯೋಜನವನ್ನು ಆಯಾ ವಾರ್ಡ್‍ಗಳ ಆಶಾ ಹಾಗು ಅಂಗನವಾಡಿ ಕಾರ್ಯಕರ್ತೆಯರಿಂದ ಪ್ರಯೋಜನ ಪಡೆದುಕೊಳ್ಳಬೇಕೆಂದು ಡಾ. ಎಂ.ಎನ್. ನದಾಫ್ ತಿಳಿಸಿದರು.
Social Plugin